Sunday, April 20, 2025
Google search engine

Homeಅಪರಾಧರಾಮನಗರ: ಸ್ನೇಹಿತರ ಮಧ್ಯೆ ನಡೆದ ಜಗಳದಲ್ಲಿ ಓರ್ವನ ಸಾವು

ರಾಮನಗರ: ಸ್ನೇಹಿತರ ಮಧ್ಯೆ ನಡೆದ ಜಗಳದಲ್ಲಿ ಓರ್ವನ ಸಾವು

ರಾಮನಗರ: ಸ್ನೇಹಿತರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳವೊಂದು ಕೊಲೆಯಲ್ಲಿ ಅಂತ್ಯವಾದ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಟಿ.ಗೊಲ್ಲಹಳ್ಳಿಯಲ್ಲಿ ಗ್ರಾಮದಲ್ಲಿ ನಡೆದಿದೆ.

35 ವರ್ಷದ ರವೀಶ ಎಂಬಾತನೇ ಸ್ನೇಹಿತನಿಂದಲೇ ಕೊಲೆಯಾದ ವ್ಯಕ್ತಿ. ರವೀಶನನ್ನು ಸ್ನೇಹಿತ ರವಿಕುಮಾರ್ ಅಲಿಯಾಸ್ ಲೊಡ್ಡೆ ಚಾಕು ಇರಿದು ಕೊಲೆ ಮಾಡಿದ್ದಾನೆ.

ಕ್ಷುಲ್ಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಚಾಕಿನಿಂದ ಇರಿದ ಸ್ನೇಹಿತ ಕೊಲೆಗೈದಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ರವಿಕುಮಾರ್ ಎಂಬಾತನನ್ನು ಕೋಡಿಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೋಡಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES
- Advertisment -
Google search engine

Most Popular