Saturday, March 7, 2026
Google search engine

Homeರಾಜಕೀಯಕೇಂದ್ರದ ಅನ್ಯಾಯದಿಂದ ನಮಗೆ ಇಷ್ಟೊಂದು ಸಾಲದ ಹೊರೆ ; ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಕೇಂದ್ರದ ಅನ್ಯಾಯದಿಂದ ನಮಗೆ ಇಷ್ಟೊಂದು ಸಾಲದ ಹೊರೆ ; ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು

ಬೀದರ್‌ : ಕೇಂದ್ರದ ಅನ್ಯಾಯದಿಂದ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.

ಬೀದರ್‌ನಲ್ಲಿ ಮಾಧ್ಯಮಗಳ ಜೊತೆ ಅವರು ಮಾತನಾಡಿದ ಅವರು ಬಜೆಟ್ ವಿಚಾರವಾಗಿ ಸಾಲರಾಮಯ್ಯ ಎಂದು ವ್ಯಂಗ್ಯ ಮಾಡಿದ್ದ ಬಿಜೆಪಿ ವಿರುದ್ಧ ಹರಿಹಾಯ್ದರು. ಅವರಿಗೆ ದೇಶ ಮತ್ತು ರಾಜ್ಯವನ್ನ ಆರ್ಥಿಕವಾಗಿ ಹೇಗೆ ನಡೆಸಬೇಕು ಎಂದು ಗೊತ್ತಿಲ್ಲ. ಕೇಂದ್ರ ಸರ್ಕಾರದ ಅನ್ಯಾಯದಿಂದಾಗಿ ನಮಗೆ ಇಷ್ಟೊಂದು ಸಾಲದ ಹೊರೆಯಾಗಿದೆ ಎಂದು ಅಸಮಾಧಾನ ಹೊರಹಾಕಿದರು.

ಕೇಂದ್ರ ಸರ್ಕಾರ ನಮ್ಮ 80 ಸಾವಿರ ಕೋಟಿ ರೂ. ಪಾಲನ್ನ ನೀಡಿಲ್ಲ. ಅದರಿಂದಾಗಿ ಸಾಲವಾಗಿದೆ. ಎಎಒ ಯೋಜನೆಯ ಕೇಂದ್ರದ ಪಾಲಾದ 15 ಸಾವಿರ ಕೋಟಿ ರೂ. ನಾವು ಕೊಟ್ಟಿದ್ದೇವೆ. ಪಂಚಾಯಿತಿಗೆ ಕೊಡಬೇಕಾದ 15ನೇ ಹಣಕಾಸಿನ ಪಾಲನ್ನು ಕೂಡಾ ಕೇಂದ್ರ ನೀಡಿಲ್ಲ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳಿಗೆ ನಾವು ಅನುದಾನ ಕೊಡ್ತಿದ್ದೇವೆ.

ನಾವು ಸಾಲ ಮಾಡಿದ್ದನ್ನ ಮಾತ್ರ ಹೇಳ್ತಾರೆ. ಮೋದಿಯವರು 200 ಲಕ್ಷ ಕೋಟಿ ರೂ. ಸಾಲ ಮಾಡಿದ್ದಾರೆ. ಅವರು ಕೂಡಾ ಸಾಲ ಮಾಡೇ ದೇಶ ನಡೆಸುತ್ತಿದ್ದಾರೆ. ಅದನ್ನು ನಡೆಸಲಿಕ್ಕೆ ಅವರೊಬ್ಬರೇ ಬೇಕಾ? ಬಿಜೆಪಿಯವರ ರೀತಿ ಚಿಕ್ಕಮಕ್ಕಳು ಕೂಡಾ ಮಾತನಾಡಲ್ಲ, ಅವರನ್ನ ದೇವರೇ ಕಾಪಾಡಬೇಕು ಎಂದು ವ್ಯಂಗ್ಯವಾಡಿದ್ದಾರೆ. ಕುಮಾರಸ್ವಾಮಿಯವರು ದಿನಾ ಬೆಳಗಾದರೆ ಅಮಿತ್ ಶಾ ಪಕ್ಕಾನೇ ಕೂತ್ಕೋತಾರೆ. ಫೋನ್ ಟ್ಯಾಪಿಂಗ್ ಆಗಿದ್ರೆ ತನಿಖೆ ಮಾಡಲಿಕ್ಕೆ ಒತ್ತಾಯ ಮಾಡಲಿ, ಸಾಕ್ಷಿಗಳನ್ನ ಕೊಡಲಿ. ಅದುಬಿಟ್ಟು ಯಾವಾಗಲೂ ಹಿಟ್ ಅಂಡ್ ರನ್ ರೀತಿ ಮಾಡುವುದು ಕುಮಾರಸ್ವಾಮಿಯವರಿಗೆ ಘನತೆ ತರುವುದಿಲ್ಲ ಎಂದು ತಿರುಗೇಟು ನೀಡಿದರು.

RELATED ARTICLES
- Advertisment -
Google search engine

Most Popular