ಮೈಸೂರು: ಎಚ್ ಡಿ ಕೋಟೆ ಬಳಿ ಇರುವ ನಾಗರಹೊಳೆಯ ಅಭಯ ಅರಣ್ಯದ ದಮ್ಮನಕಟ್ಟೆಯಾ ರೇಂಜಿನ ಸುಂಕದಕಟ್ಟೆ ಬಳಿ ಸುಮಾರು ದಿನಗಳ ನಂತರ ಕಪ್ಪು ಚಿರತೆ ಕಾಣಿಸಿಕೊಂಡಿದ್ದು, ಪ್ರವಾಸಿಗರ ಗಮನ ಸೆಳೆದಿದೆ.

ಇಂದು ಮುಂಜಾನೆಯ ಸಫಾರಿಗೆ ತೆರಳಿದ್ದ ಚಾಲಕ ರೇವಣ್ಣರೊಂದಿಗೆ ಕಾಡಿಗೆ ತೆರಳಿದ್ದ ಮೈಸೂರಿನ ಜೀವನ್ ಕೃಷ್ಣಪ್ಪರವರ ಕಣ್ಣಿಗೆ ಕಾಣಿಸಿಕೊಂಡಿದ್ದು, ತಮ್ಮ ಕ್ಯಾಮೆರಾದಲ್ಲಿ ಕಪ್ಪು ಚಿರತೆಯ ಫೋಟೋ ಮತ್ತು ವಿಡಿಯೋಗಳನ್ನು ಸೆರೆ ಹಿಡಿದಿದ್ದಾರೆ.
ಇದನ್ನು ನೋಡಿದ ಎಲ್ಲಾ ಪ್ರವಾಸಿಗರು ತುಂಬಾ ಸಂತಸ ವ್ಯಕ್ತಪಡಿಸಿದ್ದಾರೆ.