ತುಮಕೂರು: ಸೂತಕದ ಮೈಲಿಗೆ ಮೌಢ್ಯಕ್ಕೆ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಣಂತಿ ವಸಂತಾಳನ್ನು ಮನೆಯೊಳಗೆ ಸೇರಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದೆ.
ಸಿದ್ದೇಶ್ ಕುಟುಂಬ ಬಾಣಂತಿಯನ್ನು ಶಾಸ್ತ್ರೋಕ್ತವಾಗಿ ಮನೆಯೊಳಗೆ ಬರಮಾಡಿಕೊಂಡಿದ್ದಾರೆ.
ಆರೋಗ್ಯ ಇಲಾಖಾ ಅಧಿಕಾರಿಗಳು ನಿನ್ನೆ ಭೇಟಿ ನೀಡಿ ಸಿದ್ದೇಶ್ ಕುಟುಂಬದವರನ್ನು ಮನವೊಲಿಸಿದ್ದರು. ಇಂದು ವಸಂತಾಳನ್ನು ಊರಿನ ಒಳಗೆ ಇರುವ ಮನೆಗೆ ಕುಟುಂಬದವರು ಪ್ರವೇಶ ಕಲ್ಪಿಸಿದರು.
ಗೊಲ್ಲ ಸಂಪ್ರದಾಯದಂತೆ ಇನ್ನೂ ಒಂದು ತಿಂಗಳು ಬಾಣಂತಿ ಊರ ಹೊರಗೆ ಇರಬೇಕಿತ್ತು. ಆದರೆ ಮೌಢ್ಯಾಚರಣೆಯನ್ನು ಕುಟುಂಬಸ್ಥರು ಬದಿಗೊತ್ತಿ ಬಾಣಂತಿಯನ್ನು ಮನೆ ಒಳಗೆ ಬರಮಾಡಿಕೊಂಡಿದ್ದಾರೆ.
ತುಮಕೂರು ತಾಲೂಕಿನ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ಘಟನೆ ನಡೆದಿತ್ತು.