Sunday, April 20, 2025
Google search engine

Homeಅಪರಾಧಪ್ರಪಾತಕ್ಕೆ ಉರುಳಿದ ಕಾರು; ಪ್ರಾಣಾಪಾಯದಿಂದ ಚಾಲಕ ಪಾರು

ಪ್ರಪಾತಕ್ಕೆ ಉರುಳಿದ ಕಾರು; ಪ್ರಾಣಾಪಾಯದಿಂದ ಚಾಲಕ ಪಾರು

ಕಾರು ಅಪಘಾತದ ಆಘಾತಕಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಾಸ್ತವವಾಗಿ, ಕಾರು ಇದ್ದಕ್ಕಿದ್ದಂತೆ ಪ್ರಪಾತಕ್ಕೆ ಉರುಳಿ ಬಿದ್ದಿದ್ದು, ಅದೃಷ್ಟವಶಾತ್ ಕಾರು ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗುಡ್ಡಗಾಡು, ತಿರುವಿನ ಪ್ರದೇಶಗಳಲ್ಲಿ ವಾಹನ ಚಲಾಯಿಸುವುದು ಅಷ್ಟು ಸುಲಭವಲ್ಲ. ಏಕೆಂದರೆ ಸಣ್ಣ ತಪ್ಪು ಕೂಡ ನಿಮ್ಮ ಜೀವಕ್ಕೇ ಕುತ್ತು ತರಬಹುದು. ಸದ್ಯ, ಇದೀಗ ವೈರಲ್​​ ಆಗಿರುವ ವಿಡಿಯೋದಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ಕಾರೊಂದು ಅಪಾಯಕಾರಿ ಅಪಘಾತಕ್ಕೀಡಾಗಿರುವ ದೃಶ್ಯ ಕಂಡು ಬಂದಿದೆ.

ವೈರಲ್​​ ವಿಡಿಯೋದಲ್ಲಿ ಎರಡು-ಮೂರು ಜನರು ಕಾರನ್ನು ಇಳಿಜಾರಿನಿಂದ ಮೇಲಕ್ಕೆ ತಳ್ಳಲು ಪ್ರಯತ್ನಿಸುತ್ತಿರುವುದು ಸೆರೆಯಾಗಿದೆ. ಈ ಸಮಯದಲ್ಲಿ, ಚಾಲಕನು ಸಹ ಕಾರಿನೊಳಗೆ ಇರುತ್ತಾನೆ, ಆದರೆ ಇದ್ದಕ್ಕಿದ್ದಂತೆ ಕಾರು ಸಮತೋಲನ ಕಳೆದುಕೊಂಡು ಪ್ರವಾತಕ್ಕೆ ಉರುಳಿ ಬಿದ್ದಿದೆ. ಕಾರು ಉರುಳಲು ಪ್ರಾರಂಭಿಸುತ್ತಿದ್ದಂತೆ ಅದರ ನಂತರ ಚಾಲಕ ತ್ವರಿತವಾಗಿ ಕಾರಿನಿಂದ ಜಿಗಿದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಆಘಾತಕಾರಿ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ ಎಲ್ಲೋ ನಡೆದಿದೆ ಎಂದು ಹೇಳಲಾಗುತ್ತಿದೆ.

RELATED ARTICLES
- Advertisment -
Google search engine

Most Popular