Wednesday, January 28, 2026
Google search engine

Homeಅಪರಾಧಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ

ಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ

ಪುತ್ತೂರಿನಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂ.ಡಿ.ಎಂ.ಎ ಮಾರಾಟದ ಜಾಲ ಪತ್ತೆಯಾಗಿದ್ದು 4 ಆರೋಪಿಗಳು ಹಾಗೂ ಕಾರನ್ನು ವಶಕ್ಕೆ ಪಡೆಯಲಾಗಿದೆ.
ಪುತ್ತೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ಬೆಟ್ಟಂಪಾಡಿ, ಇರ್ದೆ, ರೆಂಜ, ಅರ್ಲಪದವು ಪರಿಸರದಲ್ಲಿ ಅಕ್ರಮವಾಗಿ ಮಾದಕ ವಸ್ತುವಾದ ಎಂಡಿಎಂಎ ಸೇವನೆ ಮತ್ತು ಮಾರಾಟ ಮಾಡುತ್ತಿದ್ದ ಜಾಲವೊಂದನ್ನು ಪತ್ತೆ ಮಾಡಿ, ಆರೋಪಿಗಳಾದ ಮುಹಮ್ಮದ್ ಹರ್ಷದ್ (33), ಮುಹಮ್ಮದ್ ಆರೀಶ್ (31), ಪುತ್ತೂರು, ಇಬ್ರಾಹಿಂ ಅಶ್ರಫ್ ಅಲಿಯಾಸ್ ರೋಜಾ ಅಶ್ರಫ್ (46), ಪುತ್ತೂರು ಎಂಬವರುಗಳನ್ನು ಹಾಗೂ ಆರೋಪಿಗಳಿಗೆ ಮಾದಕ ವಸ್ತುವಾದ ಎಂಡಿಎಂಎ ನೀಡುತ್ತಿದ್ದ ಬಂಟ್ವಾಳ ನಿವಾಸಿ ಮುಸ್ತಾಫ (46) ಎಂಬವರನ್ನು ದಸ್ತಗಿರಿ ಮಾಡಲಾಗಿದೆ.
ಆರೋಪಿಗಳಿಂದ ಅಂದಾಜು 50,000 ಮೌಲ್ಯದ ಸುಮಾರು 6.39 ಗ್ರಾಂ ಎಂಡಿಎಂಎ, ಗಾಂಜಾ 0.87 ಗ್ರಾಂ, ಮೊಬೈಲ್ ಫೋನ್ ಗಳು ಹಾಗೂ ಕೃತ್ಯಕ್ಕೆ ಬಳಸಿದ ಅಂದಾಜು ರೂ ಆರು ಲಕ್ಷ ಮೌಲ್ಯದ 2 ಕಾರುಗಳನ್ನು ಹಾಗೂ ಇತರೆ ಸೊತ್ತುಗಳನ್ನು ವಶಕ್ಕೆ ಪಡೆದಿರುತ್ತಾರೆ. ವಶಪಡಿಸಿಕೊಂಡ ಒಟ್ಟು ಸೊತ್ತುಗಳ ಅಂದಾಜು ಮೌಲ್ಯ 6,50,000. ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಿನಾಂಕ: 24.01.2026 ರಂದು ಅ.ಕ್ರ ನಂ: 13-2026, ಕಲಂ : – 8(c)21(b) NDPS Act.25(1B)(B) Arms Act ರಂತೆ ಪ್ರಕರಣ ದಾಖಲಾಗಿದೆ.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ಗುಣಾಪಾಲ ಜೆ ರವರು ನೇತೃತ್ವದ ತನಿಖಾ ತಂಡದಲ್ಲಿ ಪುತ್ತೂರು ಗ್ರಾಮಾಂತರ ಠಾಣಾ ಉಪ ನಿರೀಕ್ಷಕರಾದ ಸುಶ್ಮಾ ಭಂಡಾರಿ ಹಾಗೂ ಸಿಬ್ಬಂದಿಗಳಾದ ಮುರುಗೇಶ್ ಪರಮೇಶ್ವರ, ಸತೀಶ್, ಸುಬ್ರಹ್ಮಣ್ಯ, ಹರೀಶ್, ನಾಗೇಶ್, ಭವಿತ್ ರೈ ವಿನೋದ್, ನಾಗರಾಜ್, ಕಾರ್ತಿಕ್ ಹಾಗೂ ವಿಶೇಷ ತಂಡದ ಸಿಬ್ಬಂದಿಗಳಾದ ಅದ್ರಾಮ್ , ಪ್ರಶಾಂತ ಎಂ, ಪ್ರವೀಣ್ ರೈ, ಪ್ರಶಾಂತ್ ರೈ, ಹರ್ಷಿತ್, ಸಂಪತ್ ರವರು ಹಾಗೂ ಸೋಕೋ ತಂಡದವರು ಭಾಗವಹಿಸಿದ್ದರು.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular