Saturday, April 19, 2025
Google search engine

Homeರಾಜಕೀಯಕಾಂಗ್ರೆಸ್ ಗ್ಯಾರಂಟಿ ಮೂಲಕ ಬಡವರಿಗೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದೆ: ಶಾಸಕ ನರೇಂದ್ರ ಸ್ವಾಮಿ

ಕಾಂಗ್ರೆಸ್ ಗ್ಯಾರಂಟಿ ಮೂಲಕ ಬಡವರಿಗೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದೆ: ಶಾಸಕ ನರೇಂದ್ರ ಸ್ವಾಮಿ

ಮಂಡ್ಯ: ಕಾಂಗ್ರೆಸ್ ನುಡಿದಂತೆ ನೆಡೆದಿದೆ. ಕಾಂಗ್ರೆಸ್ ಗ್ಯಾರಂಟಿ ಮೂಲಕ ಬಡವರಿಗೆ ಒಳ್ಳೆಯ ಕಾರ್ಯಕ್ರಮ ಕೊಟ್ಟಿದೆ. ಬಡವರ ಮನೆಗೆ ಬೆಳಕಾಗಿರುವುದು ಗೃಹಜ್ಯೋತಿ ಯೋಜನೆ. ಶಕ್ತಿ ಯೋಜನೆಗೆ ಕೂಡ ಮಹಿಳೆಯರು ಮೆಚ್ಚಗೆ ವ್ಯಕ್ತಪಡಿಸಿದ್ದಾರೆ ಎಂದು ಶಾಸಕ ನರೇಂದ್ರ ಸ್ವಾಮಿ ತಿಳಿಸಿದರು.

ಮಂಡ್ಯದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಬರಿ ಸುಳ್ಳು ಭರವಸೆ ಕೊಟ್ಟು ಜನರಿಗೆ ಮೊಸ ಮಾಡಿದ್ರು. ಪಡಿತರ ಅಕ್ಕಿಯನ್ನ ನರೇಂದ್ರ ಮೋದಿ ಕೊಡ್ತಿಲ್ಲ. ಜನರ ಪರ ಇದ್ದೇವೆ ಅಂದವರು ಇಂದು ಬಡವರಿಗೆ ಅಕ್ಕಿ ನೀಡಲು ನಕಾರ ಮಾಡ್ತಿದ್ದಾರೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದರು.

SCPTS ಯೋಜನೆ ಬಗ್ಗೆ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಟೀಕೆ ಮಾಡ್ತಿದ್ದಾರೆ. ನಾವು ಬಡವರ ಹಣವನ್ನು ದುರುಪಯೋಗ ಮಾಡಿಕೊಳ್ಳಲ್ಲ. ಕೆಲವರು ಗೋಸುಂಬೆ ರಾಜಕಾರಣ ಮಾಡ್ತಿದ್ದಾರೆ. ಜಿಲ್ಲೆಗೆ ಏನು ಮಾಡದವರು ಇವತ್ತು ಜನರನ್ನ ಎತ್ತಿಕಟ್ಟುವ ಕೆಲಸ ಮಾಡ್ತಿದ್ದಾರೆ ಎಂದು ಆರೋಪಿಸಿದರು.

ನಮ್ಮ ಸರ್ಕಾರ ಜನ ಪರ ಕೆಲಸ ಮಾಡುವ ಕೆಲಸ ಮಾಡುತ್ತೆ. ಜಿಲ್ಲೆಯ ಅಭಿವೃದ್ಧಿಗೆ ನಾವು ಮುಂದಾಗುತ್ತೇವೆ. ಕನ್ನಂಬಾಡಿ ವಿಚಾರ ಗೊತ್ತಿದೆ. ರೈತರ ಹಿತಕಾಯಲು ನಾವು ಇದ್ದೇವೆ. ಕಾಂಗ್ರೆಸ್ ಬಂದ ತಕ್ಷಣವೇ ಕಾನೂನು ಬದಲಾಗಿಲ್ಲ. ಜಿಲ್ಲೆಯ ಸಮೃದ್ಧಿಗೆ ನಾವು ದುಡಿಯೋಣಾ ಎಂದು ಹೇಳಿದರು.

ಗೃಹಜ್ಯೋತಿ ಯೋಜನೆಗೆ ಗುಲ್ಬರ್ಗದಲ್ಲಿ ಚಾಲನೆ ಕೊಟ್ಟಿದ್ದಾರೆ. ಇಲ್ಲಿ ಬಿಜೆಪಿ-ಜೆಡಿಎಸ್ ನವರಿಗೆ ಅಂತ ಮಾಡಿಲ್ಲ. ಎಲ್ಲಾ ಬಡವರಿಗೆ ಮಾಡಿರುವ ಯೋಜನೆ ಇದಾಗಿದೆ.  ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನಪರವಾದ ಸರ್ಕಾರ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular