Tuesday, April 22, 2025
Google search engine

Homeಅಪರಾಧಪತ್ನಿಗೆ ಹೆರಿಗೆಯಾಗುತ್ತಿದ್ದಂತೆ ಅವಳಿ ಹೆಣ್ಣು ಶಿಶುಗಳನ್ನು ಕದ್ದು, ಕೊಂದು, ಹೂತು ಹಾಕಿದ ತಂದೆ

ಪತ್ನಿಗೆ ಹೆರಿಗೆಯಾಗುತ್ತಿದ್ದಂತೆ ಅವಳಿ ಹೆಣ್ಣು ಶಿಶುಗಳನ್ನು ಕದ್ದು, ಕೊಂದು, ಹೂತು ಹಾಕಿದ ತಂದೆ

ಪತ್ನಿಗೆ ಹೆರಿಗೆಯಾಗುತ್ತಿದ್ದಂತೆ ವ್ಯಕ್ತಿಯೊಬ್ಬ ಅವಳಿ ಹೆಣ್ಣು ಶಿಶುಗಳನ್ನು ಕದ್ದೊಯ್ದು, ಕೊಲೆ ಮಾಡಿ ಹೂತು ಹಾಕಿರುವ ಹೃದಯ ವಿದ್ರಾವಕ ಘಟನೆ ದೆಹಲಿಯಲ್ಲಿ ನಡೆದಿದೆ. ಮಹಿಳೆಗೆ ಹೆರಿಗೆಯಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗುತ್ತಿದ್ದಂತೆ ಗಂಡು ಮಗು ಹುಟ್ಟಲಿಲ್ಲ ಎನ್ನುವ ಕಾರಣ ಎರಡು ಶಿಶುಗಳನ್ನು ಕೊಲೆ ಮಾಡಿ ಹೂತು ಹಾಕಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಈ ವಿಚಾರದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದ್ದು ಆರೋಪಿ ನೀರಜ್ ಸೋಲಂಕಿ ಪರಾರಿಯಾಗಿದ್ದಾನೆ, ಮತ್ತು ಮಕ್ಕಳ ಅಜ್ಜನನ್ನು ಕೂಡ ಕೊಲೆ ಆರೋಪದ ಮೇಲೆ ಬಂಧಿಸಲಾಗಿದೆ. ಪೂಜಾ ಎಂಬ ಮಹಿಳೆ ಹರ್ಯಾಣದ ರೋಹ್ಟಕ್​ನಲ್ಲಿ ಅವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರ ಆಕೆಯ ಪತಿ ನೀರಜ್ ಶಿಶುಗಳನ್ನು ಕದ್ದೊಯ್ದಿದ್ದ ಎನ್ನಲಾಗಿದೆ.

ಜೂನ್​ 1 ರಂದು ಆಸ್ಪತ್ರೆಯಿಂದ ಮನೆಗೆ ಹೊರಟಿದ್ದರು, ತಾನು ಮಕ್ಕಳೊಂದಿಗೆ ಬೇರೆ ಕಾರಿನಲ್ಲಿ ಬರುವುದಾಗಿ ಹೇಳಿ ಪತ್ನಿಯನ್ನು ಮನೆಗೆ ಕಳುಹಿಸಿ ಈ ದುಷ್ಕೃತ್ಯವೆಸಗಿದ್ದಾರೆ. ಎರಡು ದಿನಗಳ ನಂತರ ದೆಹಲಿಯ ಹೊರಭಾಗದ ಪೂತ್ ಕಲಾನ್‌ನಲ್ಲಿ ಶಿಶುಗಳನ್ನು ಹೂಳಲಾಗಿದೆ ಎನ್ನುವ ವಿಚಾರ ತಿಳಿದ ಬಳಿಕ ಪೊಲೀಸರಿಗೆ ದೂರು ನೀಡಲಾಗಿದೆ.

2022ರಲ್ಲಿ ಪೂಜಾ ನೀರಜ್​ ಎಂಬುವವನನ್ನು ವಿವಾಹವಾಗಿದ್ದರು, ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು, ಗಂಡು ಮಗುವನ್ನೇ ಹೆರಬೇಕು ಎಂದು ಒತ್ತಡ ಹೇರುತ್ತಿದ್ದರು ಎಂದು ತಿಳಿಸಿದ್ದಾರೆ. ಪೊಲೀಸರು ಜೂನ್ 5 ರಂದು ಎರಡು ಶಿಶುಗಳನ್ನು ಮಣ್ಣಿನಿಂದ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.

RELATED ARTICLES
- Advertisment -
Google search engine

Most Popular