ಚಾಮರಾಜನಗರ: ಮನಸ್ಸು ಶುದ್ಧಿಯಾಗಿ ಹೃದಯಪೂರ್ವಕ ಕಾರ್ಯಮಾಡಲು ಭಗವದ್ಗೀತೆ ಮಾರ್ಗದರ್ಶಕವಾಗಿದೆ. ಶ್ರೀ ಭಗವದ್ಗೀತಾ ಅಧ್ಯಯನ, ಪಾರಾಯಣದಿಂದ ಶಿಕ್ಷಣ ಹಂತದಲ್ಲಿ ಏಕಾಗ್ರತೆ ಹೆಚ್ಚಾಗಿ ಮನಸ್ಸು ವಿಕಾಸ ಹೊಂದಿ , ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಿದೆ ಎಂದು ಶಿವಮೊಗ್ಗದ ಹಿರಿಯ ವಕೀಲರು, ಶ್ರೀ ಭಗವದ್ಗೀತೆ ಅಭಿಯಾನ ಸಮಿತಿಯ ಕಾರ್ಯಾಧ್ಯಕ್ಷರಾದ ಶ್ರೀ ಅಶೋಕ್ ಭಟ್ ತಿಳಿಸಿದರು.
ಅವರು ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಶಿರಶಿ, ಉತ್ತರ ಕನ್ನಡ, ಕರ್ನಾಟಕ ಹಾಗೂ ಶ್ರೀ ಭಗವದ್ಗೀತೆ ಅಭಿಯಾನ ಜಿಲ್ಲಾ ಸಮಿತಿ ಸೇವಭಾರತಿ ಸಂಸ್ಥೆಯಲ್ಲಿ ಹಮ್ಮಿಕೊಂಡಿದ್ದ 11 ನೇ ಅಧ್ಯಾಯ ಸಾಮೂಹಿಕ ಸಮರ್ಪಣಾ ಸಮಾರಂಭದಲ್ಲಿ ಉದ್ಘಾಟಿಸಿ ಮಾತನಾಡಿ, ದುರ್ಬಲ ಮನಸ್ಸು ಹೋಗಿ ಆತ್ಮ ಶಕ್ತಿ ಹೆಚ್ಚಿ, ಶ್ರೇಷ್ಠರಾಗಿ ಬದುಕಲು ಶಕ್ತಿ. ನೀಡುತ್ತದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಗವದ್ಗೀತಾ ಅಭಿಯಾನದ ಗೌರವ ಅಧ್ಯಕ್ಷರಾದ ಜಿ ಎಂ ಹೆಗಡೆ ಮಾತನಾಡಿ ಕಳೆದ ದಶಕಗಳಿಂದ ಭಗವದ್ಗೀತಾ ಅಭಿಯಾನ ಜಿಲ್ಲೆಯಲ್ಲಿ ಸ್ವರ್ಣವಲ್ಲಿ ಮಹಾಸಂಸ್ಥಾನದ ಮಾರ್ಗ ದರ್ಶನದಲ್ಲಿ ನಡೆಯುತ್ತಿದೆ. ಸಾವಿರಾರು ವಿಧ್ಯಾರ್ಥಿಗಳು, ಯುವಕರು , ಮಹಿಳೆಯರು, ಸರ್ವರೂ ಕಲಿತು ಸಮರ್ಪಣಾ ಮಾಡುವ ಕಾರ್ಯದಲ್ಲಿ. ಪಾಲ್ಗೊಂಡ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿದರು.
ಮಹರ್ಷಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ನಾರಾಯಣ ದೇಸಾಯಿ, ಭಗವದ್ಗೀತೆಯ ಉಪನ್ಯಾಸ ನೀಡಿದರು.
ಅಧ್ಯಕ್ಷತೆಯನ್ನು ಭಗವದ್ಗೀತೆ ಅಭಿಯಾನದ ಅಧ್ಯಕ್ಷರಾದ ಮಲ್ಲಿಕಾರ್ಜುನ ದುಗ್ಗಹಟ್ಟಿ ವಹಿಸಿದ್ದರು.ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ, ಸೇವಾ ಭಾರತಿ ಸಂಸ್ಥೆ ಕಾರ್ಯದರ್ಶಿ ವಾಸುದೇವರಾವ್, ಬಾಲಸುಬ್ರಹ್ಮಣ್ಯ, ಸೇವಭಾರತಿ ಸಂಸ್ಥೆಯ ಅಭಿಲಾಷ್, ಅಭಿಯಾನ ಸಮಿತಿಯ ಅಕ್ಷಯಭಟ್, ಶೋಭಾ, ಎಸ್ ಸುರೇಶ್, ಕೇಶವಮೂರ್ತಿ, ಇದ್ದರು.
ಸಾವಿರಾರು ವಿದ್ಯಾರ್ಥಿಗಳಿಂದ ಭಗವದ್ಗೀತಾ 11 ನೆ ಅಧ್ಯಾಯದ ಪಾರಾಯಣ ಜರುಗಿತು.
ರಾಜ್ಯ, ಜಿಲ್ಲೆ ಹಾಗೂ ತಾಲೂಕು ಭಗವದ್ಗೀತಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಗೌರವಿಸಲಾಯಿತು.



