ವರದಿ :ಸ್ಟೀಫನ್ ಜೇಮ್ಸ್.
ಬೆಳಗಾವಿ ಜಿಲ್ಲೆಯಾದ್ಯಂತ ಶಿವನಾಮ ಸ್ಮರಣೆನಾನಾ ದೇವಾಲಯಲ್ಲಿ ವಿಶೇಷ ಪೂಜೆ -ಸೋಮವಾರ ಮಹಾ ಪ್ರಸಾದ.
ಬೆಳಗಾವಿ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಶಿವರಾತ್ರಿ ಹಬ್ಬವನ್ನು ಭಕ್ತರು ಭಾನುವಾರ ಸಂಭ್ರಮ ಮತ್ತು ಭಕ್ತಿ ಭಾವದಿಂದ ಆವರಿಸಿದರು.ದೇವಾಲಯದ ಆವರಣವನ್ನು ಹೂವು, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಪುನಸ್ಕಾರಗಳು ಜರುಗಿದವು. ಭಕ್ತರು ಕುಟುಂಬಸಮೇತ ಬಂದು ದೇವರ ದರ್ಶನ ಪಡೆದು ಪುನೀತ ಭಾವ ತಳೆದರು. ಉಪವಾಸ ಪ್ರತ ಆಚರಿಸಿ, ತಮ್ಮ ಇಷ್ಟಾರ್ಥ ಸಿದ್ದಿಗೆ ಪ್ರಾರ್ಥಿಸಿದರು.’ದಕ್ಷಿಣ ಕಾಶಿ’ ಎಂದೇ ಪ್ರಸಿದ್ದಿ ಗಳಿಸಿರುವ ಇಲ್ಲಿನ ಕಪಿಲಶ್ವರ ಮಂದಿರದಲ್ಲಿ ಮಂದಿ ಭಾಗವಹಿಸಿದ್ದರು,
ಶಿವಾಜಿನಗರದ ವೀರಭದ್ರೇಶ್ವರ, ಕ್ಯಾಂಪ್‌ನಲ್ಲಿರುವ ಮಿಲಿಟರಿ ಮಂದಿರ, ಕಾಹೂನಗರದ ಶಿವ ದೇವಾಲಯ, ಮಹಾಂತೇಶ ನಗರದ ಮಹಾದೇವ ಮುಂದಿನ, ಕಂಗ್ರಾಳಿಯ ಶಿವಮಂದಿರ, ರಾಮಲಿಂಗಕಿಂಡ್ ಗಲ್ಲಿಯ ರಾಮಲಿಂಗೇಶ್ವರ ದೇಗುಲದಲ್ಲಿ ಸಂಭ್ರಮ ಜೋರಾಗಿತ್ತು, ದೇವರ ಮೂರ್ತಿಗೆ ಅಭಿಷೇಕ, ಸಹಸ್ರ ನಾಮಾರ್ಚನೆ, ಬಿಟ್ಟಸತ್ಯಾರ್ಚನೆ ಕುಂಕುಮಾರ್ಚನೆ ಮತ್ತಿತರ ಪೂಜಾ ಕಾರ್ಯಕ್ರಮಗಳು ನಡೆದವು. ಖಿಲ್ಲಪತೆ, ಪುನುಹಾಲು ತಂದಿದ್ದ ಭಕ್ತರು ದೇವರ ಮೂರ್ತಿಗೆಶಿವನಾಮ ಸ್ಮರಣೆಸ್ಥಳೀಯ ಸುಕ್ಷೇತ್ರ ಕೆಂಗೇರಿ ಶ್ರೀಶಿವಚಿದಂಬರೇಶ್ವರ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆಯಿಂದ ನಾನಾ ಪೂಜಾ ವಿಧಾನಗಳಿಂದ ಮಹಾ ಶಿವರಾತ್ರಿ ಸಂಭ್ರಮದಿಂದ ಅಲಂಕಾರದೊಂದಿಗೆ ವಿಶೇಷ ಮಹಾಪೂಜೆ. ನೈವೇದ್ಯ, ಶಿವಲಿಂಗದಲ್ಲಿ ಶಿವಚಿದಂಬರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ಸೊಗಲದಲ್ಲಿ ವಿಶೇಷ ಪೂಜೆಬೈಲಹೊಂಗಲ ತಾಲೂಕಿನ ಸುಕ್ಷೇತ್ರ ಸೊಗಲ ಭಾನುವಾರ ಬೆಳಗ್ಗೆಯಿಂದ ಪೂಜಾ ವಿಧಾನಗಳಿಂದ ಶಿವರಾತ್ರಿ ಶಿವಪಾರ್ವತಿ ಮೂರ್ತಿಗೆ ವಿಶೇಷ ಮಹಾಪೂಜೆ, ಸಹಸ್ರ ಅಲ್ವಾರ್ಚನೆ, ರುದ್ರಾಭಿಷೇಕ, ನೈವೇದ್ಯ, ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಭಾಷೆ ಕಾರ್ಯಕ್ರಮಗಳು ನಡೆದವು.ಕಾರಂಜಿ ಮಠ, ತಾಲ್ಲೂಕಿನ ಬಡಕೊಳ್ಳಮಠ ಕಡೋಲಿಯ ದುರದುಂಡೀಶ್ವರ ಮಠದಲ್ಲಿ ವಿಶೇಷ ಕಾರ್ಯಕ್ರಮಗಳು ಹಾಗೂ ಜಾತ್ರೆ ನಡೆದವು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.



