ವರದಿ :ಸ್ಟೀಫನ್ ಜೇಮ್ಸ್.
ವೇಶ್ಯಾವಾಟಿಕೆಗೆ ಭಿಕ್ಷುಕ ಮಹಿಳೆಯರ ಬಳಕೆ?ಹೊರಗಿನಿಂದ ಮಹಿಳೆ/ಅಪ್ರಾಪ್ತಿಯರ ಕಳ್ಳ ಸಾಗಣೆ ಬಾಡಿಗೆ ಮನೆ, ಹೋಟೆಲ್‌ಗಳಲ್ಲಿ ವೇಶ್ಯಾವಾಟಿಕೆ | ಸರ್ಕಾರವು ಭಿಕ್ಷಾಟನೆ ತಡೆಯಲು ಪ್ರತೀ ವರ್ಷ ಕೋಟ್ಯಂತರ ರೂ. ವ್ಯಯಿಸುತ್ತಿದ್ದರೂ, ಕರ್ನಾಟಕದಲ್ಲಿ ಭಿಕ್ಷಾಟನೆ ಬೃಹತ್ ದಂಧೆಯಾಗಿ ಮಾರ್ಪಟ್ಟಿದೆ.
ಈ ದಂಧೆಯ ಸೂತ್ರದಾರರು ಅಪ್ರಾಪ್ತ ಯುವತಿಯರು ಹಾಗೂ ಮಹಿಳಾ ಬಿಕ್ಷುಕರನ್ನು ವೇಶ್ಯಾವಾಟಿಕೆ ಜಾಲಕ್ಕೆ ದೂಡುತ್ತಿರುವ ಆರೋಪ ಕೇಳಿ ಬಂದಿದ್ದು, ಆತಂಕ್ಕೀಡು ಮಾಡಿದೆ.ರಾಜ್ಯದಲ್ಲಿ ಭಿಕ್ಷುಕರನ್ನು ಮುಂದೆ ಬಿಟ್ಟು ದಂಧೆ ನಡೆಸುವ ಕಾಣದ ಕೈಗಳ ಚಾಲವು ಎಲ್ಲೆಡೆ ವಿಸ್ತರಿಸಿದೆ. ಕರ್ನಾಟಕ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳ ವ್ಯಕ್ತಿಗಳನ್ನೊಳಗೊಂಡ ತಂಡ ವ್ಯವಸ್ಥಿತವಾಗಿ ಭಿಕ್ಷಾಟನೆ ವಂಧೆ ನಡೆಸುತ್ತಿರುವ ಆರೋಪಗಳಿವೆ.
ಈ ತಂಡಕ್ಕೆ ಸ್ಥಳೀಯ ಪ್ರಭಾವಿಗಳು ಹಾಗೂ ಅಧಿಕಾರಿಗಳ ಬೆಂಬಲವೂ ಇದೆ ಎಂಬ ಆರೋಪವಿದೆ. ಈ ತಂಡವು ಮಹಿಳೆಯರು ಹಾಗೂ ಆಪ್ರಾಪ್ತ ಹೆಣ್ಣು ಮಕ್ಕಳನ್ನು ಪ್ರಮುಖ ನಗರಗಳ ದಟ್ಟಣೆ ಪ್ರದೇಶಗಳಲ್ಲಿ ಭಿಕ್ಷಾಟನೆಗೆ ಬಿಡುವ ಜೊತೆಗೆ ವಿವಿಧ ವಸ್ತುಗಳನ್ನು ಮಾರಾಟ ಮಾಡಿಸಿ ಹಣ ಸಂಪಾದಿಸುತ್ತಾರೆ. ಇದರ ಜೊತೆಗೆ ಇದೇ ಮಹಿಳೆಯರು, ಅಪ್ರಾಪ್ತ ಯುವತಿಯರನ್ನು ವೇಶ್ಯಾವಾಟಿಕೆಗೂ ಬಳಸುತ್ತಿರುವ ಆರೋಪಗಳಿದೆ ಲೆಟ್ಸ್ ಕೆಟ್ ಫೌಂಡೇಶನ್ ಹೈಕೋರ್ಟ್‌ಗೆಭಿಕ್ಷಾಟನೆ ದಂಧೆಕಳೆದ 3 ವರ್ಷಗಳಲ್ಲಿ ಕಾಣೆಯಾದ ಸಾವಿರಕ್ಕೂ ಹೆಚ್ಚಿನ ಮಕ್ಕಳು ಇನ್ನೂ ಪತ್ತೆಯಾ ಗಿಲ್ಲ. ಈ ಕಾಣೆಯಾದ ಮಕ್ಕಳನ್ನು ಕಳ್ಳ ಸಾಗಾಣಿಕೆ ಮಾಡಿರುವ ಅನುಮಾನವಿದೆ. ಕಾಣೆಯಾದ ಮಕ್ಕಳನ್ನು ಪತ್ತೆ ಹಚ್ಚುವಂತೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ಈ ಬಗ್ಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಮನವಿ ಸಲ್ಲಿಸಲಾಗಿದೆ.
