Wednesday, February 11, 2026
Google search engine

Homeಸ್ಥಳೀಯಅವಧಿ ಮುಗಿದರೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಇಲ್ಲ: ಚುನಾವಣೆ ವಿಳಂಬದಿಂದ ಅಭಿವೃದ್ಧಿಗೆ ಬ್ರೇಕ್

ಅವಧಿ ಮುಗಿದರೂ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಇಲ್ಲ: ಚುನಾವಣೆ ವಿಳಂಬದಿಂದ ಅಭಿವೃದ್ಧಿಗೆ ಬ್ರೇಕ್

ವರದಿ : ಕುಪ್ಪೆಮಹದೇವಸ್ವಾಮಿ

ಕೆ.ಆರ್.ನಗರ : ಅವಧಿ ಮುಗಿದರು ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸದ ರಾಜ್ಯ ಸರ್ಕಾರದ ನಿರ್ಲಕ್ಷ್ಯಧೋರಣೆಯಿಂದ ಅವುಗಳ ಆಡಳಿತ ನಿಸ್ತೇಜಗೊಂಡಿದ್ದು ಜನರಿಗೆ ಸಿಗುವ ಮತ್ತು ದೊರೆಯಬೇಕಾಗಿರುವ ಸವಲತ್ತುಗಳು ಸಕಾಲದಲ್ಲಿ ತಲುಪಲು ವಿಳಂಬವಾಗುತ್ತಿವೆ.

ಜಿ.ಪಂ.ಮತ್ತು ತಾ.ಪಂ.ಅವಧಿ ಮುಗಿದು ಐದು ವರ್ಷಗಳಾಗಿದ್ದರು ಮೀಸಲಾತಿ ನಿಗದಿ ಮತ್ತು ಕ್ಷೇತ್ರ ಪುನರ್ವಿಂಗಡಣೆಯ ನೆಪವೊಡ್ಡುತ್ತಿರುವ ಸರ್ಕಾರ ಚುನಾವಣೆ ನಡೆಸಲು ಮೀನ ಮೇಷ ಎಣಿಸುತಿದ್ದು ಇದು ಮತದಾರರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ.
ಸಾರ್ವಜನಿಕರ ಜತೆಗೆ ಜಿ.ಪಂ.ಮತ್ತು ತಾ.ಪಂ.ಸದಸ್ಯ ಸ್ಥಾನಗಳ ವಿವಿದ ರಾಜಕೀಯ ಪಕ್ಷಗಳ ಆಕಾಂಕ್ಷಿಗಳು ಚುನಾವಣೆ ಯಾವಾಗ ನಡೆಯುವುದೋ ಎಂದು ಜಾತಕ ಪಕ್ಷಿಗಳಂತೆ ಕಾಯುತ್ತಿದ್ದು ಸ್ವತ: ಆಡಳಿತ ಪಕ್ಷದ ಕೆಲವರಿಗೆ ಸರ್ಕಾರದ ನಿರ್ಲಕ್ಷ್ಯ ನೀತಿ ಬೇಸರ ತರಿಸಿದೆ.

ಕೆ.ಆರ್.ನಗರ ವಿದಾನ ಸಭಾ ಕ್ಷೇತ್ರದ ವಿಚಾರಕ್ಕೆ ಬಂದರೆ ೪ ವರ್ಷಗಳ ಹಿಂದೆ ಎಪಿಎಂಸಿ ಆಡಳಿತ ಮಂಡಳಿಯ ಅಧಿಕಾರಾವಧಿ ಮುಗಿದಿದ್ದು ಈವರೆಗೆ ಚುನಾವಣೆ ನಡೆದಿಲ್ಲಾ ಹಾಗೂ ರಾಜ್ಯದ ಯಾವ ತಾಲೂಕಿನಲ್ಲಿಯೂ ಎಪಿಎಂಸಿ ಆಡಳಿತ ಮಂಡಳಿ ಅಧಿಕಾರದಲ್ಲಿ ಇಲ್ಲದಿರುವುದರಿಂದ ಅಲ್ಲಿ ಹೇಳುವವರು ಕೇಳುವವರೆ ಇಲ್ಲದಂತಾಗಿದೆ.
ಕೆ.ಆರ್.ನಗರ ಟಿಎಪಿಸಿಎಂಎಸ್ ಆಡಳಿತ ಮಂಡಳಿಗೆ ಕಳೆದ ನಾಲ್ಕು ವರ್ಷಗಳ ಹಿಂದೆ ಚುನಾವಣೆ ನಡೆದು ಜೆಡಿಎಸ್ ಬೆಂಬಲಿತರು ಅಧಿಕಾರದ ಚುಕ್ಕಾಣಿ ಹಿಡಿದಿದ್ದರು ಆನಂತರ ನಡೆದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ರಾಜಕೀಯ ಸಂಘರ್ಷದಿಂದ ಕಾಂಗ್ರೆಸ್ ಬೆಂಬಲಿತರು ಸಾಮೂಹಿಕವಾಗಿ ರಾಜೀನಾಮೆ ನೀಡಿದ್ದರಿಂದ ಕೋರಂ ಅಭಾವ ಎದುರಾಗಿ ಆಡಳಿತ ಮಂಡಳಿ ವಜಾ ಆಯಿತು.

