Saturday, April 19, 2025
Google search engine

Homeಅಪರಾಧಟಯರ್ ಬ್ಲಾಸ್ಟ್‌ ಆಗಿ ಪಲ್ಟಿ ಹೊಡೆದು ಹೊತ್ತಿ ಉರಿದ ಕಂಟೇನರ್ ಲಾರಿ

ಟಯರ್ ಬ್ಲಾಸ್ಟ್‌ ಆಗಿ ಪಲ್ಟಿ ಹೊಡೆದು ಹೊತ್ತಿ ಉರಿದ ಕಂಟೇನರ್ ಲಾರಿ

ಕಾನಾಹೊಸಹಳ್ಳಿ (ವಿಜಯನಗರ): ರಸ್ತೆ ಡಿವೈಡರ್‌ ಗೆ ಕಂಟೇನರ್ ಲಾರಿ ಗುದ್ದಿ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಮೇ. 16ರ ಗುರುವಾರ ಬೆಳಗ್ಗೆ ಕೂಡ್ಲಿಗಿ ತಾಲೂಕಿನ ಅಮಲಾಪುರ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ಸಂಭವಿಸಿದೆ.

ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ಚಲಿಸುತ್ತಿದ್ದ ಲಾರಿಯ ಟಯರ್ ಬ್ಲಾಸ್ಟ್‌ ಆದ ಪರಿಣಾಮ ಪಲ್ಟಿಯಾಗಿ ಬೆಂಕಿ ಹತ್ತಿಕೊಂಡಿತು. ಬೆಂಕಿ ಹೊತ್ತಿ ಉರಿದಿದ್ದು, ಲಾರಿಯಲ್ಲಿದ್ದ ಚಾಲಕ, ಸಹ ಚಾಲಕ ಅದೃಷ್ಟವಶಾತ್ ಪಾರಾಗಿದ್ದಾರೆ.

ಸ್ಥಳಕ್ಕೆ ಕಾನಾಹೊಸಹಳ್ಳಿ ಪೊಲೀಸರು ಭೇಟಿ ನೀಡಿ ಟ್ರಾಫಿಕ್ ಕ್ಲಿಯರ್ ಮಾಡಿದ್ದಾರೆ.

ಲಾರಿಗೆ ಬೆಂಕಿ ಹೊತ್ತಿ ಉರಿಯುತ್ತಿರುವಾಗ ಹೆದ್ದಾರಿ ಸಹಾಯಕರ ಬಳಗದ ಸದಸ್ಯರು ಗ್ರೂಪ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕೂಡಲೇ ಕೂಡ್ಲಿಗಿಯ ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಲಾಗಿತ್ತು. ಆದರೆ ಕೂಡ್ಲಿಗಿಯಲ್ಲಿ ಒಂದೇ ಅಗ್ನಿಶಾಮಕ ವಾಹನವಿದ್ದು, ಅದು ಕೂಡ ಕೆಟ್ಟು ಹೋಗಿದ್ದರಿಂದ ಕೊಟ್ಟೂರಿನಿಂದ ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದ್ದಾರೆ.

RELATED ARTICLES
- Advertisment -
Google search engine

Most Popular