ಶಶಿಧರ ಎಸ್ ಕೋಸಂಬೆ, ಅಧ್ಯಕ್ಷ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ಕೆಲ ವರ್ಷಗಳ ಹಿಂದೆ ನಡೆದ ವಿಚಾರಣೆ ಯಲ್ಲೂ ಭಿಕ್ಷುಕರ ದಂಧೆಯ ಕರಾಳ ಮುಖ ಬೆಳಕಿಗೆ ಬಂದಿದ್ದು, ಇದು ಮೇಲಿನ ಆರೋಪಗಳಿಗೆ ಪುಷ್ಟಿ ನೀಡುವಂತಿದೆ.ಬಾಡಿಗೆ ಮನೆ, ರೂಂಗಳಲ್ಲಿ ವೇಶ್ಯಾವಾಟಿಕೆ?: ಭಿಕ್ಷುಕ ಮಹಿಳೆಯರು, ಯುವತಿಯರನ್ನು ದೇಶ್ಯಾ ವಾಟಿಕೆಗೆ ಬಳಸುತ್ತಿರುವ ತಂಡವು ಹೆಚ್ಚಾಗಿ ಬಾಡಿಗೆ ಮನೆಗಳು, ಹೋಟೆಲ್ ರೂಂಗಳಲ್ಲಿ ಈ ದಂಧೆನಡೆಸುತ್ತಾರೆ. ಗ್ರಾಹಕರಿಂದ ಪಡೆದ ಹಣವನ್ನು ದಂಧೆ ನಡೆಸುವ ರೂವಾರಿಗಳೇ ಇಟ್ಟುಕೊಳ್ಳುತ್ತಾರೆ. ಇದರಲ್ಲಿ ಕೊಂಚ ಹಣ ಹಾಗೂ ಮಹಿಳೆಯರಿಗೆ ವನತಿ, ಊಟದ ವ್ಯವಸ್ಥೆ ಕಲ್ಪಿಸಿಕೊಡುತ್ತಾರೆ. ಈ ದಂಧೆ ಯಿಂದ ಆಕ್ರಮವಾಗಿ ಈ ತಂಡವು ಲಕ್ಷಾಂತರ ರೂ. ಸಂಪಾದಿಸುತ್ತಿರುವ ಆರೋಪವಿದೆ. ಇದರಿಂದ ಬಂದ ಹಣದಲ್ಲಿ ಕೆಲವು ಭಾಗ ಪ್ರಭಾವಿಗಳಖಜಾನೆಗಳಿಗೂ ಹೋಗುತ್ತಿವೆ ಎನ್ನಲಾಗಿದೆ. ಹೊರ ರಾಜ್ಯದಿಂದ ಕಳ್ಳ ಸಾಗಾಣಿಕೆ: ಭಿಕ್ಷಾಟನೆ| ವೇಶ್ಯಾವಾಟಿಕೆಯಿಂದ ಲಕ್ಷಾಂತರ ರೂ. ಸಂಪಾದನೆ? ಮಕ್ಕಳ ಕಳ್ಳ ಸಾಗಣೆ ಜಾಲವೂ ಈ ದಂಧೆಯಲ್ಲಿ ಶಾಮೀಲುದಂಧೆ ಹಿಂದೆ ಹೊರ ರಾಜ್ಯದ ಮಹಿಳೆ, ಆಪ್ರಾ ಸೈ ಯರನ್ನು ಕಳ್ಳ ಸಾಗಾಣಿಕೆ ಮೂಲಕ ಮಾರಾಟ ಮಾಡುವ ಜಾಲವೂ ಸಕ್ರೀಯವಾಗಿದೆ. ಭಿಕ್ಷುಕರ ದಂಧೆ ನಡೆಸುವವರು, ಈ ಜಾಲದಲ್ಲಿರುವ ಸದಸ್ಯ ರನ್ನು ಸಂಪರ್ಕಿಸಿ ಅವರಿಗೆ ಸಾವಿರಾರು ರೂ. ತೆತ್ತು, ತಾವಿದ್ದಲ್ಲಿಗೆ ಮಹಿಳೆರನ್ನು ಸಾಗಾಣಿಕೆ ಮಾಡಿ ಸಿಕೊ ಳ್ಳುತ್ತಾರೆ. ಇವರಿಗೆ ಇನ್ನಿಲ್ಲದ ಹಿಂದೆ ಕೊಟ್ಟು, ತಂಡದ ಸದಸ್ಯರು ಹೇಳಿದಂತೆ ಕೇಳುವಂತೆ ನಿಗಾ ಇಡುತ್ತಾರೆ.
ಇದೇ ಮಾದರಿಯಲ್ಲಿ ಹೊರ ರಾಜ್ಯದ ಬಡ ವರ್ಗದ ಜನರು, ಸರ್ಕಾರಿ ಆಸ್ಪತ್ರೆಯಲ್ಲಿ ಆಗ ತಾನೇ ಹುಟ್ಟಿದ ಶಿಶುವನ್ನು ಕದ್ದು ಮಾರಾಟ ಮಾಡುವ ಮಕ್ಕಳ ಕಳ್ಳ ಸಾಗಾಣಿಕೆ ದಂಧೆಯೂ ಇದೆ. ಜೊತೆಗೆ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ತಲೆ ಎತ್ತಿರುವ ಟ್ರಸ್ಟ್‌ಗಳ ಹೆಸರಿನಲ್ಲಿ ಖಾಸಗಿಯಾಗಿ ಮಕ್ಕಳ ಆರೈಕೆ ಕೇಂದ್ರಗಳು, ಅನಾಥ ಮಕ್ಕಳ ಆಕ್ರಮಗಳಿಂದಲೂ ಇದೇ ಭಿಕ್ಷುಕರ ಗ್ಯಾಂಗ್, ಮಕ್ಕಳನ್ನು ಪಡೆಯುತ್ತಾರೆ. ಒಂದು ಮಗು ಸುಮಾರು 50 ಸಾವಿರ ರೂ ಮಾರಾಟವಾಗುತ್ತಿರುವ ಆರೋಪವಿದೆ, ಭಕ್ಷ ಎತ್ತುವ ಮಹಿಳೆಯರ ಕಂಕುಳಲ್ಲಿ ಈ ಗಳನ್ನೇ ಇರಿಸಿ ಅನುಕಂಪ ಹುಟ್ಟುದೇ ಕರಿದರು ತ್ತಾರೆ. ಕೆಲವು ವರ್ಷಗಳ ಹಿಂದೆ ಕಾನೂನು ಸೇವಾ ಪ್ರಾಧಿಕಾರದವರು ಪರಿಶೀಲನೆ ನಡೆಸಿದಾಗ ಇಂತಹ ಕೆಲವು ಆತಂಕಕಾರಿ ಅಂಶಗಳು ಬಯಲಾಗಿದೆ.



