Monday, February 16, 2026
Google search engine

Homeರಾಜಕೀಯಮಹದೇವಪ್ಪ ಬೀದಿನಾಯಿ ಹೇಳಿಕೆ ಚರ್ಚೆಗೆ ಗ್ರಾಸ

ಮಹದೇವಪ್ಪ ಬೀದಿನಾಯಿ ಹೇಳಿಕೆ ಚರ್ಚೆಗೆ ಗ್ರಾಸ

ಬೆಂಗಳೂರು : ಹಿರಿಯ ಸಚಿವ ಹೆಚ್.​ಸಿ ಮಹದೇವಪ್ಪ ನಾಯಕತ್ವ ಬದಲಾವಣೆ ಕುರಿತ ಪ್ರಶ್ನೆಗಳಿಗೆ ನೀಡಿದ ಹೇಳಿಕೆ ಈಗ ಚರ್ಚೆಗೆ ಗ್ರಾಸವಾಗಿದೆ. ಕಾಂಗ್ರೆಸ್‌ನಲ್ಲಿನ ನಾಯಕತ್ವ ಗೊಂದಲ ಮತ್ತು ಹೈಕಮಾಂಡ್ ಮಧ್ಯಪ್ರವೇಶದ ಅಗತ್ಯತೆಯ ಬಗ್ಗೆ ಪತ್ರಕರ್ತರು ಪ್ರಶ್ನಿಸಿದಾಗ, ಮಹದೇವಪ್ಪ ಅವರು ಅದಕ್ಕೆ ನೇರವಾಗಿ ಉತ್ತರಿಸದೆ ಬೀದಿನಾಯಿ ವಿಷಯವನ್ನು ಪ್ರಸ್ತಾಪಿಸಿದರು.

‘ನಾಯಕತ್ವದ ಚರ್ಚೆ ಎಲ್ಲಿದೆ? ಹೈಕೋರ್ಟ್ ಪದೇ ಪದೇ ಬೀದಿನಾಯಿಗಳನ್ನೆಲ್ಲ ಹಿಡಿದು ಒಳಗಾಕಿ ಎಂದು ಹೇಳುತ್ತಿದೆ’ ಎಂದರು. ಈ ಹೇಳಿಕೆ ವಿವಾದಕ್ಕೆ ಗುರಿಯಾಗಬಹುದು ಎಂಬುದು ಅರಿವಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಲು ಮುಂದಾದ ಮಹದೇವಪ್ಪ, ತಾವು ಹೈಕೋರ್ಟ್ ಹೇಳಿದ್ದನ್ನಷ್ಟೇ ಹೇಳಿದ್ದು. ಯಾವುದೇ ಅನಗತ್ಯ ಗೊಂದಲ ಸೃಷ್ಟಿಸಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿದರು. ಆದಾಗ್ಯೂ, ಅವರ ಈ ಮಾತುಗಳು ಆಡಳಿತಾರೂಢ ಪಕ್ಷದೊಳಗಿನ ಅಸಮಾಧಾನವನ್ನು ಪ್ರತಿಬಿಂಬಿಸುತ್ತಿವೆ ಎನ್ನಲಾಗಿದೆ.

RELATED ARTICLES
- Advertisment -
Google search engine

Most Popular