ಮಂಡ್ಯ: ಪಾಂಡವಪುರ ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ಪೋಲಿ ಪುಂಡರ ಹಾವಳಿ ಹೆಚ್ಚಾಗಿದ್ದು, ಪಾಂಡವಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕೆ.ಎಸ್.ಆರ್.ಟಿಸಿ ಬಸ್ ನಿಲ್ದಾಣದಲ್ಲಿ ತಡರಾತ್ರಿ ಒಂಟಿಯಾಗಿದ್ದ ಯುವತಿಯನ್ನು ಪುಂಡರ ಗುಂಪು ಚುಡಾಯಿಸುತ್ತಿದ್ದ ವೇಳೆ ಯುವತಿ ರಕ್ಷಣೆಗೆ ಬಂದ ಬಸ್ ನಿಲ್ದಾಣದ ಚಿಲ್ಲರೆ ಅಂಗಡಿ ಮಾಲೀಕನ ಮೇಲೆ ಪುಂಡರು ಹಲ್ಲೆ ನಡೆಸಿದ್ದಾರೆ.
ಅಂಗಡಿಯ ವಸ್ತುಗಳನ್ನು ನಾಶ ಪಡಿಸಿ ಪುಂಡರ ಗುಂಪು ವಿಕೃತಿ ಮೆರೆದಿದೆ. ಈ ಸಂಬಂಧ ಅಂಗಡಿ ಮಾಲೀಕ ಪೊಲೀಸರಿಗೆ ದೂರು ನೀಡಿದ್ದಾರೆ.