Saturday, January 31, 2026
Google search engine

Homeಸ್ಥಳೀಯಗುಣಮಟ್ಟದ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಸೂಚನೆ

ಗುಣಮಟ್ಟದ ಗ್ರಾ.ಪಂ. ಕಟ್ಟಡ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಸೂಚನೆ

ವರದಿ: ವಿನಯ್ ದೊಡ್ಡಕೊಪ್ಪಲು

ಕೆ.ಅರ್.ನಗರ : ಚನ್ನಂಗೆರೆ ಗ್ರಾಮದಲ್ಲಿ ಮತ್ತು ಪಂಚಾಯತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿ ಕೈಗೆತ್ತಿಕೊಳ್ಳಲು 3 ಕೋಟಿ ರೂ ಅನುಧಾನ ಮಂಜೂರಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.
ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಗ್ರಾಮದಲ್ಲಿ 25 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ಗ್ರಾಮಪಂಚಾಯಿತಿಯ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೇರವೇರಿಸಿ ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಫೆ‌.13 ಜನಸ್ಪಂದನ ಕಾರ್ಯಕ್ರಮದ ದಿನ ಈ ಎಲ್ಲಾ ಅಭಿವೃದ್ದಿ ಕಾಮಗಾರಿ ಚಾಲನೇ ನೀಡುವುದರ ಜತಗೆ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮೂಖದಲ್ಲಿ ಗ್ರಾಮಸ್ಥರಿಂದ ಅವಾಲು ಸ್ವೀಕರಿಸಲಾಗುದು ಎಂದರು.
ಗ್ರಾಮಸ್ಥರು ಮಾಡಿರುವ ಮನವಿಯಂತೆ ಗ್ರಾಮಕ್ಕೆ ಪಶು ಅಸ್ವತ್ರೆ ಮಂಜೂರು , ಸಾಲಿಗ್ರಾಮದಿಂದ ಬಸ್, ವಿದ್ಯುತ್ ಕಂಬಗಳ ಬದಲಾವಣೆ , ರಸ್ತೆ ಅಭಿವೃದ್ದಿ ,ಅಲದಕೆರೆಗೆ ಸೋಪಾನ ಕಟ್ಟೆ ನಿರ್ಮಾಣ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನ ನಿವಾರಣೆ ಗೆ ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧಿಕಾರ ವಿಕೇಂದ್ರೀಕರಣದ ವ್ಯವಸ್ಥೆಯಲ್ಲಿ ಸ್ಥಳಿಯ ಅಡಳಿತವಾಗಿರುವ ಗ್ರಾಮಪಂಚಾತಿಗಳಿಗೆ ಅಭಿವೃದ್ದಿಯ ಅಧಿಕಾರ ವ್ಯವಸ್ಥೆ ನೀಡಲಾಗಿದೆ ಇಲ್ಲಿ ಚ್ಯುತಿ ಬರದಂತೆ ಗ್ರಾ.ಪಂ.ಸದಸ್ಯರು ಕೆಲಸ ಮಾಡಬೇಕು ಎಂದು ಶಾಸಕ ಡಿ.ರವಿಶಂಕರ್ ಅದಷ್ಟು ಬೇಗ ಗುಣಮಟ್ಟದಲ್ಲಿ ಗ್ರಾ.ಪಂ.ಕಟ್ಟಡವನ್ನು ನಿರ್ಮಿಸಿ ಸಾರ್ವಜನಿಕರಿಗೆ ಕಟ್ಟಡ ಸದುಪಯೋಗ ಮಾಡುವಂತೆ ಗ್ರಾ.ಪಂ.ಅಡಳಿತಕ್ಕೆ ಸೂಚನೆ ನೀಡಿದರು.

ತಾ.ಪಂ.ಇಓ ಎ.ಎನ್.ರವಿ ಮಾತನಾಡಿ ಈ ಗ್ರಾಮಪಂಚಾಯಿಗೆ ಸ್ವತಂ ಕಟ್ಟಡ ಇಲ್ಲದ ಬಗ್ಗೆ ಶಾಸಕರಾದ ಡಿ.ರವಿಶಂಕರ್ ಅವರ ಗಮನ ತರಲಾಗಿ ಈ ಕಟ್ಟಡಕ್ಕೆ ಅನುಧಾನ ಕೊಡಿಸಿದ್ದು ಇದಕ್ಕೆ ಶಾಸಕರನ್ನು ಈ ಭಾಗದ ಜನತೆಯ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನ ಗ್ರಾ.ಪಂ.ಅಧ್ಯಕ್ಷೆ ಸುನೀತಾ ದಿನೇಶ್ ವಹಿಸಿದ್ದರು.
ಈ ಸಂದರ್ಭದಲ್ಲಿ ತಾ.ಪಂ.ಇಓ ರವಿಕುಮಾರ್, ತಾ.ಪಂ.ಮಾಜಿ ಅಧ್ಯಕ್ಷ ಹಾಡ್ಯ ಮಹದೇವಸ್ವಾಮಿ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಉದಯಶಂಕರ್, ಗ್ರಾ.ಪಂ.ಮಾಜಿ ಅಧ್ಯಕ್ಷ ತಾರಕೇಶ್ವರಿ ಹರೀಶ್, ಉಪಾಧ್ಯಕ್ಷ ಕೃಷ್ಣಪ್ಪ, ಸದಸ್ಯಾರಾದ ಮಣಿಯಮ್ಮ, ರಾಜೇಶ್ವರಿ ಲೋಕೇಶ್, ಚೈತ್ರ ಸುರೇಶ್, ಅನಿತಾಕಾಂತರಾಜು , ಸುನಿತಾಯುವರಾಜ್ , ಕಾಂಗ್ರೇಸ್ ಮುಖಂಡರಾದ ಮಂಚನಹಳ್ಳಿ ಧನು, ಬಂಡಹಳ್ಳಿ ಅಶ್ವತ್, ಹನಸೋಗೆ ನವೀನ್, ಪ್ರಶನ್ನ ನಾಯಕ,ಎರೆಮನುಗನಹಳ್ಳಿ ಅಸ್ಲಾಂ, ಅಭಿಜಿತ್, ಸಿ.ಎಚ್, ಬೋರೇಗೌಡ, ಮಲ್ಲಿಕಾರ್ಜುನ್, ಕೋಟೆ ಶಂಕರೇಗೌಡ,ಕೋಳೊರು ರಂಗಸ್ವಾಮಿ, ಸಿ.ಎಂ.ಹರೀಶ್,ಮಲ್ಲೇಶ್, ಸಿ.ಕೆ.ಕಾಂತರಾಜು, ಸಿ‌.ಪಿ.ಪ್ರಕಾಶ್, ಶಂಕರ್ ನಾಯಕ್, ಸಿ.ಕೆ.ಗಂಗಾಧರ್,ಸಿ.ಕೆ.ಶೇಷಾದ್ರಿ,ಡೈರಿ ಅಧ್ಯಕ್ಷ ಪ್ರಕಾಶ್, ಪಿಡಿಓ ಸ್ವಾಮಿನಾಯಕ್, ಕಾರ್ಯದರ್ಶಿ ಪ್ರಕಾಶ್, ಬಿಸಿಯೂಟ ಅಧಿಕಾರಿ ಸ್ವಾಮಿಗೌಡ ಶಿಕ್ಷಕರಾದ ಸಿ.ಎನ್.ಪ್ರಭು ಗ್ರಾಮ ಆಡಳಿತ ಅಧಿಕಾರಿ ಅಜಿತ್ ಇದ್ದರು.

RELATED ARTICLES
- Advertisment -
Google search engine

Most Popular