ಮೈಸೂರು: ಮೈಸೂರಿನ ನಿಲಾಂಜನ ಮಹೇಶ್ ಪ್ರಸಾದ್ ಸಭಾಂಗಣದಲ್ಲಿ ನ್ಯಾಷನಲ್ ಕ್ರೈಂ ಕಂಟ್ರೋಲ್ ಬೋರ್ಡ್ ಹಾಗೂ ವುಮೆನ್ ಎಂಪವರ್ಮೆಂಟ್ ಮತ್ತು ಪ್ರೋಟೆಕ್ಷನ್ ಸೆಲ್ ಇಂದ ಡಾ. ಪೃಥು ಪಿ ಅದ್ವೈತ್ ಗೆ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸ್ಥಾಪಕ ರಾಷ್ಟ್ರೀಯ ನಿರ್ದೇಶಕರಾದ ಡಾ. ಮುರಳೀಧರ ಕೆ. ಎಸ್ ತಮ್ಮ ಸಂಸ್ಥೆಯಿಂದ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅಭಿನಂದಿಸಿ ಪ್ರೋತ್ಸಾಹಿಸುವುದನ್ನು ರೂಢಿಸಿಕೊಂಡು ಬಂದಿದೆ ಹಾಗೆಯೇ ಮೈಸೂರಿನ ಸಾಧಕರನ್ನು ಗೌರವಿಸುವುದು ಹೆಮ್ಮೆಯ ವಿಷಯ ಅದರಲ್ಲೂ ವಿಶೇಷವಾಗಿ ಸಾಧನೆ ಮಾಡಿರುವ ಬಾಲ ಪ್ರತಿಭೆಗಳನ್ನು ಗೌರವಿಸುವುದು ವಿಶೇಷ. ಅತ್ಯಂತ ಚಿಕ್ಕವಯಸ್ಸಿನಲ್ಲೇ ಆರು ವಿಶ್ವ ದಾಖಲೆ ಹಾಗೂ ಎರಡು ಗೌರವ ಡಾಕ್ಟರೇಟ್ ಪಡೆದಿರುವ ಡಾ. ಪೃಥು ಪಿ ಅದ್ವೈತ್ ನಮ್ಮೆಲ್ಲರಿಗೂ ಮಾದರಿ, ಸನಾತನ ಧರ್ಮದ ಶಿಕ್ಷಣ ಹಾಗೂ ಸಂಸ್ಕಾರವನ್ನು ಅವರು ಮತ್ತಷ್ಟು ಅಳವಡಿಸಿಕೊಂಡು ಉತ್ತಮ ಪ್ರಜೆಯಾಗಿ ರೂಪುಗೊಳಲ್ಲಿ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪೃಥು ಪಿ ಅದ್ವೈತ್ ಪೋಷಕರು ಹಾಗೂ ಶಾಲೆಯ ಸಹಕಾರದಿಂದ ನಾನು ಸಾಧನೆ ಮಾಡಲು ಸಾಧ್ಯವಾಗಿದೆ. ವೇದ ಹಾಗೂ ಸಾಹಿತ್ಯ ವಿಭಾಗದಲ್ಲಿ ಮತ್ತಷ್ಟು ಅಧ್ಯಯನ ಮಾಡಿ ನಿಮ್ಮೆಲ್ಲರ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್. ಎಸ್. ಸಿ ರಾಜ್ಯ ನಿರ್ದೇಶಕರಾದ ಡಾ. ವಿರೂಪಾಕ್ಷಯ್ಯ, IIRPC ರಾಜ್ಯ ನಿರ್ದೇಶಕ ಸೈಯದ್ ಬಾಷಾ, WEPC ರಾಜ್ಯ ನಿರ್ದೇಶಕಿ ಶ್ರೀಮತಿ ಮಂಜುಳಾ ಗೌಡ, ರಾಜ್ಯ ಕಾನೂನು ಅಧಿಕಾರಿ ಶ್ರೀಮತಿ ಚಾಂದಿನಿ, SCC ರಾಜ್ಯ ನಿರ್ದೇಶಕ ವಸಂತ್ ಕುಮಾರ್, ರಾಜ್ಯ ಸಂಪನ್ಮೂಲ ಅಧಿಕಾರಿ ರಶ್ಮಿ .ಮಹಿಳಾ ಸಂರಕ್ಷಣೆ ಹಾಗೂ ಸಬಲೀಕರಣ ಸಂಸ್ಥೆಯ ವಿವಿಧ ಜಿಲ್ಲೆಗಳ ನಿರ್ದೇಶಕರು ಆದ ಅಧಿಕಾರಿಗಳಾದ ಸುಮಾ ಡಿ. ಎಸ್, ಶೋಭಾ, ಪ್ರೀತಿ ಆರ್, ಲಕ್ಷ್ಮೀ. ಕೆ. ಸಿ, ವಿನುತ, ತ್ರಿವೇಣಿ, ಮಮತಾ, ಲತಾ, ಪ್ರವೀಣ್, ತೇಜಸ್ವಿನಿ, ಪೃಥುವಿನ ಪೋಷಕರಾದ ಪುನೀತ್ ಜಿ ಕೂಡ್ಲೂರು, ಪೂಜಾ. ಎನ್ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.



