Monday, January 26, 2026
Google search engine

Homeಸ್ಥಳೀಯ77ನೇ ಗಣರಾಜ್ಯೋತ್ಸವ: ತ್ಯಾಗಿಗಳ ಸೇವೆ ಸದಾ ಸ್ಮರಣೀಯ – ಡಿ.ರವಿಶಂಕರ್

77ನೇ ಗಣರಾಜ್ಯೋತ್ಸವ: ತ್ಯಾಗಿಗಳ ಸೇವೆ ಸದಾ ಸ್ಮರಣೀಯ – ಡಿ.ರವಿಶಂಕರ್

ಕೆ.ಆರ್.ನಗರ : ದೇಶಕ್ಕೆ ಸ್ವಾತಂತ್ರ್ಯ ತಂದು ಕೊಡಲು ತಮ್ಮ ಪ್ರಾಣತ್ಯಾಗ ಮಾಡಿದ ಮಹನೀಯರು ಮತ್ತು ಹೋರಾಟಗಾರರ ಸೇವೆ ಸದಾ ಸ್ಮರಣೀಯ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ತಾಲೂಕು ನಾಡಹಬ್ಬಗಳ ಸಮಿತಿ, ತಾಲೂಕು ಪಂಚಾಯಿತಿ ಮತ್ತು ಪುರಸಭೆಯ ವತಿಯಿಂದ ಪಟ್ಟಣದ ಪುರಸಭೆ ಬಯಲು ರಂಗ ಮಂದಿರದ. ಆವರಣದಲ್ಲಿ ನಡೆದ 77 ನೇ ಗಣರಾಜ್ಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸ್ವಾತಂತ್ರ್ಯ ಪೂರ್ವದಲ್ಲಿ ಹರಿದು ಹಂಚಿ ಹೋಗಿದ್ದ ಎಲ್ಲಾ ರಾಜ್ಯಗಳು ಒಗ್ಗೂಡಿ ಒಕ್ಕೂಟ ವ್ಯವಸ್ಥೆಗೆ ಒಳಪಟ್ಟು ಸಂವಿದಾನದಡಿ ಕೆಲಸ ಮಾಡಲು ಸಿದ್ದವಾದ ದಿನವೇ ಗಣರಾಜ್ಯ ದಿನವಾಗಿದೆ ಎಂದರು.
ಭಾರತ ದೇಶ ಸದೃಡವಾಗಿ ಸ್ವಾತಂತ್ರ್ಯದಿಂದ ಆಡಳಿತ ನಡೆಸಿ ಸರ್ವರೂ ಸಮಾನತೆಯಿಂದ ಬದುಕುವಂತಾಗಲು ಬಲಿಷ್ಠ ಹಾಗೂ ಶ್ರೇಷ್ಠ ಸಂವಿದಾನ ರಚಿಸಿಕೊಟ್ಟ ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ನಾವು ಸದಾ ನೆನೆದು ಪೂಜಿಸಬೇಕೆಂದರು.
ರಾಜ್ಯದಲ್ಲಿ ಅಧಿಕಾರದಲ್ಲಿರುವ ಮುಖ್ಯಮಂತ್ರಿ ಸಿದ್ಸರಾಮಯ್ಯನವರು ಮತ್ತು ಉಪ- ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣಾ ಪೂರ್ವದಲ್ಲಿ ಮತದಾರರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿ ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಬದುಕು ಹಸನಾಗುವಂತೆ ಮಾಡಿದೆ ಎಂದು ಹೆಮ್ಮೆಯಿಂದ ನುಡಿದರು.

ಸಾವಿರಾರು ಸ್ವಾತಂತ್ರ್ಯ ಹೋರಾಟಗಾರರು ಮತ್ತು ದೇಶ ಪ್ರೇಮಿಗಳು ಅಪಾರ ಕನಸನ್ನು ಹೊತ್ತು ತಂದುಕೊಟ್ಟ ಸ್ವಾತಂತ್ರ್ಯವನ್ನು ಜೋಪಾನವಾಗಿ ಕಾಪಾಡಿಕೊಂಡು ಸಮಾನತೆಯ ಸಮಾಜ ನಿರ್ಮಾಣ ಮಾಡಬೇಕಾದುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ನುಡಿದರು.
ಅಂತರ ರಾಷ್ಟ್ರೀಯ ಯೋಗಪಟು ಗೀತಾಂಜಲಿಮಣಿಕಂಠ, ಕಲಾವಿದ ಹೆಚ್.ಎಂ.ಮಂಜುನಾಥ್, ಸಫಾಯಿ ಕರ್ಮಾಚಾರಿ ಭುವನೇಶ್, ಪೌರ ಕಾರ್ಮಿಕ ಎನ್.ರಾಚ ಮತ್ತು ಸಮಾಜ ಸೇವಕ ಚೇತನಕುಮಾರ್ ಅವರುಗಳನ್ನು ತಾಲೂಕು ನಾಡಹಬ್ಬಗಳ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮೊದಲು ಪಟ್ಟಣದ ಕೃಷ್ಣರಾಜೇಂದ್ರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಿಂದ ಹತ್ತಾರು ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ಪಥ ಸಂಚಲನ ಮತ್ತು ಆನಂತರ ಪುರಸಭೆ ಬಯಲು ರಂಗ ಮಂದಿರದಲ್ಲಿ ಪ್ರದರ್ಶಿಸಿದ ದೇಶ ಭಕ್ತಿಯ ನೃತ್ಯ ರೂಪಕಗಳು ಎಲ್ಲರ ಗಮನ ಸೆಳೆದವು.
ತಹಸೀಲ್ದಾರ್ ಜಿ.ಸುರೇಂದ್ರಮೂರ್ತಿ ಮಾತನಾಡಿ ಗಣರಾಜ್ಯೋತ್ಸವದ ಸಂದೇಶ ನೀಡಿದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಂ.ಎಸ್.ಮಹದೇವ್, ನಿರ್ದೇಶಕ ಸೈಯದ್ ಜಾಬೀರ್, ತಾ.ಪಂ‌.ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ತಾಲೂಕು ಕಸಾಪ ಅಧ್ಯಕ್ಷ ಡಿಂಡಿಮಶಂಕರ್, ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಡಾ.ತಿಮ್ಮಶೆಟ್ಟಿ, ತಾ.ಪಂ.ಇಒ ವಿ.ಪಿ.ಕುಲದೀಪ್, ಪುರಸಭೆ ಮುಖ್ಯಾಧಿಕಾರಿ ರಮೇಶ್, ಬಿಇಒ ಆರ್.ಕೃಷ್ಣಪ್ಪ , ಸಿಡಿಪಿಒ ಸಿ.ಎಂ.ಅಣ್ಣಯ್ಯ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular