Friday, April 18, 2025
Google search engine

Homeಅಪರಾಧಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಪೋಕ್ಸೋ​ ಕೇಸ್​ ದಾಖಲು

ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನ ಪ್ರಕರಣ: ಪೋಕ್ಸೋ​ ಕೇಸ್​ ದಾಖಲು

ಚಾಮರಾಜನಗರ: ವ್ಯಕ್ತಿಯೋರ್ವ ಬಾಲಕಿ ಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದು, ಇದನ್ನು ತಪ್ಪಿಸಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಪೊಲೀಸರಿಗೆ ದೂರು ನೀಡಿದರೂ ಕೇಸು ದಾಖಲಿಸಿಕೊಳ್ಳದ ಹಿನ್ನೆಲೆಯಲ್ಲಿ ಮರ್ಯಾದೆಗೆ ಅಂಜಿ ಮನನೊಂದು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಯತ್ನಿಸಿದ್ದು, ಓರ್ವ ಮೃತಪಟ್ಟಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲೆ ಮಹದೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ. ಸಂತ್ರಸ್ತೆ ಕುಟುಂಬ ದೂರು ಆಧರಿಸಿ ಆರೋಪಿ ಲೋಕೇಶ್ (45 ವರ್ಷ) ವಿರುದ್ಧ ಐಪಿಸಿ ಸೆಕ್ಷನ್ 306, 509 ಹಾಗೂ ಪೋಕ್ಸೋ ​ ಪ್ರಕರಣ ದಾಖಲಾಗಿದೆ.

ಏನಿದು ಪ್ರಕರಣ

ಬಾಲಕಿ ಈಗತಾನೆ ಮೊದಲನೇ ವರ್ಷದ ಪಿಯುಸಿ ಮುಗಿಸಿ, ದ್ವಿತೀಯ ಪಿಯುಸಿಗೆ ಅಡ್ಮಿಷನ್ ಮಾಡಿಸಿದ್ದಳು. ಬಾಲಕಿ ತಾಯಿಯೊಂದಿಗೆ ಅಜ್ಜಿ-ಅಜ್ಜ ಮನೆಯಲ್ಲಿ ವಾಸವಾಗಿದ್ದಾಳೆ. ಬಾಲಕಿಯ ಅಜ್ಜ ಮಹದೇವನಾಯ್ಕ, ಅಜ್ಜಿ ಗೌರಮ್ಮ, ತಾಯಿ ಲೀಲಾವತಿ. ಉತ್ತಮ ವ್ಯಾಸಾಂಗ ಪಡೆದು ಬಾಲಕಿ ಐಎಎಸ್ ಅಧಿಕಾರಿ ಆಗಬೇಕೆಂದು ಕನಸು ಕಂಡಿದ್ದಳು. ಆದರೆ ಬಾಲಕಿಯ ಬಾಳಲ್ಲಿ ಆರೋಪಿ ಲೋಕೇಶ್​ನ ಪ್ರವೇಶವಾಗಿತ್ತು. ಲೋಕೇಶ್​ನಿಗೆ ಮದವೆಯಾಗಿ ಎರೆಡು ಮಕ್ಕಳಿದ್ದರೂ, ಪ್ರೀತ್ಸೆ ಪ್ರೀತ್ಸೆ ಅಂತ ಬಾಲಕಿ ಹಿಂದೆ ಬಿದ್ದಿದ್ದನು.

ಚೀರನಹಳ್ಳಿಯ ಲೋಕೇಶ್​ ಪತ್ನಿ ಮೃತಪಟ್ಟಿದ್ದು ಇಬ್ಬರು ಮಕ್ಕಳಿದ್ದಾರೆ. ಆದರೆ, ಲೋಕೇಶ್​ಗೆ ದ್ವಿತೀಯ ಪಿಯುಸಿ ವ್ಯಾಸಾಂಗ ಮಾಡುತ್ತಿದ್ದ ಬಾಲಕಿ ಮೇಲೆ ಕಣ್ಣಾಕಿದ್ದಾನೆ. ಆಕೆಯ ಅಶ್ಲೀಲ ವಿಡಿಯೋ, ಫೋಟೋಗಳನ್ನು ಮೊಬೈಲ್​ನಲ್ಲಿ ಸೆರೆ ಹಿಡಿದು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಈ ವಿಚಾರ ಬಾಲಕಿಯ ಮನೆಯವರಿಗೆ ತಿಳಿದಿದೆ. ಆಗ, ಬಾಲಕಿ ಕುಟುಂಬಸ್ಥರು ಕೆ.ಆರ್​ ನಗರ ಪೊಲೀಸ್ ಠಾಣೆಗೆ ದೂರು ನೀಡಿಲು ಎರಡೆರಡು ಬಾರಿ ತೆರಳಿದರೂ ಪಿಎಸ್ಐ ಹಾಗೂ ಇನ್ಸ್​ಪೆಕ್ಟರ್ ದೂರು ದಾಖಲಿಸಿಕೊಳ್ಳದೆ ವಾಪಸ್​​ ಕಳುಹಿಸಿದ್ದಾರೆ.

ಯಾವಾಗ ಪೊಲೀಸ್ ಠಾಣೆ ಮೆಟ್ಟಿಲೇರಿದರು ಆಗ ಲೋಕೇಶ್​, ಬಾಲಕಿ ವಾಸವಾಗಿದ್ದ ತಂದಗಾಲು ಗ್ರಾಮಕ್ಕೆ ತೆರಳಿ ಆಕೆಯ ಮನೆ ಮುಂದೆ ಗಲಾಟೆ ಮಾಡಿದ್ದಾನೆ. ಇದರಿಂದ ಮನನೊಂದ ಕುಟುಂಬಸ್ಥರು ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ದೇವರ ದರ್ಶನ ಪಡೆದು ಬಳಿಕ ತಾಳಬೆಟ್ಟಕ್ಕೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ವಿಷ ಪ್ರಾಶಾಣದಿಂದ ಅಜ್ಜಿ ಲೀಲಾವತಿ, ತಾಯಿ ಗೌರಮ್ಮ, ಹಾಗೂ ಬಾಲಕಿಯ ಸ್ಥಿತಿ ಗಂಭೀರವಾಗಿದೆ. ಅತ್ತ ಮಹದೇವನಾಯ್ಕ ಮೃತ ಪಟ್ಟಿದ್ದಾರೆ. ಸದ್ಯ ಮೂವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು ಮಹದೇವನಾಯ್ಕ ಮೃತಪಟ್ಟಿದ್ದಾರೆ. ಬಾಲಕಿ ಕೋಮಾಗೆ ಜಾರಿದ್ದು, ಆರೋಗ್ಯದಲ್ಲಿ ಏರುಪೇರಾಗುತ್ತಿದೆ.

RELATED ARTICLES
- Advertisment -
Google search engine

Most Popular