ಮೈಸೂರು:ದಿನಾಂಕ 26.2.2024ರ ಸೋಮವಾರ ಸಂಜೆ 5 ಗಂಟೆಗೆ ಮೈಸೂರಿನ ಕರ್ನಾಟಕ ಕಲಾಮಂದಿರದಲ್ಲಿ ನಡೆಯಲಿರುವ ಪದ್ಮಶ್ರೀ ಡಾ: ಸಿಎನ್ ಮಂಜುನಾಥ್ ರವರಿಗೆ ಮೈಸೂರು ನಾಗರೀಕರ ವತಿಯಿಂದ ನೀಡಲಾಗುತ್ತಿರುವ ಅಭಿನಂದನಾ ಕಾರ್ಯಕ್ರಮ (ಧನ್ಯವಾದ ಧನ್ವಂತರಿ ಕಾರ್ಯಕ್ರಮದ ಅಂಗವಾಗಿ ಮೈಸೂರಿನ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನು ನಡೆಸಲಾಯಿತು.
ಸಮಿತಿಯ ಸಂಚಾಲಕರಾದ ಬೀಡನಹಳ್ಳಿ ಸತೀಶ್ ಗೌಡ ಗೋಷ್ಠಿಯನುದ್ದೇಶಿಸಿ ಮಾತನಾಡಿ 26ರ ಸಂಜೆ ಐದು ಗಂಟೆಗೆ ನಡೆಯುವ ಈ ಕಾರ್ಯಕ್ರಮದಲ್ಲಿ ಆದಿ ಚುಂಚನಗಿರಿ ಮಹಾಸಂಸ್ಥಾನದ ಪರಂಪೂಜ್ಯ ಜಗದ್ಗುರುಗಳಾದ ಡಾ. ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾ ಸ್ವಾಮೀಜಿ ರವರು ಹಾಗೂ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ಶಿವರಾತ್ರಿ ದೇಶಕೇಂದ್ರ ಮಹಾಸ್ವಾಮಿಜಿ ರವರು ದಿವ್ಯ ಸಾನಿಧ್ಯವನ್ನು ವಹಿಸಲಿದ್ದು ಇದೇ ಕಾರ್ಯಕ್ರಮದಲ್ಲಿ ಪಬ್ಲಿಕ್ ಟಿವಿಯ ಮುಖ್ಯಸ್ಥರಾದ ಶ್ರೀ ಹೆಚ್ ಆರ್ ರಂಗನಾಥ್ ರವರು ವಿಶೇಷ ಆಹ್ವಾನಿತರಾಗಿ ಆಗಮಿಸಲಿದ್ದಾರೆ.
ಜೊತೆಗೆ ಮೈಸೂರು ಜಿಲ್ಲೆಯ ಎಲ್ಲಾ ಚುನಾಯಿತ ಜನಪ್ರತಿನಿಧಿಗಳು ಮಾಜಿ ಶಾಸಕರು ಸಚಿವರು, ವಿವಿಧ ಸಂಘಟನೆಗಳ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಎಲ್ಲಾ ಸಮಾಜದ ಮುಖಂಡರುಗಳು ಮಂಜುನಾಥ್ ರವರ ಅಭಿಮಾನಿಗಳ ಸಮ್ಮುಖದಲ್ಲಿ ಜಯದೋಗದ ಕೀರ್ತಿಯನ್ನು ಜಗದಕಲಕ್ಕೆ ಸಾರಿದ ಹೃದ್ರೋಗ ತಜ್ಞರಾದ ಪದ್ಮಶ್ರೀ ಡಾ: ಸಿಎನ್ ಮಂಜುನಾಥ್ ರವರನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಸಹೃದಯಿ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ವಿಶಾಲ ಸೇವೆಗೈದ ಡಾ. ಮಂಜುನಾಥ್ ರವರನ್ನು ಹಾರ್ದಿಕವಾಗಿ ಅಭಿನಂದಿಸಬೇಕೆಂದು ಕೋರಿದರು.
ಇದೇ ವೇಳೆ ಡಾಕ್ಟರ್ ಮಂಜುನಾಥ್ ರವರನ್ನು ಅಭಿನಂದಿಸಲು ಯಾವುದೇ ವಿವಿಧ ಸಂಘಟನೆಗಳು ವ್ಯಕ್ತಿಗಳು ಮುಂದಾಗುವುದಾದರೆ ಕಾರ್ಯಕ್ರಮ ಪ್ರಾರಂಭವಾಗುವುದಕ್ಕೆ ಮುಂಚೆ ಅಭಿನಂದನಾ ಸಮಿತಿಯವರ ಬಳಿ ಹೆಸರನ್ನು ನೋಂದಾಯಿಸುವುದು ಕಡ್ಡಾಯವಾಗಿದ್ದು ಅವರಿಗೆ ವೇದಿಕೆಯ ಕಾರ್ಯಕ್ರಮದ ಗೌರವ ಸಮರ್ಪಣೆಗೆ ಅವಕಾಶ ನೀಡುವುದಾಗಿ ತಿಳಿಸಿದರು. ಈವರೆಗಿನ ಜಿಲ್ಲಾ ಸಹಕಾರಿ ಬ್ಯಾಂಕ್ ನ ನಿರ್ದೇಶಕ ರವಿಕುಮಾರ್ ಎಂಐಟಿ ಕಾಲೇಜಿನ ಮಂಜುನಾಥ್ ಜಿಲ್ಲಾ ವಕ್ಕಲಿಗರ ಸಂಘದ ಕಾರ್ಯದರ್ಶಿ ಚೇತನ್ ಜಿಲ್ಲಾ ಒಕ್ಕಲಿಗರ ಸಂಘದ ನಿರ್ದೇಶಕ ರವಿ ,ಚೇತನ್ .ಈ, ಹಾಗೂ ಮುಖಂಡರಾದ ರಾಜಕುಮಾರ್ ಉಪಸ್ಥಿತರಿದ್ದರು.