Wednesday, April 9, 2025
Google search engine

Homeಅಪರಾಧನಮ್ಮ ಮೆಟ್ರೋದಲ್ಲಿ ಮಹಿಳಾ ಟೆಕ್ಕಿಯ ಫೋಟೋ ಕ್ಲಿಕ್ಕಿಸಿ ಸಿಕ್ಕಿಬಿದ್ದ ವೈದ್ಯ

ನಮ್ಮ ಮೆಟ್ರೋದಲ್ಲಿ ಮಹಿಳಾ ಟೆಕ್ಕಿಯ ಫೋಟೋ ಕ್ಲಿಕ್ಕಿಸಿ ಸಿಕ್ಕಿಬಿದ್ದ ವೈದ್ಯ

ಬೆಂಗಳೂರು: ಮೆಟ್ರೋ ರೈಲಿನೊಳಗೆ ಆಯುರ್ವೇದ ವೈದ್ಯನೊಬ್ಬ ಮೊಬೈಲ್ನಲ್ಲಿ ಮಹಿಳಾ ಸಾಫ್ಟವೇರ್ ಎಂಜಿನಿಯರ್ ಅವರ ಪೋಟೋ ತೆಗೆದು ಸಿಕ್ಕಿಬಿದ್ದಿರುವ ಘಟನೆ ನಗರದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಡಿ.25ರಂದು ಮಹಿಳಾ ಟೆಕ್ಕಿಯೊಬ್ಬರು ಮೆಜೆಸ್ಟಿಕ್ನಿಂದ ಜೆ.ಪಿ.ನಗರಕ್ಕೆ ಹೋಗಲು ಮೆಟೋ ಹತ್ತಿದ್ದಾರೆ. ಇವರ ಕಂಪಾರ್ಟ್ ಮೆಂಟ್ನಲ್ಲಿದ್ದ ಆಯುರ್ವೇದ ವೈದ್ಯನೊಬ್ಬ ತನ್ನ ಮೊಬೈನ್ನಲ್ಲಿ ಟೆಕ್ಕಿಯ ಪೋಟೋ ಸೆರೆ ಹಿಡಿದಿದ್ದಾನೆ. ಇದು ಟೆಕ್ಕಿಯ ಗಮನಕ್ಕೆ ಬಂದಿದೆ. ಮೆಟ್ರೋ ರೈಲು ಜಯನಗರ ಮೆಟ್ರೋ ನಿಲ್ದಾಣಕ್ಕೆ ಬಂದಾಗ ಈ ವಿಷಯವನ್ನು ಸೆಕ್ಯೂರಿಟಿಗೆ ಹೇಳಿದ್ದಾರೆ.

ಸೆಕ್ಯೂರಿಟಿ ಗಾರ್ಡ್ ತಕ್ಷಣ ಆ ವ್ಯಕ್ತಿಯನ್ನು ಹಿಡಿದುಕೊಂಡು ವಿಚಾರಿಸಿದಾಗ, ಆತ ಆಯುರ್ವೇದ ವೈದ್ಯ ಎಂಬುದು ಗೊತ್ತಾಗಿದೆ. ಅನುಮತಿ ಇಲ್ಲದೆ ಪೋಟೋ ತೆಗೆದಿದ್ದಾನೆಂದು ಮಹಿಳಾ ಟೆಕ್ಕಿ ಅವಲತ್ತುಕೊಂಡಿದ್ದಾರೆ.

ಸುದ್ದಿ ತಿಳಿದು ಜಯನಗರ ಠಾಣೆ ಪೊಲೀಸರು ಸ್ಥಳಕ್ಕೆ ಬಂದು ಆಯುರ್ವೇದ ವೈದ್ಯನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಆತನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ ಟೆಕ್ಕಿಯ ಫೋಟೋ ಡಿಲೀಟ್ ಮಾಡಿ, ಎನ್ಸಿಆರ್ ದಾಖಲಿಸಿಕೊಂಡು, ಬುದ್ಧಿವಾದ ಹೇಳಿ ನಂತರ ಆತನನ್ನು ಬಿಟ್ಟು ಕಳುಹಿಸಿದ್ದಾರೆ.

RELATED ARTICLES
- Advertisment -
Google search engine

Most Popular