ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಸ್ಥಾಯಿ ಸಮಿತಿ ಸಭೆ ಕರೆಯದ ಅಧ್ಯಕ್ಷರು ಹತ್ತು ಸಾವಿರಕ್ಕೂ ಹೆಚ್ಚು ವೆಚ್ಚ ಮಾಡಲು ಸಭೆಯ ಅನುಮತಿ ಪಡೆಯದ ಅಧಿಕಾರಿಗಳು ರಾಜಕಾಲುವೆ ಮೇಲೆ ರಸ್ತೆ ನಿರ್ಮಾಣ ಮಾಡಿ ಖಾಸಗಿ ಬಡಾವಣೆ ನಿರ್ಮಾಣ ಮಾಡಿರುವ ಬಗ್ಗೆ ಸಿಇಒ ಅವರಿಂದ ತನಿಖೆಗೆ ಆಗ್ರಹಿಸಿದ ಗ್ರಾಂ ಪಂ ಸದಸ್ಯರುಗಳು. ಸಾಲಿಗ್ರಾಮ ಗ್ರಾಂ ಪಂ ಅಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಗ್ರಾಂ ಪಂ ಸದಸ್ಯರುಗಳು ದೂರಿನ ಸುರಿಮಳೆಯನ್ನೇ ಸುರಿಸಿದರು.
ಗ್ರಾಂ ಪಂ ಅಧ್ಯಕ್ಷೆ ಫಾತಿಮಾ ಉನ್ನೀಸ್ ಅವರು ಎರಡನೇ ಅವಧಿಯಲ್ಲಿ ಸ್ಥಾಯಿ ಸಮಿತಿ ಸಭೆ ನಡೆಸದ ಬಗ್ಗೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯರು ಸಾಮಾನ್ಯ ಸಭೆ ನಡೆಸುವ ಮುನ್ನ ಸ್ಥಾಯಿ ಸಮಿತಿಗಳ ಸಭೆ ನಡೆಸಿ ವಾರ್ಡಿನ ಸಮಸ್ಯೆ ಬಗ್ಗೆ ಮಾಹಿತಿ ಪಡೆದು ಸಾಮಾನ್ಯ ಸಭೆಯಲ್ಲಿ ಮಂಡಿಸಬೇಕು ಆದರೆ ಇದುವರೆಗೂ ಸ್ಥಾಯಿ ಸಮಿತಿ ಸಭೆ ನಡೆಸಿಲ್ಲ ಇದರ ಬಗ್ಗೆ ನೀವಾದರೂ ತಿಳಿಸಬಾರದ ಎಂದು ಗ್ರಾಂ ಪಂ ಪಿಡಿಒ ಅವರನ್ನು ಆಗ್ರಹಿಸಿದರು ಸಾರ್ವಜನಿಕರ ತೆರಿಗೆ ಹಣವನ್ನು ಹೆಚ್ಚು ವೆಚ್ಚ ಮಾಡುತ್ತಿದ್ದಾರೆ ಎಂದು ಜನತೆ ಬೈಯುತ್ತಾ ಇದ್ದಾರೆ ಸದಸ್ಯರು ಹಬ್ಬದ ಸಮಯದಲ್ಲಿ ಕುಡಿಯುವ ನೀರಿನ ಬಗ್ಗೆ ಜಾಗೃತಿ ವಹಿಸಿ ನೀರಿನ ನಿರ್ವಹಣೆಯ ಗುತ್ತಿಗೆದಾರರಿಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕ್ರಮಕೈಗೊಳ್ಳ ಬೇಕು ಎಂದರು.
ನೂತನವಾಗಿ ನಿರ್ಮಾಣ ಮಾಡುತ್ತಿರುವ ಖಾಸಗಿ ಬಡಾವಣೆಗೆ ರಾಜಕಾಲುವೆ ಮೇಲೆ ರಸ್ತೆ ನಿರ್ಮಾಣ ಮಾಡಿರುವ ಬಗ್ಗೆ ಸಾರ್ವಜನಿಕರು ಗ್ರಾಂ ಪಂ ಆಡಳಿತ ಮಂಡಳಿ ಶಾಮೀಲಾಗಿದೆ ಎಂದು ಆರೋಪಿಸುತ್ತಿದ್ದಾರೆ ಇದರ ಬಗ್ಗೆ ಸಮಗ್ರ ತನಿಖೆ ನಡೆಸಲು ಜಿಲ್ಲಾ ಪಂಚಾಯತ್ ಸಿಇಒ ಅವರಿಗೆ ಮನವಿ ಮಾಡುತ್ತೇವೆ ಎಂದ ಸದಸ್ಯರುಗಳು ಸಾರ್ವಜನಿಕರಿಗೆ ಹಾಗೂ ಗ್ರಾಂ ಪಂ ಸದಸ್ಯರುಗಳಿಗೆ ಗೌರವ ಕೊಡದ ಗ್ರಾಂಪಂ ಅಧಿಕಾರಿಗಳ ವಿರುದ್ಧ ಮೇಲಾಧಿಕಾರಿಗಳಿಗೆ ದೂರು ಸಲ್ಲಿಸಲಾಗುವುದು ಎಂದು ಸಭೆಯಲ್ಲಿ ಸದಸ್ಯರುಗಳು ಮಾತನಾಡಿದರು.
ಗ್ರಾಂ ಪಂ ಅಧ್ಯಕ್ಷೆ ಫಾತಿಮಾ ಉನ್ನೀಸ್ ಉಪಾಧ್ಯಕ್ಷೆ ಶಶಿಕಲಾ ಶಿವರಾಜ್ ಸದಸ್ಯರಾದ ಸುಧಾರೇವಣ್ಣ ಲೋಕೇಶ್ ಎಸ್ ಆರ್ ಪ್ರಕಾಶ್ ಹರೀಶ್ ಹೇಮಂತ್ ಅನಂತ್ ಅಸ್ಮತಾ ಉನ್ನೀಸ್ ಶೈಲಜಜಗಧೀಶ್ ಶ್ವೇತಾ ಸತೀಶ್ ಶಕೀಲ್ ಗಂಗಾಧರ ರಾಣಿ ಜಯರಾಂ ಮಂಜುಳ ರತ್ನಮ್ಮ ಬಲರಾಮ ಪಿಡಿಒ ತಿಲಕ್ ರಾಜ್ ಲೆಕ್ಕ ಸಹಾಯಕ ರವಿ ಸ್ವಾಮಿ ಸಿಬ್ಬಂದಿಗಳಾದ ಅಬಿ ಮುರುಗೇಶ್ ಅಕ್ಷಯ್ ಮಧು ಇದ್ದರು