Wednesday, February 25, 2026
Google search engine

Homeರಾಜ್ಯಮಂಗಳೂರಿನ ವೆನ್ಲಾಕ್ ಆಸ್ಪತ್ರೆ STP ಘಟಕ ಮೇಲ್ದರ್ಜೆಗೇರಿಸಲು 2 ಕೋಟಿ ಕಾಮಗಾರಿಗೆ ಅನುಮೋದನೆ

ಮಂಗಳೂರಿನ ವೆನ್ಲಾಕ್ ಆಸ್ಪತ್ರೆ STP ಘಟಕ ಮೇಲ್ದರ್ಜೆಗೇರಿಸಲು 2 ಕೋಟಿ ಕಾಮಗಾರಿಗೆ ಅನುಮೋದನೆ

ಮಂಗಳೂರಿನ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ವೆನ್ಲಾಕ್ ಆಸ್ಪತ್ರೆ 905 ಹಾಸಿಗೆಯ ಸಾಮರ್ಥ್ಯ ಹೊಂದಿದ್ದು, ಒಟ್ಟು 21 ಕಟ್ಟಡಗಳನ್ನು ಹೊಂದಿದೆ. ಇಲ್ಲಿನ STP ಘಟಕವು 350 KLD ಸಾಮರ್ಥ್ಯ ಹೊಂದಿದ್ದು USAB (UN Aerobic sludge blanket) ವಿಧಾನದಲ್ಲಿ ಕಾರ್ಯನಿರ್ವಹಿಸುತ್ತಿದೆ. ಇದರ ನಿರ್ವಹಣೆಯಲ್ಲಿ ಹಲವಾರು ಸಮಸ್ಯೆ ಇರುವುದರಿಂದ ಇದನ್ನು ಮೇಲ್ದರ್ಜೆಗೇರಿಸಲು ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ತೀರ್ಮಾನ ಕೈಗೊಂಡಿದ್ದರು.
ಪ್ರಸ್ತುತ ಆಸ್ಪತ್ರೆಯ ಅವಶ್ಯಕತೆಗೆ ಅನುಗುಣವಾಗಿ ಈಗ ಇರುವ ಸಿವಿಲ್ ಮೂಲಸೌಕರ್ಯ ಬಳಸಿಕೊಂಡು, ಹೆಚ್ಚುವಾರಿಯಾಗಿ ಬೇಕಾಗುವ SBR tank ಮತ್ತು Collection tank ಹೊಸದಾಗಿ ನಿರ್ಮಿಸಲು, STP ಘಟಕ್ಕೆ ಬೇಕಾಗುವ ಯಂತ್ರೋಪಕರಣಗಳೊಂದಿಗೆ
500 KLD ಘಟಕವಾಗಿ ಮೇಲ್ದರ್ಜೆಗೆ ಏರಿಸಲು ರೂ 2 ಕೋಟಿ ಅನುದಾನಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಿ ಟೆಂಡರ್ ಆಹ್ವಾನಿಸಲು ಆದೇಶ ಮಾಡಲಾಗಿದೆ.

  • ಮಂಗಳೂರಿನಿಂದ ಶಂಶೀರ್ ಬುಡೋಳಿ
RELATED ARTICLES
- Advertisment -
Google search engine

Most Popular