- ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ: ಸಾಲಿಗ್ರಾಮ ಪಟ್ಟಣದಲ್ಲಿ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಜನವರಿ 26 ರಿಂದ 31ರವರೆಗೆ ನಡೆಯಲಿರುವ ಜಾತ್ರಾ ಮಹೋತ್ಸವದ ಪ್ರಚಾರ ಆಂದೋಲನ ರಥಯಾತ್ರೆಗೆ ಅದ್ದೂರಿ ಸ್ವಾಗತವನ್ನು ಕೋರಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಎಸ್.ಎನ್.ನರಗುಂದ, ಎಪಿಎಂಸಿ ಮಾಜಿ ಅಧ್ಯಕ್ಷ ಕುಪ್ಪಹಳ್ಳಿ ಸೋಮಶೇಖರ್, ವೀರಶೈವ ಮಹಾಸಭಾ ಒಕ್ಕೂಟದ ಖಜಾಂಚಿ ದಡದಹಳ್ಳಿ ನಟರಾಜ್, ಗ್ರಾ.ಪಂ. ಅಧ್ಯಕ್ಷರಾದ ಫಾತಿಮಾ ಉನ್ನಿಸ, ಪಶುಪತಿ ಜಗದೀಶ್, ಮಾಜಿ ಅಧ್ಯಕ್ಷರಾದ ಸರಗೂರು ಶಿವು, ಪಶುಪತಿತೇಜುಮೂರ್ತಿ, ರಾಂಪುರ ಪುರುಷೋತ್ತಮ, ಮಾಜಿ ಉಪಾಧ್ಯಕ್ಷೆ ಸುಧಾರೇವಣ್ಣ, ಸದಸ್ಯರುಗಳಾದ ಎಸ್.ಎಸ್.ಹೇಮಂತ್ ಕುಮಾರ್, ಹರೀಶ್, ಸಿದ್ದರಾಜು, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸತೀಶ್, ನಿರ್ದೇಶಕರಾದ ಪಾಪಣ್ಣ, ಅನಂತ, ಮಹೇಶ್, ರೈತ ಮುಖಂಡ ಸಾ.ರಾ.ಸತೀಶ್, ಬ್ಲಾಕ್ ಕಾಂಗ್ರೆಸ್ ಎಸ್ ಸಿ ಘಟಕದ ಅಧ್ಯಕ್ಷ ಕಂಠಿಕುಮಾರ್, ಗಾರೆ ಕೆಲಸಗಾರರ ಸಂಘದ ಅಧ್ಯಕ್ಷ ಜಗದೀಶ್, ಮುಖಂಡರುಗಳಾದ ಷಡಾಕ್ಷರಿ, ತಮ್ಮಣ್ಣ, ಕುಮಾರಸ್ವಾಮಿ, ಹೋಟೆಲ್ ರಾಮಣ್ಣ, ವೇಣು, ರಾಜು ಸೇರಿದಂತೆ ಹಲವರು ಇದ್ದರು.