Wednesday, March 4, 2026
Google search engine

Homeಕ್ಯಾಂಪಸ್ ಕಲರವಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಭಯ ಇದ್ಯಾ?

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಭಯ ಇದ್ಯಾ?

ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಮತ್ತು ಅವರ ಪೋಷಕರಿಗೆ ಪರೀಕ್ಷಾ ಸಂಬಂಧಿ ಯಾವುದೇ ಸಮಸ್ಯೆ, ಪರೀಕ್ಷಾ ಸಿದ್ಧತೆ ಬಗ್ಗೆ ಭಯ, ಆತಂಕ, ಗೊಂದಲಗಳಿದ್ದರೆ ದೂರವಾಣಿ ಸಂಖ್ಯೆ ದೂರವಾಣಿ ಸಂಖ್ಯೆ : 0824-2451239 ಕರೆ ಮಾಡಿ ಪರಿಹಾರ ಕಂಡುಕೊಳ್ಳಬಹುದು.
ಸಹಾಯವಾಣಿ ಕಾರ್ಯ ನಿರ್ವಹಿಸುವ ದಿನಗಳು ಮತ್ತು ಸಮಯ
ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10.30 ರಿಂದ ಸಂಜೆ 5, ಆದಿತ್ಯವಾರ ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1
      ಸಹಾಯವಾಣಿಯಲ್ಲಿ ಸ್ವೀಕರಿಸುವ ವಿಷಯ ಸಮಸ್ಯೆ ಮತ್ತು ಕರೆ ಮಾಡಿದ ದೂರವಾಣಿ ಸಂಖ್ಯೆ ದಾಖಲಿಸಿ ಇಟ್ಟುಕೊಳ್ಳಲಾಗುತ್ತದೆ. ಮರುದಿನ ಕರೆ ಮಾಡಿದವರಿಗೆ ಸಹಾಯವಾಣಿಯಿಂದಲೇ ಕರೆ ಮಾಡಿ ಉತ್ತರ/ಪರಿಹಾರವನ್ನು ನೀಡಲಾಗುತ್ತದೆ. ಆರೋಗ್ಯ ಇಲಾಖೆಯ ಸಹಯೋಗದಲ್ಲಿ ಈ ಸಹಾಯವಾಣಿ ವ್ಯವಸ್ಥೆಗೊಳಿಸಲಾಗಿದ್ದು ತಜ್ಞರ ನೆರವಿನಲ್ಲಿ ಪರಿಹಾರ ತಿಳಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ: ಶಂಶೀರ್ ಬುಡೋಳಿ

RELATED ARTICLES
- Advertisment -
Google search engine

Most Popular