Saturday, February 14, 2026
Google search engine

Homeರಾಜ್ಯಸುದ್ದಿಜಾಲಮಾಜಿ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸುವಂತೆ ದಲಿತ ಮಹಾಸಭಾ ಆಗ್ರಹ

ಮಾಜಿ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸುವಂತೆ ದಲಿತ ಮಹಾಸಭಾ ಆಗ್ರಹ

ಮೈಸೂರು : ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಸಿದ್ದರಾಮಯ್ಯರನ್ನು ಹೀನಾಯವಾಗಿ ನಿಂದಿಸಿ ಸುಳ್ಳು ಅಪಾದನೆ ಮಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹರನ್ನು ಬಂಧಿಸುವಂತೆ ದಲಿತ ಮಹಾಸಭಾ ಆಗ್ರಹಿಸಿದರು.

ನಗರದ ಪುರಭವನದ ಎದುರಿನ ಅಂಬೇಡ್ಕರ್ ಪ್ರತಿಮೆ ಎದುರು ವಿವಿಧ ಬಿತ್ತಿಪತ್ರಗಳನ್ನು ಪ್ರದರ್ಶಿಸಿದ ಮಹಾಸಭಾ ಕಾರ್ಯಕರ್ತರು ಪ್ರತಾಪ ಸಿಂಹರನ್ನು ಬಂಧಿಸುವಂತೆ ನಾನಾ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ದಲಿತ ಮಹಾಸಭಾ ಅಧ್ಯಕ್ಷ ಎಂ.ರಾಜೇಶ್ ಮಾತನಾಡಿ, ಸುಳ್ಳು ಅಪಾದನೆಗಳನ್ನು ಮಾಡುವುದನ್ನು ಬಿಜೆಪಿ ಕರಗತ ಮಾಡಿಕೊಂಡಿದೆ. ಪ್ರತಿನಿತ್ಯ ಸುಳ್ಳುಗಳನ್ನೇ ಹೇಳಿಕೊಂಡು ಜನರನ್ನು ಯಾಮಾರಿಸುತ್ತಿರುವ ಬಿಜೆಪಿ ಕಾಂಗ್ರೆಸ್ ಜನಪರ ಆಡಳಿತ ಸಹಿಸಿಕೊಳ್ಳುತ್ತಿಲ್ಲ. ಅದರಲ್ಲೂ ಮನಬಂದಂತೆ ಮಾತನಾಡುತ್ತಿರುವ ಸಂಸದ ಪ್ರತಾಪ್ ಸಿಂಹರನ್ನು ಈ ಕೂಡಲೇ ಬಂದಿಸಬೇಕು. ‌

ಈ ಕೂಡಲೇ ಯತೀಂದ್ರರ ವಿರುದ್ಧ ಹಾಕಿರುವ ಪೋಸ್ಟ್ ತೆಗೆಸಿ ಬಿಜೆಪಿ ಐಟಿ ಸೆಲ್ ಮುಖ್ಯಸ್ಥರನ್ನು ಬಂಧಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

ಈ ವೇಳೆ ಪ್ರತಿಭಟನರಯಲ್ಲಿ ಕುರುಬಾರಹಳ್ಳಿ ಪ್ರಕಾಶ್, ರಾಜಶೇಖರ್, ಸುನಿಲ್ ನಾರಾಯಣ, ಸೈಯ್ಯದ್, ರವಿ ನಾಯಕ್, ಶಿವಶಂಕರಮೂರ್ತಿ, ರಹೀಮ್, ಲೋಕೇಶ್‍ಕುಮಾರ್ ಮಾದಾಪುರ, ರವಿನಂದನ್, ಬಿ.ಜಿ.ಕೇಶವ, ಎಸ್.ಎ.ರಹೀಮ್, ಕುಕ್ಕರಹಳ್ಳಿ ನಂಜುಂಡಸ್ವಾಮಿ, ಪ್ರಕಾಶ್ ಕುಂಬಾರ್, ಯೋಗೇಶ್ ಉಪ್ಪಾರ್ ಸೇರಿದಂರೆ ಹಲವರು ಭಾಗವಹಿಸಿದ್ದರು.

RELATED ARTICLES
- Advertisment -
Google search engine

Most Popular