ಮಂಗಳೂರು ನಗರದ ಪೊಲೀಸರು ನಗದು ಕಳವು ಪ್ರಕರಣವನ್ನು ಭೇಧಿಸಿ ಕ್ಷಿಪ್ರ ಕಾರ್ಯಾಚರಣೆಯನ್ನು ನಡೆಸಿ ಆರೋಪಿತನನ್ನು ಬಂಧಿಸಿದ್ದಾರೆ.
ಮಹಮ್ಮದ್ ನಿಜಾಮುದ್ದಿನ್ ಎಂಬವರು ದಿನಾಂಕ 07/02/2026 ರಂದು ಶ್ರೀಧರ ಆಳ್ವರವರಿಗೆ ಸೇರಿದ ಅಡಿಕೆಯನ್ನು ಕೆಎ-19-AE-8663 ನೇ ಟಾಟಾ ಇಂಟ್ರಾ ವಾಹನದಲ್ಲಿ ತುಂಬಿಸಿಕೊಂಡು ಬೀಬಿ ಅಲಾಬಿಯಲ್ಲಿರುವ ಅಂಬಾರ ಸುಪಾರಿ ಅಂಗಡಿಗೆ ಮಾರಾಟ ಮಾಡಿ ಅವರು ನೀಡಿದ 1,28740ನ್ನು ತನ್ನ ವಾಹನದ ಡ್ಯಾಶ್ ಬೋರ್ಡ್ ನಲ್ಲಿಟ್ಟು ವಾಹನವನ್ನು ಚಲಾಯಿಸಿಕೊಂಡು 10.30ಕ್ಕೆ ಬಂದರ್ ನ ಜೆ.ಎಂ.ರೋಡ್ ನಲ್ಲಿರುವ ಸದರ್ನ್ ಏಜೆನ್ಸಿಯಲ್ಲಿ ಎಸಿಪಿ ಶೀಟ್ ಖರೀದಿ ಮಾಡಿ ವಾಹನದಲ್ಲಿ ಕುಳಿತು ಡ್ಯಾಶ್ ಬೋರ್ಡ್ ತೆರೆದಿದ್ದು, ಅದರಲ್ಲಿಟ್ಟಿದ್ದ ರೂ 1,28740/- ಕಳ್ಳತನವಾಗಿರುವುದು ಕಂಡು ಬಂದಿದೆ. ಈ ಬಗ್ಗೆ ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ನಂಬ್ರ 18/2026 ಕಲಂ 303(2) ಬಿ.ಎನ್.ಎಸ್ ಯಂತೆ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣದ ಆರೋಪಿ ಹಾಗೂ ಸೊತ್ತು ಪತ್ತೆಯ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಚಿನ್ ಕುಮಾರ್, ಪೊಲೀಸ್ ಉಪ ನಿರೀಕ್ಷಕ ಶೀತಲ್ ಅಲಗೂರು, ಎ,ಎಸ್,ಐ ಗಳಾದ ಶಶಿಧರ, ದಾಮೋದರ್ ಹಾಗೂ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಗಳನ್ನು ಒಳಗೊಂಡ ತಂಡ ದಿನಾಂಕ: 08.02.2026 ರಂದು ಪ್ರಕರಣದ ಆರೋಪಿ ಝಾಕೀರ್ ಹುಸೈನ್ @ ಜಾಕಿ ಎಂಬಾತನನ್ನು ನಗರದ ಮಣ್ಣಗುಡ್ಡ ಜಂಕ್ಷನ್ ಬಳಿ ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಕಳವು ಮಾಡಿದ ನಗದು ಹಣ ರೂ. 70,000/-, 2) ಕೃತ್ಯಕ್ಕೆ ಬಳಸಿದ ದ್ವಿಚಕ್ರವಾಹನ, ಕಳ್ಳತನದ ಹಣದಿಂದ ಖರೀದಿಸಿದ ವಿವೋ ಕಂಪನಿಯ ಮೊಬೈಲ್ ಪೋನನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ. ಆರೋಪಿತನ ವಿರುದ್ದ ಉಡುಪಿ ಜಿಲ್ಲೆಯ ಕುಂದಾಪುರ ಪೊಲೀಸ್ ಠಾಣೆಯಲ್ಲಿ ರಾತ್ರಿ ಮನೆ ಕಳವು ಪ್ರಕರಣದಲ್ಲಿ ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ವ್ಯಾಪ್ತಿಯಲ್ಲಿ ಅಟೋರಿಕ್ಷಾದ ಶೀಟ್ ನಲ್ಲಿ ಇಟ್ಟಿದ ನಗದು ಹಣವನ್ನು ಕಳವು ಮಾಡಿದ ಪ್ರಕರಣದ ಆರೋಪಿತನಾಗಿರುತ್ತಾನೆ.
- ಮಂಗಳೂರಿನಿಂದ ಶಂಶೀರ್ ಬುಡೋಳಿ



