ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಜನಸಾಮಾನ್ಯರು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಠಾಣೆಗೆ ಬಂದು ದೂರು ದಾಖಲಿಸಬಹುದು ಅಲ್ಲಿಯೂ ತಮ್ಮ ಸಮಸ್ಯೆಗೆ ಸ್ಪಂದನೆ ಸಿಗದಿದ್ದಲ್ಲಿ ನೇರವಾಗಿ ನನ್ನನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಸಾಲಿಗ್ರಾಮ ಸರ್ಕಲ್ ಇನ್ಸ್ ಪೆಕ್ಟರ್ ಶಶಿಕುಮಾರ್ ಅಭಯ ನೀಡಿದರು.
ಚುಂಚನಕಟ್ಟೆ ಗ್ರಾಮದ ಉಪ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಎಸ್ಸಿ ಎಸ್ಟಿ ಸಮುದಾಯದವರ ಕುಂದು ಕೊರತೆ ಸಭೆಯ ಕಾರ್ಯಕ್ರಮ ದಲ್ಲಿ ಮಾತನಾಡಿದ ಅವರು.
ಈ ಹಿಂದಿನ ತಿಂಗಳಲ್ಲಿ ನಡೆದ ಸಭೆಯಲ್ಲಿ ಹಲವು ಮುಖಂಡರು ತಿಳಿಸಿದ್ದ ಸಮಸ್ಯೆಗಳಿಗೆ ಕಾರ್ಯರೂಪದಲ್ಲಿ ಉತ್ತರ ನೀಡಿದ್ದೇವೆ. ಮದ್ಯ ಅಕ್ರಮ ಮಾರಾಟದ ಸಮಸ್ಯೆ ಹಾಗೂ ಬಾಲ್ಯ ವಿವಾಹ, ಅಪರಾಧ ತಡೆ, ಸೈಬರ್ ಕ್ರೈಂ ಬಗ್ಗೆ ಶಾಲಾ ಕಾಲೇಜಿನಲ್ಲಿ ಜಾಗೃತಿ ಸೇರಿದಂತೆ ಇನ್ನಿತರ ಕಾನೂನು ಬಾಹಿರ ಚಟುವಟಿಕೆಗಳ ಬಗ್ಗೆ ಕಾನೂನು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದರು.
ಇನ್ನು ಸಭೆಯಲ್ಲಿ ಚುಂಚನಕಟ್ಟೆ ಉಪ ಪೊಲೀಸ್ ಠಾಣೆಗೆ ಸುಮಾರು 120 ವರ್ಷ ಕಳೆದಿರುವ ಕಟ್ಟಡವನ್ನು ಮೇಲ್ದರ್ಜೆಗೆರಿಸಿ ಸೂಕ್ತ ಸೌಲಭ್ಯದ ಜತೆಗೆ ಹೆಚ್ಚಿನ ಸಿಬ್ಬಂದಿಗಳನ್ನು ನಿಯೋಜಿಸಬೇಕು ಎಂದು ಚುಂಚನಕಟ್ಟೆ ಕೃಷ್ಣ ಬೇಡಿಕೆ ಸಲ್ಲಿಸಿದರು.
ಬೇರ್ಯಾ ಗ್ರಾಮ ಸೇರಿದಂತೆ ಸುತ್ತ ಮುತ್ತ ಜೂಜ್ ಅಡುವವರ ಸಂಖ್ಯೆ ಹೆಚ್ಚಾಗಿದೆ, ಸಾಲಿಗ್ರಾಮ ಪಟ್ಟಣದ ಟ್ಯಾಂಕ್ ಬೀದಿ ಸೇರಿದಂತೆ ಬಹುತೇಕ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಒತ್ತಾಯ ಕೇಳಿ ಬಂತು.
