ನಾಗಮಂಗಲ: ತಾಲ್ಲೂಕಿನ ಬೆಳ್ಳೂರು ಹೋಬಳಿಯ ಕಂಚಿನಕೋಟೆ ಗ್ರಾಮದ ಸಮೀಪ ರೈಲಿಗೆ ಸಿಲುಕಿ ಕರಡಿ ಸಾವನ್ನಪ್ಪಿದೆ.
ಹಳಿಯ ಬಳಿ ಸುಮಾರು ೬-೭ ವರ್ಷದ ಗಂಡು ಕರಡಿ ಮೃತಪಟ್ಟಿದ್ದು, ಅದನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಅರಣ್ಯ ಇಲಾಖೆಯ ಎಸಿಎಫ್ ಶಿವರಾಮು ಮತ್ತು ಆರ್‌ಎಫ್‌ಒ ಮಂಜುನಾಥ್ ಪರಿಶೀಲನೆ ನಡೆಸಿದರು. ಅಲ್ಲದೇ ಕರಡಿಯ ಕಳೇಬರವನ್ನು ಪಶು ವೈದ್ಯರು ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುಡಲಾಯಿತು.
ಸ್ಥಳದಲ್ಲಿ ಡಿಆರ್‌ಎಫ್‌ಒ ಮಂಜುನಾಥ್, ಪ್ರಕಾಶ್ ಸೇರಿದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಇದ್ದರು.