Monday, February 9, 2026
Google search engine

Homeರಾಜ್ಯಸಮಾಜ ಕಲ್ಯಾಣ ಇಲಾಖೆ ಮೂಲಕ ಎಸ್‌ಸಿ–ಎಸ್‌ಟಿಗೆ ಸೈಟ್ ಯೋಜನೆ

ಸಮಾಜ ಕಲ್ಯಾಣ ಇಲಾಖೆ ಮೂಲಕ ಎಸ್‌ಸಿ–ಎಸ್‌ಟಿಗೆ ಸೈಟ್ ಯೋಜನೆ

ದಾವಣಗೆರೆ : ಪರಿಶಿಷ್ಟ ಜಾತಿ(ಎಸ್​​ಟಿ) ಹಾಗೂ ಪರಿಶಿಷ್ಟ ಪಂಗಡ (ಎಸ್​​​ಸಿ) ಸಮುದಾಯದವರಿಗೆ ಈವರೆಗೆ ಭೂಮಿ ನೀಡಲಾಗುತ್ತಿತ್ತು. ಇದೀಗ ಸೈಟ್​​ ಸಹ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಲಾಗಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ರಾಜನಹಳ್ಳಿಯಲ್ಲಿ ನಡೆದ ವಾಲ್ಮೀಕಿ ಜಾತ್ರೆ ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣೆ ಇಲಾಖೆಯಿಂದ ಎಸ್​​​ಸಿ ಎಸ್​​ಟಿ ಸಮುದಾಯವರಿಗೆ ವಿಶೇಷ ಅನುದಾನ ನೀಡಿದ್ದು, ಭೂಮಿ ಖರೀದಿ ಮಾಡಿ ಸೈಟ್​​ ನೀಡಲು ಹಣ ಕೊಟ್ಟಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಅನುಮೋದನೆ ನೀಡಬೇಕಿದೆ. ಒಂದು ವೇಳೆ ಸಿಎಂ ಅನುಮೋದನೆ ಕೊಟ್ಟರೆ ಸಮುದಾಯದ ಜನರಿಗೆ 30 40 ಸೈಟ್ ನೀಡಲಾಗುವುದು ಎಂದು ಘೋಷಣೆ ಮಾಡಿದರು.

RELATED ARTICLES
- Advertisment -
Google search engine

Most Popular