Sunday, February 8, 2026
Google search engine

Homeಅಪರಾಧಮಂಗಳೂರಲ್ಲಿ MDMA ಮಾರುತ್ತಿದ್ದ ಮಂಡ್ಯ ಮೂಲದ ಯುವಕ ಅರೆಸ್ಟ್

ಮಂಗಳೂರಲ್ಲಿ MDMA ಮಾರುತ್ತಿದ್ದ ಮಂಡ್ಯ ಮೂಲದ ಯುವಕ ಅರೆಸ್ಟ್

MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ ಮಂಡ್ಯ ಮೂಲದ ಯುವಕನನ್ನು ಮಂಗಳೂರಲ್ಲಿ‌ ಬಂಧಿಸಲಾಗಿದೆ. 21 ವರ್ಷದ ಜೋರ್ಡನ್, ಬಂಧಿತ ಯುವಕ. ಕೊಣಾಜೆ ಪೊಲೀಸ್ ಠಾಣೆಯ ನಿರೀಕ್ಷಕರು, ಉಪನಿರೀಕ್ಷಕರು, ಸಿಬ್ಬಂದಿಗಳು ಹಾಗೂ ಮಂಗಳೂರು ದಕ್ಷಿಣ ಉಪವಿಭಾಗದ Anti–Drug Team ನ ಸಿಬ್ಬಂದಿಗಳು ನಿನ್ನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ಉಳ್ಳಾಲ ತಾಲೂಕು, ಬಾಳೆಪುಣಿ ಗ್ರಾಮದ ನವಗ್ರಾಮ ಸೈಟ್ ನಾರ್ಯಗುತ್ತು ಗುಡ್ಡ ಪ್ರದೇಶದಲ್ಲಿ ನಿಷೇಧಿತ MDMA ಮಾದಕ ವಸ್ತುವನ್ನು ಮಾರಾಟ ಮಾಡುತ್ತಿರುವುದಾಗಿ ಬಂದ ಖಚಿತ ಮಾಹಿತಿಯ ಮೇರೆಗೆ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಆತನ ವಶದಿಂದ 55 ಗ್ರಾಂ MDMA ಮಾದಕ ವಸ್ತು, 1 ಮೊಬೈಲ್, ಡಿಜಿಟಲ್ ತೂಕದ ಮಾಪನ ಯಂತ್ರ ಸೇರಿದಂತೆ ಇತರ ವಸ್ತುಗಳನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಈ ಸಂಬಂಧ ಆರೋಪಿತನ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 14/2026,
ಕಲಂ : 8(ಸಿ), 22(ಎ), 22(ಬಿ), 22(ಸಿ) NDPS ಕಾಯ್ದೆಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular