Monday, February 2, 2026
Google search engine

Homeರಾಜಕೀಯಸಿದ್ದರಾಮಯ್ಯ ‘ಹೌದು ಹುಲಿಯಾ’ ಅಲ್ಲ ‘ಹೌದು ಇಲಿಯಾ’ – ಅಶೋಕ್ ವ್ಯಂಗ್ಯ

ಸಿದ್ದರಾಮಯ್ಯ ‘ಹೌದು ಹುಲಿಯಾ’ ಅಲ್ಲ ‘ಹೌದು ಇಲಿಯಾ’ – ಅಶೋಕ್ ವ್ಯಂಗ್ಯ

ಬೆಂಗಳೂರು : ಸಿದ್ದರಾಮಯ್ಯ ʻಹೌದು ಹುಲಿಯಾʼ ಆಗಿ ಉಳಿದಿಲ್ಲ. ಅವರೀಗ ಹೌದು ಇಲಿಯಾ ಆಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಸಿಎಂಗೆ ವಿಧಾನಸಭೆಯಲ್ಲಿ ಕಾಲೆಳೆದರು.

ರಾಜ್ಯಪಾಲರ ಭಾಷಣ ಮೇಲೆ ಚರ್ಚೆ ನಡೆಸಿದ ಆರ್ ಅಶೋಕ್, ಸರ್ಕಾರದ ವೈಫಲ್ಯಗಳು, ಭ್ರಷ್ಟಾಚಾರ ಆರೋಪ ಪ್ರಕರಣಗಳನ್ನ ಪ್ರಸ್ತಾಪಿಸಿ ತರಾಟೆಗೆ ತೆಗೆದುಕೊಂಡ್ರು. ಸಿಎಂ ಡಲ್ ಆಗಿದ್ದಾರೆ, ಮೊದಲಿನ ಹಾಗಿಲ್ಲ. ಆಡಳಿತದಲ್ಲಿ ಬಿಗಿ ಇಲ್ಲ. ʻಹೌದು ಹುಲಿಯಾ ಆಗಿ ಅವ್ರು ಉಳಿದಿಲ್ಲ, ಹೌದು ಇಲಿಯಾʼ ಆಗಿದ್ದಾರೆ. ಲೂಟಿಕೋರ ಅಧಿಕಾರಿಗಳ ವಿರುದ್ಧ ಕ್ರಮ ಇಲ್ಲ. ಇಲಾಖೆಗಳಲ್ಲಿ ಲೂಟಿ ನಿಲ್ತಿಲ್ಲ. ಈ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಲಂಚಾವತಾರ ತಾಂಡವ ಆಡ್ತಿದೆ.

ಸರ್ಕಾರಕ್ಕೆ ನೈತಿಕತೆ ಇಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು. ಸಿಎಂ 17ನೇ ಬಜೆಟ್ ಮಂಡಿಸ್ತಿದ್ದಾರೆ. 18, 19ನೇ ಬಜೆಟ್ ಮಂಡಿಸೋದಾಗಿಯೂ ಹೇಳಿದ್ದಾರೆ. ಸಿಎಂಗೆ ಕಂಗ್ರಾಜುಲೇಷನ್ಸ್ ಅಂತ ಅಶೋಕ್ ಟಾಂಗ್ ಕೊಟ್ರು. ಕೋಗಿಲು ಲೇಔಟ್‌ನಲ್ಲಿದ್ದ ನುಸುಳುಕೋರರ ಪರ ಅನುಕಂಪ. ಕನ್ನಡಿಗರತ್ತ ನಿರ್ಲಕ್ಷ್ಯ. ಅಧಿಕಾರಿಗಳಿಗೆ ಸರ್ಕಾರದಲ್ಲಿ ಬೆದರಿಕೆ ಹಾಕಲಾಗ್ತಿದೆ. ಆತ್ಮಹತ್ಯೆ ಭಾಗ್ಯ ಸಿಕ್ತಿದೆ. ಎರಡು ತಿಂಗಳ ಗೃಹಲಕ್ಷ್ಮಿ, ಒಂದು ತಿಂಗಳ ಅಕ್ಕಿ ಹಣ ಕೊಟ್ಟಿಲ್ಲ. ಇವೆರಡರ 5,675 ಕೋಟಿ ರೂ. ಎಲ್ಲಿಗೆ ಹೋಯ್ತು ಅಂತ ಇದೇವೇಳೆ ಅಶೋಕ್ ಪ್ರಶ್ನಿಸಿದ್ರು.

