Monday, February 23, 2026
Google search engine

Homeರಾಜ್ಯಲೈಟ್ ಕಂಬ ಬಿದ್ದು ಕಾರ್ಮಿಕ ಸಾವು: ಜಿಲ್ಲಾಸ್ಪತ್ರೆಗೆ ಡಿವೈಎಫ್ ಐ ಮುಖಂಡರ ಭೇಟಿ

ಲೈಟ್ ಕಂಬ ಬಿದ್ದು ಕಾರ್ಮಿಕ ಸಾವು: ಜಿಲ್ಲಾಸ್ಪತ್ರೆಗೆ ಡಿವೈಎಫ್ ಐ ಮುಖಂಡರ ಭೇಟಿ

ಮಂಗಳೂರು ‌ಮೀನುಗಾರಿಕೆ ಧಕ್ಕೆಯಲ್ಲಿ ಲೈಟ್‌ ಕಂಬ ಬಿದ್ದ ಪರಿಣಾಮವಾಗಿ ಮೃತಪಟ್ಟ ತಮಿಳುನಾಡು ಮೂಲದ ಕಾರ್ಮಿಕ ಮುರುಗನ್ ಅವರ ಮೃತದೇಹ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ಪೋಸ್ಟ್ ಮಾರ್ಟನ್ ಮಾಡಲು ತಂದ ವೇಳೆ DYFI ಜಿಲ್ಲಾ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಘಟನೆ ನಡೆದ ಬಗ್ಗೆ ಧಕ್ಕೆಯಲ್ಲಿ ಜೊತೆಯಲ್ಲಿ ದುಡಿಯುವ ‌ಕಾರ್ಮಿಕರು ಸಂಬಂಧಿಕರ ಬಳಿ ಮಾತನಾಡಲಾಯಿತು. ಬಹುತೇಕ ಕಾರ್ಮಿಕರು ಮುರುಗನ್ ಸಾವಿನ ಸುದ್ದಿ ಬಳಿಕ ಕೆಲಸ ತೊರೆದು ವೆನ್ಲಾಕ್ ಆಸ್ಪತ್ರೆ ಸಮೀಪ ಜಮಾಯಿಸಿದರು. ಮೃತಪಟ್ಟ ಮುರುಗನ್ ಸೇಲಮ್ ಸಮೀಪದ ಜಿಲ್ಲೆಯವನಾಗಿದ್ದು ಕಳೆದ ಹಲವು ವರ್ಷಗಳಿಂದ ತಲೆಹೊರುವ ಕಾರ್ಮಿಕನಾಗಿ ಮಂಗಳೂರು ಧಕ್ಕೆಯಲ್ಲಿ ದುಡಿಯುತ್ತಿದ್ದ. ಎಂದಿನಂತೆ ಮೀನು ಹೊತ್ತು ಬಂದು ಕುಳಿತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಮೀಪದಲ್ಲಿದ್ದ ಬಾಬು ಮತ್ತು ಇತರರು ಪ್ರಾಣಾಪಾಯದಿಂದ ಪಾರಾಗಿದ್ದು ಮುರುಗನ್ ತಲೆಯ ಹಿಂಭಾಗಕ್ಕೆ ಬಲವಾದ ಪೆಟ್ಟು ಬಿದ್ದ ಕಾರಣ ಆಸ್ಪತ್ರೆಗೆ ಕೊಂಡೊಯ್ದ ಸಂದರ್ಭದಲ್ಲಿ ಮೃತಪಟ್ಟಿದ್ದಾರೆ ಅಂತ ತಿಳಿದು ಬಂದಿದೆ.
ಮೃತ ಮುರುಗನ್ ನಿಗೆ 2 ಗಂಡು ಮಕ್ಕಳು ಮತ್ತು ಒಂದು ಹೆಣ್ಣು ಮಗು ಇದೆ. ಸೇರಿದ ಕಾರ್ಮಿಕರು ಮಾಧ್ಯಮದ ಮುಂದೆ ಕಣ್ಣೀರು ಹಾಕಿದ್ದು ಸರಕಾರದಿಂದ ಕುಟುಂಬಕ್ಕೆ ಪರಿಹಾರಕ್ಕೆ ಆಗ್ರಹಿಸಿದ್ದಾರೆ.
ಆಸ್ಪತ್ರೆಗೆ‌ ಬೇಟಿ ನೀಡಿದ ನಿಯೋಗದಲ್ಲಿ DYFI ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್, ಸಹ ಕಾರ್ಯದರ್ಶಿ ತೈಯೂಬ್ ಬೆಂಗ್ರೆ, ಮುಖಂಡರಾದ ಜಂಶೀರ್, ಅಸ್ಫಾನ್ ಉಪಸ್ಥಿತರಿದ್ದರು.

RELATED ARTICLES
- Advertisment -
Google search engine

Most Popular