Saturday, January 24, 2026
Google search engine

Homeವಿದೇಶಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್‌ ಸಿದ್ಧತೆ..!

ಭಾರತದ ಮೇಲಿನ 25% ಹೆಚ್ಚುವರಿ ಸುಂಕ ತೆಗೆಯಲು ಟ್ರಂಪ್‌ ಸಿದ್ಧತೆ..!

ವಾಷಿಂಗ್ಟನ್‌ : ಕೆಲ ದಿನಗಳ ಹಿಂದಷ್ಟೇ, ಭಾರತ ಅಮೆರಿಕದಿಂದ ಆಮದಾಗುವ ದ್ವಿದಳ ಧಾನ್ಯಗಳ ಮೇಲೆ 30% ಸುಂಕ. ಇದರಿಂದ ಪೆಟ್ಟು ತಿಂದ ಅಮೆರಿಕ ಈಗ ಭಾರತದ ಮೇಲೆ 25% ಹೆಚ್ಚುವರಿ ಸುಂಕ ತೆಗೆದುಹಾಕಲು ತಯಾರಿ ನಡೆಸಿದೆ. ಭಾರತದ ಮೇಲೆ ವಿಧಿಸಲಾದ 25% ಹೆಚ್ಚುವರಿ ಸುಂಕವನ್ನು ತೆಗೆದುಹಾಕಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ತಯಾರಿ ನಡೆಸಿದ್ದಾರೆ ಎಂದು ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್‌ ಹೇಳಿದ್ದಾರೆ.

ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತದ ಮೇಲೆ 50% (25% ಹೆಚ್ಚುವರಿ) ಸುಂಕ ವಿಧಿಸಿದಾಗಿನಿಂದ ರಷ್ಯಾದಿಂದ ತೈಲ ಖರೀದಿಸುವುದು ಗಮನಾರ್ಹವಾಗಿ ಕಡಿಮೆಯಾಗಿದೆ. ಪ್ರಸ್ತುತ 50% ಸುಂಕ ಇದ್ದು, ಇದು ಶಾಶ್ವತವಾಗಿ ಇರೋದಿಲ್ಲ ಎಂದು ಸುಂಕ ಕಡಿತಗೊಳಿಸುವ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಭಾರತದ ಮೇಲೆ ವಿಧಿಸಲಾದ 25% ಹೆಚ್ಚುವರಿ ಸುಂಕವನ್ನು ಭವಿಷ್ಯದಲ್ಲಿ ತೆಗೆದುಹಾಕಬಹುದು. ಪರಿಸ್ಥಿತಿ ಅನುಕೂಲಕರವಾಗಿದ್ದರೆ, ಮಾತುಕತೆಗಳು ಮುಂದುವರಿದರೆ, ಅಮೆರಿಕ ಭಾರತಕ್ಕೆ ಸುಂಕದ ಪರಿಹಾರ ನೀಡಬಹುದು ಎಂದು ಹೇಳಿದ್ದಾರೆ.

ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಫಂಡಿಂಗ್‌ ಮಾಡುತ್ತಿದೆ ಅನ್ನೋದು ಟ್ರಂಪ್‌ ಬಲವಾದ ಆರೋಪ ಇದೇ ಕಾರಣಕ್ಕೆ ಭಾರತದ ಮೇಲೆ ಸುಂಕ ಏರಿಸಿದ್ದಾರೆ. ಟ್ರಂಪ್‌ ಅಧಿಕಾರಕ್ಕೆ ಏರಿದ ಆರಂಭದಲ್ಲಿ ಭಾರತದಿಂದ ಅಮೆರಿಕಕ್ಕೆ ಆಮದಾಗುವ ವಸ್ತುಗಳ ಮೇಲೆ 25% ಸುಂಕ ವಿಧಿಸಿದ್ದರು. ಬಳಿಕ ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡುತ್ತಿರುವುದಕ್ಕೆ ಪ್ರತಿಯಾಗಿ 25% ದಂಡದ ರೂಪದಲ್ಲಿ ಸುಂಕ ಹೇರಿದ್ದಾರೆ. ಈ ನಿರ್ಧಾರದಿಂದ ಭಾರತದ ಕೆಲವು ವಸ್ತುಗಳಿಗೆ ಈಗ 50% ಸುಂಕ ಹೇರಲಾಗಿದೆ.

ಯುಎಸ್, G7 ಮತ್ತು ಯುರೋಪಿಯನ್ ದೇಶಗಳು ರಷ್ಯಾದ ತೈಲಕ್ಕೆ ಬೆಲೆ ಮಿತಿ ವ್ಯವಸ್ಥೆ ಜಾರಿಗೆ ತಂದಿವೆ. ಈ ಮಿತಿ ಜನವರಿ 2026 ರ ವರೆಗೆ ಬ್ಯಾರೆಲ್‌ಗೆ ಸರಿಸುಮಾರು 47.60 ಡಾಲರ್‌ (4,360 ರೂ.) ಆಗಿದ್ದು, ಫೆಬ್ರವರಿ 1 ರಿಂದ 44.10 ಡಾಲರ್‌ (4,039 ರೂ.) ಗೆ ಇಳಿಕೆಯಾಗಲಿದೆ. ಒಂದು ವೇಳೆ ಮಿತಿಗೊಳಿಸಿದ ಬೆಲೆಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದ್ರೆ, ವಿಮೆ, ಸಾಗಣೆ ಮತ್ತು ಹಣಕಾಸು ಮುಂತಾದ ಸೇವೆಗಳನ್ನು ಒದಗಿಸಲಾಗುವುದಿಲ್ಲ ಎಂದು ದೇಶಗಳು ಎಚ್ಚರಿಕೆ ನೀಡಿವೆ.

RELATED ARTICLES
- Advertisment -
Google search engine

Most Popular