ತೆಲಂಗಾಣ:ತೆಲಂಗಾಣದ ಭುವನಗಿರಿ ಜಿಲ್ಲೆಯ ಯಾದಾದ್ರಿ ಬಳಿ ಚಲಿಸುತ್ತಿದ್ದ ಫಲಕನುಮಾ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಮೂರು ಭೋಗಿಗಳು ಬೆಂಕಿಗೆ ಆಹುತಿಯಾಗಿವೆ. ಪಶ್ಚಿಮ ಬಂಗಾಳದ ಹೌರಾದಿಂದ ಸಿಕಂದರಾಬಾದ್‌ಗೆ ಬರುತ್ತಿದ್ದ ಸಂದರ್ಭದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯನ್ನು ಗಮನಿಸಿದ ಸಿಬ್ಬಂದಿ ತಕ್ಷಣವೇ ಬೊಮ್ಮಾಯಿಪಲ್ಲಿ ಮತ್ತು ಪಗಿಡಿಪಲ್ಲಿ ನಡುವೆ ರೈಲನ್ನು ನಿಲ್ಲಿಸಿ, ಪ್ರಯಾಣಿಕರನ್ನು ಹೊರಗೆ ಕಳುಹಿಸಿದ್ದಾರೆ.
ಇದರಿಂದ ಹೆಚ್ಚಿನ ಅನಾಹುತ ಆಗುವುದು ತಪ್ಪಿದೆ. ಎಸ್4, ಎಸ್5 ಮತ್ತು ಎಸ್6 ಭೋಗಿಗಳಿಗೆ ಬೆಂಕಿ ತಗುಲಿದ್ದು ಹೊತ್ತಿ ಉರಿಯುತ್ತಿವೆ, ಇದರಿಂದಾಗಿ ಈ ಪ್ರಾಂತ್ಯದಲ್ಲಿ ಭಾರಿ ಹೊಗೆ ಆವರಿಸಿಕೊಂಡಿದೆ. ದಕ್ಷಿಣ ಮಧ್ಯೆ ರೈಲ್ವೆ ಜನರಲ್ ಮ್ಯಾನೇಜರ್ ಅರುಣ್ ಕುಮಾರ್ ಜೈನ್ ಸಿಕಂದರಾಬಾದ್‌ನಿಂದ ಬೆಂಕಿ ತಗುಲಿದ ಸ್ಥಳಕ್ಕೆ ದೌಡಾಯಿಸಿದ್ದಾರೆ. ಬೆಂಕಿ ಆರಿಸುವ ವಾಹನಗಳು ಕೂಡ ಸ್ಥಳಕ್ಕಾಗಿಮಿಸಿದ್ದು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ.