Friday, April 4, 2025
Google search engine

Homeಅಪರಾಧಕ್ಷುಲ್ಲಕ ವಿಚಾರಕ್ಕೆ ಬಾರ್‌ ಕ್ಯಾಶಿಯರ್‌ ಹತ್ಯೆ

ಕ್ಷುಲ್ಲಕ ವಿಚಾರಕ್ಕೆ ಬಾರ್‌ ಕ್ಯಾಶಿಯರ್‌ ಹತ್ಯೆ

ಶಿವಮೊಗ್ಗ: ನಗರದ ಬಾರ್(Bar) ವೊಂದರಲ್ಲಿ ಕ್ಷುಲ್ಲಕ ಕಾರಣಕ್ಕೆ (A trivial reason)  ಬಾರ್‌ ಕ್ಯಾಶಿಯರ್‌(Cashier) ನನ್ನು ಹತ್ಯೆ ಮಾಡಿರುವ ಘಟನೆ ಜೂ. 4 ಭಾನುವಾರ ರಾತ್ರಿ ಸಂಭವಿಸಿದೆ.

ಬಾರ್‌ ಕ್ಯಾಶಿಯರ್‌ ಸಚಿನ್‌ (27) ಕೊಲೆಯಾದ ವ್ಯಕ್ತಿ.

ಬಾರ್‌ ಬಂದ್‌ ಮಾಡುವ ಸಮಯವಾದರು ಆಯನೂರು ತಾಂಡಾದ ಮೂವರು ಮದ್ಯ ಸೇವಿಸುತ್ತಿದ್ದರು. ಬಾರ್‌ ಸಿಬ್ಬಂದಿ ಸಮಯವಾಗಿದೆ ಎಂದು ತಿಳಿಸಿದ್ದು, ಆದರೆ ತಾವು ಇನ್ನೂ ಮದ್ಯ ಸೇವಿಸಬೇಕಿದೆ ಹೋಗುವುದಿಲ್ಲ ಎಂದು ತಿಳಿಸಿದ್ದಾರೆ.

ಆಗ ಬಾರ್‌’ನ ಅಸಿಸ್ಟೆಂಟ್‌ ಕ್ಯಾಶಿಯರ್‌ ಪೊಲೀಸರಿಗೆ ಕರೆ ಮಾಡಿದ್ದು, ಪೊಲೀಸರು ಬರುತ್ತಿದ್ದಂತೆ ಕ್ಯಾಶಿಯರ್‌ ಸಚಿನ್‌ ವಿರುದ್ಧ ಮೂವರು ಯುವಕರು ಆಕ್ರೋಶಗೊಂಡು ಹಲ್ಲೆ ನಡೆಸಿದ್ದಾರೆ.

ಈ ಪೈಕಿ ಓರ್ವ ಯುವಕ ಬಿಯರ್‌ ಬಾಟಲಿಯನ್ನು ತಲೆಗೆ ಹೊಡದುಕೊಂಡು ಬಾರ್‌ ಸಿಬ್ಬಂದಿಗೆ ಚುಚ್ಚಲು ಬಂದಿದ್ದಾನೆ ಎಂದು ಆರೋಪಿಸಲಾಗಿದೆ. ಈ ವೇಳೆ ಅಸಿಸ್ಟೆಂಟ್‌ ಕ್ಯಾಶಿಯರ್‌ ಅರುಣ್‌ ಕುಮಾರ್‌ ಕೈಗೆ ಸಣ್ಣ ಗಾಯವಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ವೇಳೆ ಓರ್ವ ಯುವಕ ತನ್ನ ಬಳಿ ಇದ್ದ ಡ್ರ್ಯಾಗರ್‌ ತೆಗೆದು ಕ್ಯಾಶಿಯರ್‌ ಸಚಿನ್‌ ಎದೆಯ ಬಲಭಾಗಕ್ಕೆ ಚುಚ್ಚಿದ್ದಾನೆ. ಗಂಭೀರ ಗಾಯಗೊಂಡಿದ್ದ ಸಚಿನ್‌ ನನ್ನು ಬಾರ್‌ ಸಿಬ್ಬಂದಿ ತಕ್ಷಣ ಆಯನೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ನಂಜಪ್ಪ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದ ವೈದ್ಯರು ಸಚಿನ್‌ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಕುಂಸಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

RELATED ARTICLES
- Advertisment -
Google search engine

Most Popular