Wednesday, February 11, 2026
Google search engine

Homeಸ್ಥಳೀಯಕಾವೇರ ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ: ಕಪ್ಪಡಿ ಮಧು ಸಾಹಸ

ಕಾವೇರ ನದಿಯಲ್ಲಿ ಮುಳುಗುತ್ತಿದ್ದ ಯುವಕನ ರಕ್ಷಣೆ: ಕಪ್ಪಡಿ ಮಧು ಸಾಹಸ

ವಿನಯ್ ದೊಡ್ಡಕೊಪ್ಪಲು

ಕೆ.ಆರ್.ನಗರ : ನದಿಯಲ್ಲಿ ಮುಳುಗುತ್ತಿದ್ದ ವ್ಯಕ್ತಿಯೋರ್ವನನ್ನ ಜೀವದ ಹಂಗು ತೊರೆದು ರಕ್ಷಿಸಿರುವ ಘಟನೆ ಕೆ.ಅರ್.ನಗರ ತಾಲೂಕಿನ ಕಪ್ಪಡಿ ದೇವಸ್ಥಾನದ ಬಳಿ ಮಂಗಳವಾರ ನಡೆದಿದೆ
ಅರಸನಕೊಪ್ಪಲು ಗ್ರಾಮದ ಪೂಜಾರಪ್ಪನ ಮಗ ಮಂಜು ಎಂಬಾತನೇ ಕಾವೇರಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ವೇಳೆ ಈಜು ಬಾರದೇ ನದಿಯಲ್ಲಿ ಮುಳುಗುತ್ತಿದ್ದಾಗ ಹೆಬ್ಬಾಳು ಕೊಪ್ಪಲು ಗ್ರಾಮದ ಕಪ್ಪಡಿ ಮಧು ಇವರನ್ನು ರಕ್ಷಣೆ ಮಾಡಿದ್ದಾರೆ.

ಅರಸನಕೊಪ್ಪಲು ಗ್ರಾಮದ ಬೆಳೆವಲ್ಲದಮ್ಮ ದೇಚಿ ದೇವರ ಉತ್ಸವ ಮೂರ್ತಿ ಗಳನ್ನು ಕಾವೇರಿ ನದಿಯಲ್ಲಿ ತೊಳೆಯಲು ಬಂದಾಗ ಈ ಘಟನೆ ನಡೆದಿದ್ದು ಮಂಜು ಅವರು ನದಿಯಲ್ಲಿ ಮುಳುಗುತ್ತಿದ್ದನ್ನ ಕಂಡ ಸಾರ್ವಜನಿಕರು ಕಿರುಚಿಕೊಂಡಿದ್ದು ತಕ್ಷಣವೇ ಕಪ್ಪಡಿ ಮಧು ನದಿಗೆ ಹಾರಿ ರಕ್ಷಣೆ ಮಾಡಿದರು.

ನಂತರ ನದಿಯ ಮಧ್ಯಭಾಗದಿಂದ ದಡಕ್ಕೆ ಮಂಜು ಅವರು ಅವರನ್ನು ಕರೆದು ತಂದಾಗ ಕಪ್ಪಡಿ ಮಧು ಅವರ ಕಾಲನ್ನು ನಮಸ್ಕಾರ ಮಾಡಿ ಜೀವ ಉಳಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿ ಭಾವುಕರಾದರೂ
ಎರಡು ನಿಮಿಷ ತಡ ಮಾಡಿದರು ಜೀವವೇ ಹೋಗುವ ಸನ್ನಿವೇಶ ಇರುವಾಗ ಜೀವದ ಹಂಗನ್ನು ತೊರೆದು ಮಂಜು ಅವರ ಪ್ರಾಣ ಉಳಿಸಿದ ಕಪ್ಪಡಿ ಮಧು ಅವರ ಕಾರ್ಯಕ್ಕೆ ಅರಸನಕೊಪ್ಪಲು ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ

RELATED ARTICLES
- Advertisment -
Google search engine

Most Popular