Friday, April 4, 2025
Google search engine

Homeರಾಜ್ಯಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ: ಕೋಡಿಶ್ರೀ ಭವಿಷ್ಯ

ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ: ಕೋಡಿಶ್ರೀ ಭವಿಷ್ಯ

ಶ್ರೀನಿವಾಸಪುರ: ಒಂದೆರಡು ರಾಷ್ಟ್ರಗಳು ನೀರಿನಲ್ಲಿ ಮುಳುಗಲಿವೆ. ಯುದ್ಧಗಳು ನಡೆಯುವುದರಿಂದ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಹೇಳಿದರು.

ತಾಲೂಕು ನೆಲವಂಕಿ ಹೋಬಳಿ ವ್ಯಾಪ್ತಿಯ ಲಕ್ಷ್ಮೀಪುರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಸ್ವಾಮೀಜಿ ಮಾತನಾಡಿದರು.

ಈ ವರ್ಷದಲ್ಲಿ ರೈಲು ದುರಂತಗಳು ಇನ್ನೂ ಒಂದೆರಡು ನಡೆಯಲಿವೆ. ಇದರಿಂದ ಸಾವು ನೋವು ಗಳು ಹೆಚ್ಚು ಸಂಭವಿಸಲಿವೆ. ಪ್ರಪಂಚದಲ್ಲಿ ಯುದ್ಧ ಭೀತಿ ಇದ್ದು, ಪ್ರಸಕ್ತ ವರ್ಷದಲ್ಲಿ ಗುಡುಗು, ಮಿಂಚು, ಮಳೆ ಹೆಚ್ಚಾಗಲಿದೆ. ಅನೇಕ ಸಮಸ್ಯೆಗಳು ಎದುರಾಗಲಿವೆ ಎಂದು ಹೇಳಿದರು.

ಈ ವರ್ಷದಲ್ಲಿ ಭೂಮಿ ಬಿರುಕು ಬಿಡಲಿದೆ. ಸಮಸ್ಯೆಗಳು ಎದುರಾಗಲಿದೆ, ಹಾಗಾಗಿ ಭಯ, ಭಕ್ತಿಯ ಜೊತೆಯಲ್ಲಿ ಜನ ಭಗವಂತನ ಮೊರೆ ಹೋಗಬೇಕಾಗಿದೆ ಎಂದರು. ಭಗವಂತ ಹಲವಾರು ನಾಮಗಳಲ್ಲಿ ಇದ್ದಾನೆ. ಶಿವ, ಯೇಸು, ರಾಮ, ಅಲ್ಲಾ ಇವರ ಸ್ಮರಣೆ ಅಗತ್ಯವಾಗಿದೆ ಮಾನವ ಕುಲವೊಂದೇ. ಹಾಗಾಗಿ ಸಾಮರಸ್ಯದ ನಡುವೆ ಮೋಕ್ಷಕ್ಕೆ ದೈವಾನುಗ್ರಹ ಬೇಕಾಗಿದೆ ಎಂದರು.

ಸಮಾಜಕ್ಕೆ ಸಾಮರಸ್ಯದ ಸೇತುವೆಯಾಗಿ ಈ ಗ್ರಾಮದಲ್ಲಿ ನಡೆಸುತ್ತಿರುವ ಚೌಡೇಶ್ವರಿ ಅಮ್ಮನವರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಮುಸ್ಲಿಂ ಸಹೋದರರು ಮುಂದೆ ಬಂದು ಈ ಕಾರ್ಯಕ್ರಮ, ನಡೆಸುತ್ತಿರುವುದು ಶ್ಲಾಘನೀಯವೆಂದರು

RELATED ARTICLES
- Advertisment -
Google search engine

Most Popular