ಮದ್ದೂರು: ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಹರಕನಹಳ್ಳಿ ಗ್ರಾಮಕ್ಕೆ ಬಿಜೆಪಿ ಬರ ಅಧ್ಯಯನ ತಂಡ ಭೇಟಿ ನೀಡಿದ್ದು, ಗ್ರಾಮದ ಹಲವು ಜನರನ್ನ ಭೇಟಿ ಮಾಡಿ, ಮಾಹಿತಿ ಪಡೆದರು.
ಗ್ರಾಮದ ಶಿವಲಿಂಗಮ್ಮ ಎಂಬುವವರ ಬಳಿ ತಂಡ ಮಾಹಿತಿ ಪಡೆಯಿತು.
ಇದೇ ವೇಳೆ ರಂಜಿತ್ ಎಂಬುವವರು ಮಾಜಿ ಸಿಎಂ ಸದಾನಂದಗೌಡ ಅವರಿಗೆ ಟಗರು ಮರಿ ಕೊಡಲು ಮುಂದಾದಾಗ ಬೇಡ ಎಂದ ಅವರು, ನೀನು ಸಾಕು ಎಂದ ಹೇಳಿದರು.
ಇದೇ ವೇಳೆ ಸದಾನಂದ ಗೌಡರು, ಜನರಿಗೆ ನಾನು ಯಾರು ಎಂದು ಕೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಮಹಿಳೆಯರು, ನಾನು ನಿಮ್ಮನ್ನ ಟಿವಿಯಲ್ಲಿ ನೋಡಿದ್ದೇವೆ. ಯಾವಾಗಲೂ ನಗುತ್ತಿರುತ್ತಿರಿ ಎಂದು ಹೇಳಿದರು.