Saturday, April 19, 2025
Google search engine

Homeರಾಜ್ಯಸುದ್ದಿಜಾಲತಿಮ್ಮಪ್ಪಸ್ವಾಮಿ ಬೆಟ್ಟದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ

ತಿಮ್ಮಪ್ಪಸ್ವಾಮಿ ಬೆಟ್ಟದಲ್ಲಿ ಅದ್ದೂರಿ ಬ್ರಹ್ಮರಥೋತ್ಸವ

ಚನ್ನಪಟ್ಟಣ: ತಾಲ್ಲೂಕಿನ ಇತಿಹಾಸ ಪ್ರಸಿದ್ದ ಪುಣ್ಯಕ್ಷೇತ್ರವಾಗಿರುವ ಕುಡಕೆ ಬೇವೂರುರಿನಲ್ಲಿ ನವರಾತ್ರಿಯ ವಿಶೇಷವಾಗಿ ಬೆಟ್ಟದ ತಿಮ್ಮಪ್ಪನಸ್ವಾಮಿ ಬೆಟ್ಟದಲ್ಲಿ ಬುಧವಾರ ಅದ್ದೂರಿ ಬ್ರಹ್ಮರಥೋತ್ಸವ ನಡೆಯಿತು. ಬೆಳಿಗ್ಗೆ ೯.೩೦ ರಿಂದ ೧೦.೩೦ ವರೆಗೆ ರಥಶಾಂತಿ ಪೂಜೆ ನಡೆಯಲಿದ್ದು ಹಾಗೆಯೇ ೧೧.೩೦ ರಿಂದ ೧೨.೦೦ ರ ಶುಭ ಧನುಸ್ಸು ಲಗ್ನದಲ್ಲಿ ತಾಲ್ಲೂಕು ದಂಡಾಧಿಕಾರಿಗಳಾದ ಮಹೇಂದ್ರ ಅವರ ಅಧ್ಯಕ್ಷತೆಯಲ್ಲಿ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಬ್ರಹ್ಮರಥೋತ್ಸವ ಚಾಲನೆ ನೀಡಲಾಯಿತು.

ಜೊತೆಗೆ ಗರಡೋತ್ಸವ, ಗಜೋತ್ಸವ, ಶ್ರೀಯವರ ಕಲ್ಯಾಣೋತ್ಸವ, ಮುತ್ತಿನ ಪಲ್ಲಕ್ಕಿ ಉತ್ಸವ, ಹನುಮಾನ್ ಉತ್ಸವ ಮತ್ತು ವಿವಿಧ ಜನಪದ ಸಾಂಸ್ಕೃತಿ ಕಾರ್ಯಕ್ರಮಗಳು ಹಾಗೂ ರಾತ್ರಿ ರಸಮಂಜರಿ ಕಾರ್ಯಕ್ರಮ ನಡೆದವು. ರಥೋತ್ಸವದಲ್ಲಿ ಜಿಲ್ಲೆಯ ಸಾವಿರಾರು ಭಕ್ತರು ಭಾಗವಹಿಸಿ ದೇವರ ದರ್ಶನ ಪಡೆದು ಇಷ್ಠಾರ್ಥಗಳನ್ನು ನೆರವೇರಿಸುವಂತೆ ಬ್ರಹ್ಮರಥೋತ್ಸವಕ್ಕೆ ಬಾಳೆಹಣ್ಣು, ಜವನ ಎಸೆದು ಪ್ರಾರ್ಥಿಸಿದರು. ಈ ವೇಳೆ ಭಕ್ತಾಧಿಗಳಿಗೆ ಊಟದ ವ್ಯವಸ್ಥೆಯನ್ನು ಏರ್ಪಡಿಸಲಾಗಿತ್ತು.

ಪ್ರತಿ ವರ್ಷವೂ ಬೇವೂರು ತಿಮ್ಮಪ್ಪ ದೇವಸ್ಥಾನಕ್ಕೆ ಬಹಳ ಹಿಂದಿನ ಐತಿಹಾಸಿಕ ಮಹತ್ವವಿದ್ದು ನವರಾತ್ರಿಯ ಜಾತ್ರೆ ಮತ್ತು ಹಬ್ಬವನ್ನು ವಿಜಯದಶಮಿ ದಿನದಂದು ದಸರಾ ಹಬ್ಬದ ವಾತಾವರಣದಂತೆ ಆಚರಿಸಲಾಗುತ್ತದೆ. ಜಾತ್ರೆಯಲ್ಲಿ ಸುತ್ತ ಮುತ್ತಲಿನ ಗ್ರಾಮಗಳಿಂದ ಸುಮಾರು ಸಾವಿರರು ಜನರು ಸೇರಿದೈವ ಕೃಪೆಗೆ ಪಾತ್ರರಾದರು. ದೇವಸ್ಥಾನದ ಮೇಲ್ವಿಚಾರಕರಾದ ಬಿ.ಸಿ.ಪುಟ್ಟಸ್ವಾಮಿ, ಅರ್ಚಕ ಸಂತೋಷ್ ಪೂಜಾ ವಿಧಾನಗಳನ್ನು ನೆರವೇರಿಸಿದರು.

RELATED ARTICLES
- Advertisment -
Google search engine

Most Popular