ನಿಜಗನಹಳ್ಳಿ ಗ್ರಾಮಕ್ಕೆ ಸ್ಮಶಾನ ಕಲ್ಪಿಸುವಂತೆ ಮನವಿ, ಕಳ್ಳಿಮುದ್ದನಹಳ್ಳಿ ಗ್ರಾಮದಲ್ಲಿರುವ ಸ್ಮಶಾನ ಒತ್ತುವರಿ ತೆರವುಗೊಳಿಸಿ ಅಭಿವೃದ್ಧಿ ಪಡಿಸಬೇಕು. ಈ ವರೆಗೆ ಅಕ್ರಮ ಮದ್ಯ ಮಾರಾಟ ಮಾಡುವವರ ವಿರುದ್ದ ಕಾನೂನು ಕ್ರಮ ಜರುಗಿಸಿರುವ ಮಾಹಿತಿ ನೀಡಿ ಎಂದು ಸಭೆಯಲ್ಲಿ ಅಗ್ರಹಿದರಲ್ಲದೆ, ಪಟ್ಟಣದ ತಾಲೂಕು ಕಚೇರಿಯಲ್ಲಿ ಜನನ ಮರಣ ಶಾಖೆ ಹಾಗೂ ರೆಕಾರ್ಡ್ ರೂಮ್ ಇಲ್ಲದ ಕಾರಣ ಇಂದಿಗೂ ಕೆ.ಆರ್ ನಗರದ ತಾಲೂಕು ಕಚೇರಿಗೆ ಸಾರ್ವಜನಿಕರು ಹಾಗೂ ರೈತರು ಅಲೆಯುವಂತಾಗಿದ್ದು ಕೂಡಲೇ ತಾಲೂಕು ಕಚೇರಿಯಲ್ಲಿ ಜನನ ಮರಣ ಶಾಖೆ ಹಾಗೂ ರೆಕಾರ್ಡ್ ರೂಮ್ ಆರಂಭಿಸಿ ಅಲೆದಾಟ ತಪ್ಪಿಸಬೇಕೆಂದು ಸಭೆಯಲ್ಲಿ ಗಂಭೀರವಾಗಿ ಚರ್ಚಿಸಲಾಯಿತು.
ಅಲ್ಲದೆ ಚುಂಚನಕಟ್ಟೆ ಗ್ರಾಮದ ಸರಕಾರಿ ಜಾಗದಲ್ಲಿ 40 ವರ್ಷದಿಂದ ವಾಸ ಮಾಡುತ್ತಿರುವ ಕುಟುಂಬಗಳಿಗೆ ಸೂಕ್ತವಾದ ವಸತಿ ಹಾಗೂ ಮೂಲ ಭೂತ ಸೌಲಭ್ಯ ಕಲ್ಪಿಸಿ ಕೊಡ ಬೇಕೆಂದು ಸಭೆಯಲ್ಲಿ ಮನವಿ ಮಾಡಿದರು.
ಸಾರ್ವಜನಿಕ ಸಭೆಯಲ್ಲಿ ಮನವಿ ಹಾಗೂ ದೂರುಗಳನ್ನು ಆಲಿಸಿದ ಸಿಪಿಐ ಶಶಿಕುಮಾರ್ ಸ್ಥಳದಲ್ಲಿದ್ದ ಕಂದಾಯ ಇಲಾಖೆ ಹಾಗೂ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಈ ದೂರುಗಳ ಬಗ್ಗೆ ತುರ್ತು ಕ್ರಮ ವಹಿಸಬೇಕು ಜತೆಗೆ ಮುಂದಿನ ಸಭೆಯಲ್ಲಿ ಕ್ರಮ ವಹಿಸಿರುವ ಮಾಹಿತಿಯನ್ನು ತಿಳಿಸಬೇಕು ಅಲ್ಲದೆ ಇನ್ನಿತರ ಸಮಸ್ಯೆಗಳಲಿಗೆ ಸಂಬಂಧ ಪಟ್ಟ ಆಯಾ ಇಲಾಖೆಗಳಿಗೆ ಪತ್ರದ ಮೂಲಕ ಸಮಸ್ಯೆ ಪರಿಹರಿಸುವಂತೆ ತಿಳಿಸಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ರಾಘವೇಂದ್ರ, ಕಂದಾಯ ಇಲಾಖೆಯ ಆರ್ ಐ ಚಿದಾನಂದ ಬಾಬು, ವಿ.ಎ ಸುನಿಲ್, ಮುಖ್ಯಪೇದೆ ದೊರೆಸ್ವಾಮಿ, ಸಿಬ್ಬಂದಿಗಳಾದ
ರಘು ಕಾಳಮ್ಮನಕೊಪ್ಪಲು, ನಿವೃತ್ತ ಪೊಲೀಸ್ ನಾಗರಾಜನಾಯಕ,ಮುಖಂಡರಾದ ಕಳ್ಳಿ ಮುದ್ದನಹಳ್ಳಿ ಚಂದ್ರು, ಚುಂಚನಕಟ್ಟೆ ಕೃಷ್ಣ, ನಾಗರಾಜು ನಾಯಕ, ಕಂಠಿ ಕುಮಾರ್, ರಾಮು, ಶಂಕರ್, ಬೇರ್ಯ ಕೃಷ್ಣ ,ಮುದ್ದನಹಳ್ಳಿ ಕಾಂತರಾಜು, ಕೋಗಿಲೂರು ಶಿವನಂದ್, ಚಿಬುಕಹಳ್ಳಿ ಮಂಜು, ವೆಂಕಟೇಶ್,
ಸೇರಿದಂತೆ ಮತ್ತಿತರರು ಇದ್ದರು.



