Monday, April 21, 2025
Google search engine

Homeಅಪರಾಧಸ್ನೇಹಿತರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಸ್ನೇಹಿತರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ

ಬೆಂಗಳೂರು: ಸ್ನೇಹಿತರ ಮಧ್ಯೆ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.

 ದರ್ಶನ್ ಕೊಲೆಯಾದ ದುರ್ದೈವಿ. ಚಂದ್ರಶೇಖರ್ ಅಲಿಯಾಸ್​​ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಕೊಲೆ ಮಾಡಿದ ಆರೋಪಿಗಳು.

ಜನವರಿ 24 ರಂದು ಕೊಲೆಯಾದ ದರ್ಶನ್ ದೊಡ್ಡಮ್ಮ ತನ್ನ ತಾಯಿಗೆ ಕೊಡಲು 3 ಸಾವಿರ ಹಣವನ್ನು ದರ್ಶನಗೆ ನೀಡಿದ್ದಳು. ಇದೇ ಹಣವನ್ನು ತೆಗೊಂಡು ದರ್ಶನ್​ ಸ್ನೇಹಿತ ನಿತಿನ್, ರಮೇಶ್ ಜೊತೆಗೆ ಬಾರ್ ​ಗೆ ಬಂದಿದ್ದನು. ಇದೇ ಬಾರ್​ ಗೆ ಆರೋಪಿಗಳಾದ ಚಂದ್ರಶೇಖರ್ ಅಲಿಯಾಸ್​​ ಪ್ರೀತಂ, ಯಶವಂತ, ಪ್ರಶಾಂತ್, ಲಂಕೇಶ್ ಮತ್ತು ದರ್ಶನ್ ಬಂದಿದ್ದರು.

ಆರೋಪಿಗಳು ಮತ್ತು ದರ್ಶನ್ ಟೀಂ ಎಲ್ಲರೂ ಸ್ನೇಹಿತರೆ. ಆದರೆ ಅದೇನಾಯ್ತೊ ಏನೊ ನಿತಿನ್ ಹಾಗೂ ಪ್ರೀತಂ ನಡುವೆ ಕಿರಿಕ್ ಆಗುತ್ತೆ. ಇಷ್ಟಾದ ಮೇಲೆ ದರ್ಶನ್ ಆ್ಯಂಡ್ ಟೀಮ್ ರಮೇಶ್ ಮನೆ ಬಳಿಗೆ ಹೋಗುತ್ತಾರೆ. ಪ್ರೀತಂ ಆ್ಯಂಡ್​ ಗ್ಯಾಂಗ್​ ಇಲ್ಲಿಗೂ ಬರುತ್ತಾರೆ. ಈ ವೇಳೆ ನಿತಿನ್ ಹಾಗೂ ಪ್ರೀತಂ ನಡುವೆ ಗಲಾಟೆ ಆಗುತ್ತೆ. ಆಗ ನಿತಿನ್​ಗೆ ಪ್ರೀತಂ ಹೊಡೆದಿದ್ದಾನೆ.

ಈ ವೇಳೆ ದರ್ಶನ್ ಮಧ್ಯಪ್ರವೇಶಿಸಿ ನಿತಿನ್​ಗೆ ಹೊಡೆದಿದ್ದನ್ನು ಪ್ರಶ್ನಿಸಿದ್ದಾನೆ. ಆಗ ದರ್ಶನ್​ಗೆ ಪ್ರೀತಂ ಹಾಲೋಬ್ಲಾಕ್ (ಸಿಮೆಂಟ್​ ಇಟ್ಟಿಗೆ) ಯಿಂದ ಹೊಡೆದಿದ್ದಾನೆ. ಇದರಿಂದ ದರ್ಶನ್​ ಸ್ಥಳದಲ್ಲೆ ಮೃತಪಟ್ಟಿದ್ದಾನೆ.

ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular