Friday, January 30, 2026
Google search engine

Homeಅಪರಾಧಆನ್‌ಲೈನ್ ಬೆಟ್ಟಿಂಗ್ ಹಗರಣ: ಕೆಸಿ ವೀರೇಂದ್ರ ಆಸ್ತಿಗೆ ಇಡಿ ಮುಟ್ಟುಗೋಲು

ಆನ್‌ಲೈನ್ ಬೆಟ್ಟಿಂಗ್ ಹಗರಣ: ಕೆಸಿ ವೀರೇಂದ್ರ ಆಸ್ತಿಗೆ ಇಡಿ ಮುಟ್ಟುಗೋಲು

ಬೆಂಗಳೂರು : ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ವಿರುದ್ಧ ಅಕ್ರಮ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬಂಧ ಕೃಷಿ ಜಮೀನು, ನಿವೇಶನ ಸೇರಿದಂತೆ 177.3 ಕೋಟಿ ಆಸ್ತಿಯನ್ನು ಇಡಿ ಮುಟ್ಟುಗೋಲು ಹಾಕಿಕೊಂಡಿದೆ.

ತನಿಖೆ ವೇಳೆ ಕೆಸಿ ವೀರೇಂದ್ರ ಮತ್ತು ಸಹಚರರು ಮಾಸ್ಟರ್ ಮೈಂಡ್ ಅನ್ನೋದು ದೃಢವಾಗಿದೆ. ನೂರಾರು ಬೇನಾಮಿ ಖಾತೆ (ಮ್ಯೂಲ್ ಅಕೌಂಟ್) ಬಳಸಿ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. 177.3 ಕೋಟಿ ರೂ. ಮೌಲ್ಯದ ಆಸ್ತಿ ಅಕ್ರಮ ಹಣದಿಂದ ಸಂಪಾದನೆ ಮಾಡಿದ್ದು ಅನ್ನೋದು ಪತ್ತೆಯಾಗಿದ್ದು, ತನಿಖೆ ವೇಳೆ ಸಿಕ್ಕ ಸಾಕ್ಷ್ಯಗಳ ಆಧಾರದ ಮೇಲೆ ಆಸ್ತಿ ಸೀಜ್ ಮಾಡಲಾಗಿದೆ.

ಈ ಹಿಂದೆ ಪ್ರಕರಣ ಸಂಬಂಧ 60ಕ್ಕೂ ಹೆಚ್ಚು ಸ್ಥಳದಲ್ಲಿ ಇಡಿ ದಾಳಿ ನಡೆಸಿ ಚಿನ್ನ, ನಗದು, ಬೆಳ್ಳಿ, ವಾಹನಗಳನ್ನು ವಶಪಡಿಸಿಕೊಂಡಿತ್ತು. 177.3 ಕೋಟಿ ರೂ. ಸೇರಿ ಈವರೆಗೆ ಒಟ್ಟಾರೆ ಪ್ರಕರಣದಲ್ಲಿ 320 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ. ಅಲ್ಲದೇ ತನಿಖೆ ವೇಳೆ 2,300 ಕೋಟಿ ರೂ. ಅಧಿಕ ಅಕ್ರಮ ನಡೆದಿರೋದು ಪತ್ತೆಯಾಗಿದ್ದು, ಇ.ಡಿ. ತನಿಖೆ ಮುಂದುವರಿದಿದೆ.

.

RELATED ARTICLES
- Advertisment -
Google search engine

Most Popular