ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ನಾಲೆಯಲ್ಲಿ ಹಸು ತೊಳೆಯಲು ಹೋಗಿ ಕಾಲು ಜಾರಿ ನಾಲೆಯಲ್ಲಿ ಮುಳುಗಿ ರೈತನೋರ್ವ ಸಾವನ್ನಪ್ಪಿರುವ ಘಟನೆ ಸಾಲಿಗ್ರಾಮ ತಾಲೂಕಿನ ಕರ್ತಾಳು ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪುಟ್ಟೇಗೌಡ(61 ) ಎಂಬುವರು ಮಂಗಳವಾರ ಜಮೀನಿನಲ್ಲಿ ಕೆಲಸ ಮುಗಿಸಿ ಕಟ್ಟೆಪುರ ನಾಲೆಯಲ್ಲಿ ಹಸುಗಳನ್ನ ತೊಳೆಯಲು ಹೋದ ವೇಳೆ ಕಾಲು ಜಾರಿ ಬಿದ್ದು ನಾಲೆಯಲ್ಲಿ ಮುಳುಗಿ ಈ ಘಟನೆ ನಡೆದಿದೆ.
ಮೃತರ ಮೃತ ದೇಹವನ್ನುನಾಲೆಯಲ್ಲಿ ಹುಡುಕಾಟ ಮಾಡಿದರು ಪತ್ತೆಯಾಗದೇ ಬುಧವಾರ ಬೆಳಿಗ್ಗೆ 7 ಗಂಟೆಯ ಸುಮಾರಿನಲ್ಲಿ ಶವಪತ್ತೆಯಾಗಿದ್ದು ಮೃತರಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ.
ಮೃತರ ಮರಣೋತ್ತರ ಪರೀಕ್ಷೆಯನ್ನು ಹನಸೋಗೆ ಪ್ರಾಥಮಿಕ ಕೇಂದ್ರದ ವೈದ್ಯರು ನಡೆಸಿ ನಂತರ ಮೃತದೇಹವನ್ನು ವಾರಸುದಾರಿಗೆ ಒಪ್ಪಿಸಲಾಯಿತು ಘಟನೆಯ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರರಣ ದಾಖಲಾಗಿದೆ.