ಮಳೆಯಿಲ್ಲದೆ ಬಿತ್ತನೆಯಿಲ್ಲ ಹೊಲದಲ್ಲಿ ಕೃಷಿ ಚಟುವಟಿಕೆಯಿಲ್ಲ. ರೈತರು ಯಾರು ಕೃಷಿ ಕೂಲಿಗೆ ಕರೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಕೂಲಿಕಾರರು ಎಂಎನ್ಆರ್ಇಜಿ ಕೆಲಸಕ್ಕಾಗಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಬಾಗಲಕೋಟೆ: ಜೂನ್ ತಿಂಗಳ ಆರಂಭದಲ್ಲೇ ಕಾಣಿಸಿಕೊಳ್ಳಬೇಕಿದ್ದ ಮುಂಗಾರು(Monsoon) ಮಳೆಯ ಸುಳಿವೇ ಇಲ್ಲ. ಮುಂಗಾರು ಕೈಕೊಟ್ಟಿದ್ದರಿಂದ ಹೊಲದಲ್ಲಿ ಯಾವುದೇ ಬಿತ್ತನೆ ನಡೆಯದೇ ರೈತರು(Farmers) ಕಂಗಾಲಾಗಿದ್ದಾರೆ. ಮತ್ತೊಂದೆಡೆ ಹೊಲದಲ್ಲಿ ಕೆಲಸವಿಲ್ಲದೆ ಕೂಲಿಕಾರರು ಪರಿತಪಿಸುತ್ತಿದ್ದಾರೆ. ಹೀಗಾಗಿ ಎಂಎನ್ಆರ್ಇಜಿ ಕೆಲಸಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(Narendra Modi) ಅವರಿಗೆ ಗ್ರಾಮೀಣ ಕೂಲಿಕಾರರು(Rural Labourers) ಪತ್ರ ಬರೆದಿದ್ದಾರೆ.
ಮಳೆಯಿಲ್ಲದೆ ಬಿತ್ತನೆಯಿಲ್ಲ ಹೊಲದಲ್ಲಿ ಕೃಷಿ ಚಟುವಟಿಕೆಯಿಲ್ಲ. ರೈತರು ಯಾರು ಕೃಷಿ ಕೂಲಿಗೆ ಕರೆಯುತ್ತಿಲ್ಲ. ಹೀಗಾಗಿ ಗ್ರಾಮೀಣ ಕೂಲಿಕಾರರು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಎಂಎನ್ಆರ್ಇಜಿ) ಮೇಲೆ ಡಿಪೆಂಡ್ ಆಗಿದ್ದಾರೆ. ಎಂಎನ್ಆರ್ಇಜಿ ಕೆಲಸ ನೀಡುವಂತೆ ಪ್ರಧಾನಿ ಮೋದಿಗೆ ಬಾಗಲಕೋಟೆ ಜಿಲ್ಲೆ ಗುಳೇದಗುಡ್ಡ ತಾಲೂಕಿನ ಹಾನಾಪುರ ಎಸ್ಪಿ ಗ್ರಾಮದ ಗ್ರಾಮೀಣ ಕೂಲಿಕಾರರು ಪತ್ರ ಬರೆದಿದ್ದಾರೆ. ಈಗಾಗಲೇ ನೂರು ಮಾನವ ದಿನಗಳ ಪೈಕಿ ಕೆಲಸ ಸಂಪೂರ್ಣ ಮುಕ್ತಾಯವಾಗಿದೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ನಮಗೆ ಬೇರೆ ಕಡೆ ಕೃಷಿಯಲ್ಲಿ ಕೆಲಸಗಳು ಸಿಗುತ್ತಿಲ್ಲ. ನಮಗೆ ಎಂಎನ್ಆರ್ಇಜಿ ಮೂಲಕ ಇನ್ನೂ ಹೆಚ್ಚಿನ ನೂರು ದಿನ ಅವಧಿಗೆ ಕೆಲಸ ಕೊಡಿ ಎಂದು ಪ್ರಧಾನಿ ಮೋದಿ ಕಾರ್ಯಾಲಯಕ್ಕೆ ಪತ್ರ ಬರೆದಿದ್ದಾರೆ. ಪತ್ರಕ್ಕೆ 200 ಕೂಲಿಗಾರರು ಸಹಿ ಮಾಡಿ ಫೋಸ್ಟ್ ಮೂಲಕ ಪತ್ರ ರವಾನಿಸಿದ್ದಾರೆ.