Thursday, February 12, 2026
Google search engine

Homeಕಲೆ-ಸಾಹಿತ್ಯಶಿಕ್ಷಕರಾದ ನಮ್ಮ ಜೀವನ!

ಶಿಕ್ಷಕರಾದ ನಮ್ಮ ಜೀವನ!

ಮಕ್ಕಳನ್ನು ಹೂವುಗಳಂತೆ ಸುರಕ್ಷಿತವಾಗಿ ಬೆಳೆಸುವಾಗ ಶಿಕ್ಷಕರ ಬದುಕಿನ ಚಿತ್ರಣವನ್ನು ರಾಷ್ಟ್ರಪ್ರಶಸ್ತಿ ಪುರಸ್ಕೃತರಾದ ಶಿಕ್ಷಕ ಟಿ.ಪಿ.ಉಮೇಶ್ ಅವರ ಒಂದು ಕವನದ ಮೂಲಕ ಹೇಳಿದ್ದಾರೆ, ತಪ್ಪದೆ ಓದಿ

ದಿನದಿನವು ಶಾಲೆಯಲ್ಲಿ ಕಪ್ಪು ಹಲಗೆಯ ಮೇಲೆಬಣ್ಣಬಣ್ಣದ ಬಳಪಗಳಿಂದ ಜ್ಞಾನವನ್ನು ಬರೆದುಸಾವಿರಾರು ವಿದ್ಯಾರ್ಥಿಗಳಿಗೆ ಅರಿವು ಧಾರೆಯೆರೆದುಜೀವನವನ್ನು ಬೆಳಗಿಸುವೆವುನಿತ್ಯವು ತರಗತಿಯ ಹಲಗೆಯಲ್ಲಿ ಬರೆಯುವಾಗನಮ್ಮ ಜೀವನನ್ನು ನೆನೆದರೆ ಅಚ್ಚರಿಯಾಗುವುದುಯಾವಾಗ ಅಳಿಸುವುದೊ ನಮ್ಮ ಹಣೆಬರಹವೆಂದು?ಅಷ್ಟರಲ್ಲಿಯೆ ಉಳಿಸುವೆವು ವಿದ್ಯಾರ್ಥಿಗಳ ಭವಿಷ್ಯಮಕ್ಕಳ ಏಳ್ಗೆಗೆ ಸಮಾಜ ಉನ್ನತಿಗೆ ನಮ್ಮ ಆಯುಷ್ಯಸಮಯ ಕಳೆಯುವುದು ದಿನವು ಇಲ್ಲವಾಗುವುದುಮುಷ್ಟಿಯಲ್ಲಿಡಿದ ಮರಳು ಜಾರುವಂತೆಯೆಉರಿಯುವ ಸೂರ್ಯ ಮುಳುಗುವಂತೆಯೆಶಿಕ್ಷಣ ಶಿಲ್ಪಿಗಳು ನಾವುಬೆಳೆಯುವ ಸಿರಿಗೆ ಆಸರೆಯು ನಾವುಸಾವಿರಾರು ಮಾನವ ಕಗ್ಗಲ್ಲುಗಳನ್ನುಸುಂದರ ಕಲಾಕೃತಿಗಳಾಗಿ ರೂಪಿಸುವೆವುಶಿಲ್ಪಿಗಳ ಕಲ್ಲಿನ ಕಲಾಕೃತಿಗಳೆಗೆಲ್ಲ ಬೆಲೆಯಿದೆನಮ್ಮ ಅಗಣಿತ ಮಾನವ ವ್ಯಕ್ತಿತ್ವ ರೂಪಿಸುವಿಕೆಗೆಅದೇ ಸಾಮಾನ್ಯ ಪಗಾರದ ಸಂಭಾವನೆಯಿದೆನುಸಿಹಿಡಿವ ಫಲಕ ಖರ್ಚಾಗದ ಶಾಲುಗಳ ಸನ್ಮಾನವಿದೆತುಕ್ಕಿಡಿವ ತಗಡಿನ ಶೀಲ್ಡು ಮುರಿವ ಗಾಜಿನ ಹೂದಾನಿಬಾಡುವ ಹೂವಿನ ಹಾರಗಳ ಗೌರವವಿದೆತೃಪ್ತಿಕೊಡದ ಜೀವನ ಮಟ್ಟದ ನರಳಿಕೆಯಿದೆಸೇವಾವಧಿಯಲ್ಲಿ ಸಾವಿರಾರು ವ್ಯಕ್ತಿತ್ವಗಳಿಗೆಸ್ಪೂರ್ತಿಯಾಗುವೆವು,

