Sunday, April 20, 2025
Google search engine

Homeಆರೋಗ್ಯಊಟ- ತಿಂಡಿ ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸವಿದ್ದರೆ, ಈಗಲೇ ಅಭ್ಯಾಸವನ್ನು ಬದಲಿಸಿಕೊಳ್ಳಿ.....

ಊಟ- ತಿಂಡಿ ತಿಂದ ತಕ್ಷಣ ನೀರು ಕುಡಿಯುವ ಅಭ್ಯಾಸವಿದ್ದರೆ, ಈಗಲೇ ಅಭ್ಯಾಸವನ್ನು ಬದಲಿಸಿಕೊಳ್ಳಿ…..

  • ನಮ್ಮ ಆರೋಗ್ಯಕ್ಕೆ ನೀರು ಬಹಳ ಮುಖ್ಯ.
  • ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ.
  • ಊಟ ಮಾಡುವಾಗ ನೀರು ಕುಡಿಯುವುದನ್ನು ತಪ್ಪಿಸಬೇಕು.
  • ಊಟ ಮಾಡುವ ಮೊದಲು ಅರ್ಧ ಗಂಟೆಗೆ ಮುಂಚೆ ಅಥವಾ ಊಟ ಆದ ಅರ್ಧ ಗಂಟೆಗಳ ನಂತರ ನೀರು ಕುಡಿಯುವುದು ಸೂಕ್ತ.

ಬೇಸಿಗೆ ಕಾಲದಲ್ಲಿ ಬಿಸಿಲಿನ ಝಳಕ್ಕೆ ಹೆಚ್ಚು ಬಾಯಾರಿಕೆಯಾಗುವುದು ಸಹಜ. ಬಾಯಾರಿಕೆಯ ದಣಿವಾರಿಸಿಕೊಳ್ಳಲು ಹೆಚ್ಚು ನೀರು ಕುಡಿಯುತ್ತೇವೆ. ಆದರೆ ಇದನ್ನು ಉಳಿದ ಕಾಲದಲ್ಲಿಯೂ ಅನುಸರಿಸಲು ಸಾಧ್ಯವಿಲ್ಲ .ಅನೇಕ ಬಾರಿ ತಪ್ಪಾದ ಸಮಯದಲ್ಲಿ ನಾವು ನೀರು ಕುಡಿಯುವುದರಿಂದ ಪ್ರಯೋಜನಕ್ಕೆ ಬದಲಾಗಿ ಹಾನಿ ಉಂಟಾಗುವುದು. ನಮ್ಮ ಆರೋಗ್ಯಕ್ಕೆ ನೀರು ಬಹಳ ಮುಖ್ಯ. ಅದರಿಂದಾಗಿಯೇ ಆರೋಗ್ಯ ತಜ್ಞರು ಹೇಳುವುದೇನೆಂದರೆ ಪ್ರತಿದಿನ ಮೂರರಿಂದ ನಾಲ್ಕು ಲೀಟರ್ ನೀರು ಕುಡಿಯುವುದು ಮನುಷ್ಯನ ಆರೋಗ್ಯಕ್ಕೆ ಉತ್ತಮ ಎಂದು ಶಿಫಾರಸ್ಸು ಮಾಡುತ್ತಾರೆ.

ಆದರೆ ವೈದ್ಯರ ಪ್ರಕಾರ ಊಟ ಮಾಡುವಾಗ ನೀರು ಕುಡಿಯುವುದನ್ನು ತಪ್ಪಿಸಬೇಕು. ಇದಕ್ಕೆ ಬದಲು ಊಟ ಮಾಡುವ ಮೊದಲು ಅರ್ಧ ಗಂಟೆಗೆ ಮುಂಚೆ ಅಥವಾ ಊಟ ಆದ ಅರ್ಧ ಗಂಟೆಗಳ ನಂತರ ನೀರು ಕುಡಿಯುವುದು ಸೂಕ್ತ. ಊಟದ ಜೊತೆಗೆ ಅಥವಾ ಊಟ ಮಾಡಿದ ತಕ್ಷಣ ನೀರು ಕುಡಿಯುವುದರಿಂದ ಹೊಟ್ಟೆ ಉಬ್ಬುವುದು, ಅಸಿಡಿಟಿ ಇನ್ನು ಮುಂತಾದ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಆಹಾರ ಸೇವಿಸಿದ ತಕ್ಷಣ ನೀರು ಕುಡಿಯುವ ಜನರು ಹಲವಾರು ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ.

ಆಹಾರ ತಿಂದ ಎಷ್ಟು ಸಮಯದ ನಂತರ ನೀರು ಕುಡಿದರೆ ಒಳ್ಳೆಯದು ಇಲ್ಲಿದೆ ಅದಕ್ಕೆ ಮಾಹಿತಿ…….

ನಾವು ತಿಂದ ಆಹಾರ ಜೀರ್ಣಗೊಳ್ಳಲು ಸುಮಾರು 2 ಗಂಟೆಗಳ ಕಾಲ ಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ನಂಬುತ್ತಾರೆ. ಆದ್ದರಿಂದ ಊಟ ಆದ ತಕ್ಷಣ ನೀರು ಕುಡಿಯುವ ಅಭ್ಯಾಸ ಜೀರ್ಣ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ಆಹಾರವನ್ನು ಸೇವಿಸಿದ 45 ಅಥವಾ 60 ನಿಮಿಷಗಳ ನಂತರ ನೀರನ್ನು ಕುಡಿದರೆ ಉತ್ತಮ ಅಷ್ಟೇ ಅಲ್ಲದೆ ಸರಿಯಾದ ಸಮಯಕ್ಕೆ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳೆಂದರೆ ತೂಕ ನಿಯಂತ್ರಣದಲ್ಲಿರುತ್ತದೆ ,ಜೀರ್ಣಕ್ರಿಯೆ ಸರಿಯಾಗಿರುತ್ತದೆ, ಜೊತೆಗೆ ಜೀರ್ಣಾಂಗ ವ್ಯವಸ್ಥೆಯು ಸದೃಢವಾಗಿರುತ್ತದೆ .ಹೊಟ್ಟೆಯಲ್ಲಿ ಗ್ಯಾಸ್ ಮತ್ತು ಅಸಿಡಿಟಿ ಸಮಸ್ಯೆ ಇರುವುದಿಲ್ಲ ಜೊತೆಗೆ ಸರಿಯಾದ ಸಮಯಕ್ಕೆ ನೀರು ಕುಡಿಯುವುದು ಉತ್ತಮ ನಿದ್ದೆಯನ್ನು ಪಡೆಯಲು ಸಹಾಯ ಮಾಡುವುದಲ್ಲದೆ ದೇಹವು ಆಹಾರದಲ್ಲಿರುವ ಪೋಷಕಾಂಶಗಳನ್ನು ಚೆನ್ನಾಗಿ ಹೀರಿಕೊಳ್ಳುವಂತೆ ಮಾಡುತ್ತದೆ.

ಆಹಾರ ಸೇವನೆ ತಕ್ಷಣ ನೀರು ಕುಡಿಯುವುದರಿಂದ ಆಗುವ ಅನಾನುಕೂಲಗಳು

ಆಹಾರ ಸೇವನೆ ತಕ್ಷಣ ನೀರು ಕುಡಿಯುವುದರಿಂದ ಕೆಲವೊಂದು ಅನಾನುಕೂಲಗಳು ಉಂಟಾಗಬಹುದು.

ಅವುಗಳೆಂದರೆ ಸ್ಥೂಲಕಾಯ ಸಮಸ್ಯೆ, ಜೀರ್ಣಕ್ರಿಯ ಸಮಸ್ಯೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವ ಸಮಸ್ಯೆ ,ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಗಳು ಇನ್ನು ಇತ್ಯಾದಿ ಸಮಸ್ಯೆಗಳು ಉಂಟಾಗಬಹುದು.

ಆದ್ದರಿಂದ ಊಟಕ್ಕೆ ಮೊದಲು ಊಟದ ನಂತರ ನೀರು ಕುಡಿಯುವ ಸರಿಯಾದ ಕ್ರಮವನ್ನು ಅನುಸರಿಸಿಕೊಂಡಲ್ಲಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿ ಇರುತ್ತದೆ.

RELATED ARTICLES
- Advertisment -
Google search engine

Most Popular