ಪ್ರಸ್ತುತ ಕಳೆದ ೧೫ ತಿಂಗಳಿನಿಂದ ಟಿಎಪಿಸಿಎಂಎಸ್ ವಿಶೇಷಾಧಿಕಾರಿಯಾಗಿ ಸಹಕಾರ ಅಭಿವೃದ್ದಿ ಅಧಿಕಾರಿ ಎಸ್.ರವಿ ಕಾರ್ಯ ನಿರ್ವಹಿಸುತ್ತಿದ್ದು ಈ ಆಡಳಿತ ಮಂಡಳಿಯ ಚುನಾವಣೆ ಯಾವಾಗ ನಡೆಯುತ್ತದೆ ಎಂಬುದು ಯಾರಿಗೂ ತಿಳಿಯದಾಗಿದೆ.
ಉಳಿದಂತೆ ಕೆ.ಆರ್.ನಗರ ಪಟ್ಟಣದ ಪುರಸಭೆಯ ಆಡಳಿತ ಮಂಡಳಿಯ ಅವಧಿ ನ, ೬ ಕ್ಕೆ ಅಂತ್ಯವಾಗಿದ್ದು ಹುಣಸೂರು ಉಪ-ವಿಭಾಗಾಧಿಕಾರಿಗಳು ಆಡಳಿತಾಧಿಕಾರಿಯಾಗಿದ್ದು ಅಲ್ಲಿಯೂ ಅಭಿವೃದ್ದಿ ಕಾರ್ಯಗಳು ನಿರೀಕ್ಷಿತ ವೇಗದಲ್ಲಿ ನಡೆಯದೆ ನಾಗರೀಕರಿಗೆ ತೊಂದರೆಯಾಗುತ್ತಿದೆ.
ಈ ಸ್ಥಳೀಯ ಸಂಸ್ಥೆಗಳೊಂದಿಗೆ ಗ್ರಾಮ ಪಂಚಾಯ್ತಿಗಳ ಅವಧಿಯೂ ಪೂರ್ಣಗೊಂಡಿರುವುದರಿಂದ ತಾಲೂಕು ಮಟ್ಟದ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಈಗಾಗಲೇ ಆಡಳಿತಾಧಿಕಾರಿಗಳನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.

ಸರ್ಕಾರದ ಜನಪರವಾದ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡಿ ಅರ್ಹರ ಮನೆ ಬಾಗಿಲಿಗೆ ತಲುಪಿಸುವ ಸಂಪರ್ಕ ಸೇತುವೆಗಳಾಗಿರುವ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದಿದ್ದರೆ ಅಭಿವೃದ್ದಿಯ ವೇಗ ಕಡಿಮೆಯಾಗಿ ಸವಲತ್ತುಗಳು ಅನರ್ಹರ ಪಾಲಾಗಲಿದ್ದು ರಾಜ್ಯ ಸರ್ಕಾರ ಮೊದಲೆ ಈ ವಿಚಾರವನ್ನು ಮನಗಂಡು ಅವಧಿ ಮುಗಿದಿರುವ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂಬುದು ನಾಗರೀಕರ ಒಕ್ಕೊರಲ ಆಗ್ರಹವಾಗಿದೆ.