ಮಾರ್ಗವಾಗುವೆವುಗುರಿಯಾಗುವೆವು, ಸಾಧನೆಯಾಗುವೆವುನಾವು ಮಾತ್ರ ನಿಂತಲ್ಲೇ ನಿಂತಿರುವೆವುರಸ್ತೆಯ ಮಗ್ಗುಲ ಕೈಮರದಂತೆ ಮೈಲುಗಲ್ಲಿನಂತೆಮಕ್ಕಳ ಹಾದಿಯಲ್ಲಿನ ಮುಳ್ಳುಗಳ ತೆಗೆದುಹಾಕುವಾಗನಮ್ಮ ಪಾದಗಳು ದೊಗರು ಬೀಳುತ್ತವೆನಮ್ಮ ಕೈಗಳು ರಕ್ತ ಸುರಿಸುತ್ತವೆನಮ್ಮ ಬಟ್ಟೆಗಳು ಹರಿದು ಹೋಗುತ್ತವೆಮಕ್ಕಳನ್ನು ಹೂವುಗಳಂತೆ ಸುರಕ್ಷಿತವಾಗಿ ಬೆಳೆಸುವಾಗತೋಟದ ಮಾಲಿಯಂತೆ ಶ್ರಮವಾಗುತ್ತದೆಆಯಾಸ ನೋವು ದುಃಖ ಬಳಲಿಕೆಯಾಗುತ್ತದೆಮಕ್ಕಳ ಭವಿಷ್ಯಕ್ಕಾಗಿ ನಾವು ಎಲ್ಲರ ಬೈಗುಳ ಹಳಹಳಿಕೆಕೀಳುನೋಟ ಅಪಹಾಸ್ಯ ಕಷ್ಟಗಳ ತಾಳಿಕೊಳ್ಳುವೆವುದೇಶದ ಭವಿತವ್ಯಕ್ಕೆಂದು ಜೀವನ ಸವೆಸುವೆವುಶಿಕ್ಷಕರು ನಾವು ದೀಪದಂತೆಸುತ್ತಮುತ್ತಲ ಸಮಾಜದ ಮಕ್ಕಳ ಬಾಳು ಬೆಳಗಿಸಲುನಮ್ಮನ್ನು ನಾವು ಸುಟ್ಟುಕೊಳ್ಳುವೆವುನಂಬಿದ ಮಕ್ಕಳ ಮನೆ ಬೆಳಗಿಸಲು ನಮ್ಮ ಮನೆಯುಕತ್ತಲಲ್ಲಿರುವುದನ್ನು ಮರೆಯುವೆವುನಾವು ಕತ್ತಲಲ್ಲಿಯೇ ಉಳಿಯುವೆವುಮಕ್ಕಳ ಭವಿಷ್ಯ ಬೆಳಗುವುದನ್ನು ಕಂಡು ಕತ್ತಲಲ್ಲೇಕರಗುತ್ತ ಮುದುಡಿ ನಲಿಯುವೆವುಜಗವ ಬೆಳಗೊ ದೀಪದ ಕೆಳಗೆ ಎಂದೆಂದು ಕತ್ತಲುಜಗಕ್ಕೆ ಬೆಳಕು ಶಿಕ್ಷಕರ ಮನೆಯ ಒಳಗೆ ಕತ್ತಲುಪ್ರಾಮಾಣಿಕತೆಯೊಂದೆ ಶಿಕ್ಷಕನ ಆಸ್ತಿಉಳಿದದ್ದೆಲ್ಲ ಕೇಳಲೇಬೇಡಿ ಜಾಸ್ತಿಯಾರ ಜೀವನವು ಕಷ್ಟದಲ್ಲಿ ಹಾದುಹೋಗುವುದೋಅದು ಯಾವತ್ತು ಹಣತೆಯಂತೆಪ್ರಜ್ವಲಿಸೋ ಸೂರ್ಯನಂತೆಹೊರಗೆ ನೋಡುವವರಿಗೆ ಬಣ್ಣ;ಪಡೆಯುವವರಿಗೆ ಬೆಳಕು

RELATED ARTICLES
- Advertisment -
Google search engine

Most Popular