Sunday, January 25, 2026
Google search engine

HomeUncategorizedರಾಷ್ಟ್ರೀಯ982 ಪೊಲೀಸ್ ಸಿಬ್ಬಂದಿಗೆ ಶೌರ್ಯ, ಸೇವಾ ಪದಕ ಘೋಷಣೆ

982 ಪೊಲೀಸ್ ಸಿಬ್ಬಂದಿಗೆ ಶೌರ್ಯ, ಸೇವಾ ಪದಕ ಘೋಷಣೆ

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ದೇಶದ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ, ನಾಗರಿಕ ರಕ್ಷಣಾ ಹಾಗೂ ತಿದ್ದುಪಡಿ ಸೇವೆಗಳ ಸಿಬ್ಬಂದಿಗೆ ನೀಡಲಾಗುವ ಶೌರ್ಯ ಮತ್ತು ಸೇವಾ ಪದಕಗಳಿಗೆ ಈ ಬಾರಿ ಒಟ್ಟು 982 ಮಂದಿಯನ್ನು ಆಯ್ಕೆ ಮಾಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ. ಈ ಪೈಕಿ 125 ಶೌರ್ಯ ಪದಕಗಳು ಸೇರಿವೆ.

ಈ ಬಾರಿ ಶೌರ್ಯ ಮತ್ತು ಸೇವಾ ಪದಕಗಳಿಗೆ ಆಯ್ಕೆಯಾದವರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳ ಸಂಖ್ಯೆ ಹೆಚ್ಚಾಗಿದೆ. ನಕ್ಸಲ್ ಪೀಡಿತ ಹಾಗೂ ಹಿಂಸಾಚಾರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸಿದ 35 ಮಂದಿ, ಶಸ್ತ್ರಾಸ್ತ್ರ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ 45 ಮಂದಿ ಮತ್ತು ಈಶಾನ್ಯ ಭಾರತದಲ್ಲಿ ಸೇವೆ ಸಲ್ಲಿಸಿದ ಐವರು ಸಿಬ್ಬಂದಿ ಶೌರ್ಯ ಪದಕಕ್ಕೆ ಆಯ್ಕೆಯಾಗಿದ್ದಾರೆ. ಜೊತೆಗೆ ನಾಲ್ವರು ಅಗ್ನಿಶಾಮಕ ಸಿಬ್ಬಂದಿಯೂ ಶೌರ್ಯ ಪದಕ ಪಡೆದಿದ್ದಾರೆ.

ಅಧಿಕೃತ ಮಾಹಿತಿ ಪ್ರಕಾರ ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಇಲಾಖೆ ಅತಿಹೆಚ್ಚು 33 ಶೌರ್ಯ ಪದಕಗಳನ್ನು ಪಡೆದುಕೊಂಡಿದೆ. ಮಹಾರಾಷ್ಟ್ರ ಪೊಲೀಸರು 31 ಪದಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದು, ಉತ್ತರ ಪ್ರದೇಶ (18) ಹಾಗೂ ದೆಹಲಿ ಪೊಲೀಸ್ (14) ನಂತರದ ಸ್ಥಾನಗಳಲ್ಲಿವೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ CRPF 12 ಶೌರ್ಯ ಪದಕಗಳನ್ನು ಪಡೆದ ಏಕೈಕ ಪಡೆ ಆಗಿದೆ.

ಇದಲ್ಲದೆ ಈ ಪಟ್ಟಿಯಲ್ಲಿ 101 ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ (PSM) ಹಾಗೂ 756 ವಿಶಿಷ್ಟ ಸೇವಾ ಪದಕಗಳು (MSM) ಸೇರಿವೆ.

RELATED ARTICLES
- Advertisment -
Google search engine

Most Popular