Monday, February 23, 2026
Google search engine

Homeರಾಜ್ಯಡಾ. ಬಿ.ಆರ್.ಅಂಬೇಡ್ಕರ್ ಮೌಲ್ಯ ತತ್ವಗಳ ಪ್ರಸಾರಕ್ಕಾಗಿ ಸಂಶೋಧನಾ ಕೇಂದ್ರ ಅನುಷ್ಠಾನ

ಡಾ. ಬಿ.ಆರ್.ಅಂಬೇಡ್ಕರ್ ಮೌಲ್ಯ ತತ್ವಗಳ ಪ್ರಸಾರಕ್ಕಾಗಿ ಸಂಶೋಧನಾ ಕೇಂದ್ರ ಅನುಷ್ಠಾನ

ಬೀದರ್ :ತಾಲೂಕಿನ ಅತಿವಾಳ ಸಮೀಪ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಕೇಂದ್ರ ಹಾಗೂ ಬೌದ್ಧ ವಿಹಾರ ನಿರ್ಮಾಣಕ್ಕೆ ೧೦ ಎಕರೆ ಜಮೀನು ಹಾಗೂ ರೂ.೧೦ ಕೋಟಿ ಅನುದಾನ ಮಂಜೂರು ಮಾಡಿಸಿದ ಪ್ರಯುಕ್ತ ಬೌದ್ಧ ಭಿಕ್ಕು ಸಂಘ ಹಾಗೂ ಡಾ. ಬಿ.ಆರ್.ಅಂಬೇಡ್ಕರ್ ಅನುಯಾಯಿಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಅವರನ್ನು ಭಾಲ್ಕಿಯಲ್ಲಿ ಸನ್ಮಾನಿಸಲಾಯಿತು.

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಮಾನವೀಯ ಮೌಲ್ಯ ತತ್ವಗಳ ಪ್ರಚಾರ ಹಾಗೂ ಪ್ರಸಾರಕ್ಕಾಗಿ ಸಂಶೋಧನಾ ಕೇಂದ್ರ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಮುಂದುವರೆದು, ಸಂಶೋಧನಾ ಕೇಂದ್ರ ಹಾಗೂ ಬೌದ್ಧ ವಿಹಾರವು ಜಿಲ್ಲೆಯಲ್ಲಿ ಶೈಕ್ಷಣಿಕ, ಸಾಂಸ್ಕೃತಿಕ ಚಟುವಟಿಕೆಗಳ ಉತ್ತೇಜನ ಜತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸಲಿವೆ ಎಂದರು.

ಈ ಸಂದರ್ಭದಲ್ಲಿ ಭಂತೆ ಜ್ಞಾನಸಾಗರ್, ಕಾಂಗ್ರೆಸ್ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ವಿನೋದಕುಮಾರ ಅಪ್ಪೆ, ಪ್ರಮುಖರಾದ ಮಾರುತಿ ಬಂಗಾರೆ, ವಿಶಾಲ್ ಅಪ್ಪೆ, ಸೂರ್ಯಕಾಂತ ಸಾಧುರೆ, ದಿಗಂಬರ ಪುಂಗೆ, ಶಿವಾನಂದ, ಪವನ್ ಮಿಠಾರೆ, ಸುಶೀಲ್ ಮತ್ತಿತರರು ಇದ್ದರು.

RELATED ARTICLES
- Advertisment -
Google search engine

Most Popular