ಇನ್ನೂ ಮನ್ರೇಗಾ ಯೋಜನೆಗೆ ಗಾಂಧೀಜಿ ಹೆಸರು ತೆಗೆದ ಬಗ್ಗೆ ಆಕ್ಷೇಪಿಸಿದ ಕಾಂಗ್ರೆಸ್‌ಗೆ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರಿನ ಅನೇಕ ಯೋಜನೆಗಳ ಹೆಸರುಗಳಿರುವ ಪಟ್ಟಿಯನ್ನು ಓದಿ ಅಶೋಕ್ ಕೌಂಟರ್ ಕೊಟ್ರು. ಸದನದಲ್ಲಿ ಕಾಂಗ್ರೆಸ್ ಅವಧಿಯಲ್ಲಿ ನೆಹರೂ, ಇಂದಿರಾ, ರಾಜೀವ್ ಗಾಂಧಿ ಹೆಸರಿನ ಯೋಜನೆಗಳ ಲಿಸ್ಟ್ ಇರುವ ಬಿಲ್ ಮಾದರಿಯಲ್ಲಿರುವ ಅಂದಾಜು ಎರಡು ಮೀಟರ್ ಉದ್ದದ ಪಟ್ಟಿ ಓದುವ ಮೂಲಕ ಗಮನ ಸೆಳೆದ್ರು.

ಈ ವೇಳೆ ಗಾಂಧಿ ಹೆಸರಿನಲ್ಲೂ ಯೋಜನೆಗಳಿವೆ, ಅದನ್ಯಾಕೆ ಬಿಟ್ರಿ ಅಂತ ಬೈರತಿ ಸುರೇಶ್ ಆಕ್ಷೇಪಿಸಿದ್ರು. ಮೊಬೈಲ್‌ನಲ್ಲಿ ಗಾಂಧಿ ಹೆಸರಿನ ಯೋಜನೆಗಳನ್ನ ಓದುವ ಮೂಲಕ ಬೈರತಿ ಸುರೇಶ್ ಅಶೋಕ್‌ಗೆ ಟಕ್ಕರ್ ಕೊಟ್ರು. ಇನ್ನು 80% ಕಮೀಷನ್ ಕುರಿತ ಗುತ್ತಿಗೆದಾರರ ಆರೋಪ ಪ್ರಸ್ತಾಪಿಸಿ ಅಶೋಕ್ ವಾಗ್ದಾಳಿ ನಡೆಸಿದ್ರು.

ಸರ್ಕಾರದ ಮೇಲೆ 80% ಕಮೀಷನ್ ಆರೋಪ ಮಾಡಿರುವ ಗುತ್ತಿಗೆದಾರರ ಮೇಲೆ ಕ್ರಮ ಯಾಕೆ ಕೈಗೊಂಡಿಲ್ಲ, ಸರ್ಕಾರ ಕಮೀಷನ್ ಆರೋಪ ನಿಜ ಅಂತ ಸುಮ್ನಿದೆಯಾ ಅಂತ ಅಶೋಕ್ ಕುಟುಕಿದ್ರು. ಕಲಾವಿದೆ ಬಿ ಜಯಶ್ರೀ ಅವರಿಗೆ ಸರ್ವೆ ಅಧಿಕಾರಿಗಳು ಕಚೇರಿಗೆ ಅಲೆದಾಡಿಸ್ತಿರುವುದು, ಲೋಕಾ ಬಲೆಗೆ ಬಿದ್ದ ಇನ್ಸ್ಪೆಕ್ಟರ್ ಕೂಗಿಕೊಂಡ ಪ್ರಕರಣ, ಡಿಕೆಶಿಯಿಂದ ಬ್ರ‍್ಯಾಂಡ್ ಬೆಂಗಳೂರು ಜಪ ಮರೆಯಾಗಿರುವುದು, ಜಾರ್ಜ್ ರಾಜೀನಾಮೆ ವದಂತಿ, ಡ್ರಗ್ಸ್ ಫ್ಯಾಕ್ಟರಿ ಪತ್ತೆ, ರಾಜೀವ್ ಗೌಡ ಧಮ್ಕಿ ಪ್ರಕರಣ, ಕಾನೂನು ಸುವ್ಯವಸ್ಥೆ, ಕೇಂದ್ರ-ರಾಜ್ಯ ಸಂಘರ್ಷ ಇತ್ಯಾದಿ ವಿಚಾರ ಪ್ರಸ್ತಾಪಿಸಿ ಸರ್ಕಾರದ ವಿರುದ್ಧ ಅಶೋಕ್ ವಾಗ್ದಾಳಿ ನಡೆಸಿದ್ರು.

RELATED ARTICLES
- Advertisment -
Google search engine

Most Popular