ಕೆ.ಆರ್.ನಗರ : ಗ್ರಾಮ ಪಂಚಾಯ್ತಿಗಳ ಚುನಾಯಿತ ಸದಸ್ಯರು ಮತ್ತು ಆಡಳಿತ ಮಂಡಳಿಯ ಐದು ವರ್ಷಗಳ ಅಧಿಕಾರಾವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕುಗಳ ೩೪ ಗ್ರಾಮ ಪಂಚಾಯ್ತಿಗಳ ಆಡಳಿತಾಧಿಕಾರಿಗಳನ್ನಾಗಿ ತಾಲೂಕು ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಕೆ.ಆರ್.ನಗರ: ತಾಲೂಕಿನ ಹೊಸ ಅಗ್ರಹಾರ, ಲಾಳಂದೇವನಹಳ್ಳಿ ಮತ್ತು ಡರ‍್ನಹಳ್ಳಿ ಗ್ರಾಮ ಪಂಚಾಯತಿಗೆ ಸಿಡಿಪಿಒ ಸಿ.ಎಂ.ಅಣ್ಣಯ್ಯ, ಗಂಧನಹಳ್ಳಿ, ತಿಪ್ಪೂರು ಪಂಚಾಯ್ತಿಗೆ ಹಾರಂಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ಅಯಾಜ್, ಕಗ್ಗೆರೆ ಮತ್ತು ಅಡಗೂರು ಪಂಚಾಯ್ತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿದೇಶಕ ಶಂಕರಮೂರ್ತಿ, ಅರ್ಜುನಹಳ್ಳಿ ಮತ್ತು ಹಂಪಾಪುರ ಗ್ರಾಮ ಪಂಚಾಯತಿಗೆ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಮೇಘನಾ, ಚಂದಗಾಲು ಮತ್ತು ಹೆಬ್ಬಾಳು ಪಂಚಾಯ್ತಿಗಳಿಗೆ ಸೆಸ್ಕಾಂ ಎಇಇ ಅರ್ಕೇಶ್ವರಮೂರ್ತಿ, ಬ್ಯಾಡರಹಳ್ಳಿ ಮತ್ತು ಸಿದ್ದಾಪುರ ಪಂಚಾಯ್ತಿಗಳಿಗೆ ಲೊಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರೆ ಸುಮಿತಾ ಹಾಗೂ ಮಾವತ್ತೂರು ಮತ್ತು ಕೆಸ್ತೂರು ಪಂಚಾಯತಿಗಳಿಗೆ ಪಂಚಾಯತ್ ರಾಜ್ ಸಹಾಯಕ ಅಭಿಯಂತರ ವಿನುತ್ ನೇಮಕಗೊಂಡಿದ್ದಾರೆ.

ಸಾಲಿಗ್ರಾಮ ತಾಲೂಕಿನ ಹರದನಹಳ್ಳಿ ಮತ್ತು ಮೇಲೂರು ಗ್ರಾಮ ಪಂಚಾಯ್ತಿಗಳಿಗೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಶಂಕರಮೂರ್ತಿ, ಮೇಲೂರು, ಅಂಕನಹಳ್ಳಿ ಮತ್ತು ಮಿರ್ಲೆ ಪಂಚಾಯ್ತಿಗಳಿಗೆ ಬಿಇಒ ಆರ್ ಕೃಷ್ಣಪ್ಪ, ಶೀಗವಾಳು, ಹೊನ್ನೇನಹಳ್ಳಿ ಪಂಚಾಯ್ತಿಗಳಿಗೆ ಸಾಲಿಗ್ರಾಮದ ಹಾರಂಗಿ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜೇಂದ್ರಕುಮಾರ್, ಕರ್ಪೂರವಳ್ಳಿ ಪಂಚಾಯತಿಗೆ ಕೆ.ಆರ್.ನಗರ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಾರ್ಯಪಾಲಕ ಅಭಿಯಂತರ ವಿನುತ್, ಸಾಲಿಗ್ರಾಮ, ಮುಂಜನಹಳ್ಳಿ ಮತ್ತು ಬೇರ್ಯ ಗ್ರಾಮ ಪಂಚಾಯ್ತಿಗೆ ಸಹಾಯಕ ಕೃಷಿ ನಿರ್ದೇಶಕ ಮಲ್ಲಿಕಾರ್ಜುನ್ ನೇಮಕವಾಗಿದ್ದಾರೆ. ಇವರ ಜೊತೆಗೆ ಲಕ್ಷ್ಮೀಪುರ ಮತ್ತು ತಂದ್ರೆ ಪಂಚಾಯ್ತಿಗೆ ಪಶು ಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ರಾಮು, ಕುಪ್ಪೆಹಂತ ಮತ್ತು ಹೊಸಕೋಟೆ ಪಂಚಾಯ್ತಿಗಳಿಗೆ ಸಹಾಯಕ ರೇಷ್ಮೆ ನಿರ್ದೇಶಕ ಎಂ.ಶಿವಮೂರ್ತಿ, ಹಳಿಯೂರು ಮತ್ತು ನರಚನಹಳ್ಳಿ ಪಂಚಾಯತಿಗಳಿಗೆ ಹೊಸೂರು ಹಾರಂಗಿ ಉಪ-ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಆದರ್ಶ್ ಹಾಗೂ ಹನಸೋಗೆ, ಚನ್ನಂಗೆರೆ ಮತ್ತು ಮಾಯಿಗೌಡನಹಳ್ಳಿ ಪಂಚಾಯತಿಗಳಿಗೆ ತೋಟಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕಿ ಹೆಚ್.ಎಲ್.ಗೀತಾ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

RELATED ARTICLES
- Advertisment -
Google search engine

Most Popular