ಮಂಡ್ಯ: ಮಂಡ್ಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಂಜಯ ವೃತ್ತದ ಕೆಎಸ್ ಆರ್ ಟಿಸಿ ಡಿಪೋ ಮುಂದೆ ಅದ್ದೂರಿ ಸ್ವಾಗತ ಕೋರಲಾಗಿದೆ.
ಕ್ರೇನ್ ಮೂಲಕ ಬೃಹತ್ ಹಾರ ಹಾಕಿ, ಟಗರನ್ನು ಉಡುಗೊರೆಯಾಗಿ ನೀಡಿ ಸ್ವಾಗತಿಸಲಾಗಿದೆ
ನಗರಸಭೆ ಸದಸ್ಯ ನಹೀಮ್, ಮಾಜಿ ಮೂಡ ಅಧ್ಯಕ್ಷ ಮುನವರ್ ಖಾನ್ ರಿಂದ 30 ಸಾವಿರಕ್ಕು ಅಧಿಕ ಮೌಲ್ಯದ ಟಗರನ್ನು ಸಿದ್ದರಾಮಯ್ಯ ಅವರಿಗೆ ಗಿಫ್ಟ್ ನೀಡಲಾಗಿದೆ.
ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಕಳೆದ 57 ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾವೇರಿ ಹೋರಾಟದ ಸ್ಥಳಕ್ಕೆ ಹಸಿರು ಶಾಲು ಹಾಕಿಕೊಂಡು ಸಿಎಂ ಸಿದ್ದರಾಮಯ್ಯ ಆಗಮಿಸಿ, ಪ್ರತಿಭಟನಾನಿರತರ ಜೊತೆ ಮಾತನಾಡಿದ್ದಾರೆ.
ಸಿಎಂ ಸಿದ್ದರಾಮಯ್ಯಗೆ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ಶಾಸಕರು, ಮುಖಂಡರು ಸಾಥ್ ನೀಡಿದ್ದಾರೆ.

ಈ ಸಂದರ್ಭ ರೈತನಾಯಕಿ ಸುನಂದಾ ಜಯರಾಂ ಮಾತನಾಡಿ, ಕಾವೇರಿ ನೀರಿನ ಸಮಸ್ಯೆ ಇಂದಿನದ್ದಲ್ಲ. ಕಾವೇರಿಗಾಗಿ ನಾವೂ ಹಿಂದಿನಿಂದಲೂ ಹೋರಾಟ ಮಾಡ್ತಿದ್ದೇವೆ. ಸರ್ಕಾರವು ಕಾನೂನು ಅಥವಾ ಮಾತುಕತೆ ಮೂಲಕ ಬಗೆಹರಿಸಿಕೊಂಡಿದೆ. ಆದರೆ ಈ ಬಾರಿ ಕಾವೇರಿ ಸಮಸ್ಯೆ ಗಂಭೀರವಾಗಿದೆ. ನಮ್ಮ ಹಕ್ಕನ್ನ ಕಸಿದುಕೊಳ್ಳುವ ಕೆಲಸವನ್ನ ತಮಿಳುನಾಡು ಸರ್ಕಾರ ಮಾಡ್ತಿದೆ. ಈ ಸಂಧರ್ಭದಲ್ಲಿ ನಮ್ಮ ಸಿಎಂರ ಮಾತನ್ನ ನಾವು ನಿರೀಕ್ಷಿಸುತ್ತಿದ್ದೇವೆ ಎಂದರು.
ನಮ್ಮದು ಮನವಿ ಅಲ್ಲ, ನಾವೂ ಒತ್ತಾಯ ಮಾಡ್ತಿದ್ದೇವೆ. ನೀರನ್ನ ರಕ್ಷಣೆ ಮಾಡಬೇಕಾದುದ್ದು ನಮ್ಮ ಸರ್ಕಾರದ ಹೊಣೆ. ನಮಗೆ ಹೇಗೆ ನ್ಯಾಯ ಕೊಡುಸ್ತೀರಾ ಕೊಡಿ. ಈ ಕೂಡಲೇ ತುರ್ತಾಗಿ ಜಂಟಿ ಅಧಿವೇಶನ ಕರೆಯಿರಿ. ಹಿಂದೆಯೇ ಜಂಟಿ ಅಧಿವೇಶನ ಕರೆದಿದ್ದರೇ ನಾವೂ ಉಸಿರಾಡಬಹುದಿತ್ತು ಎಂದು ತಿಳಿಸಿದರು.
ಒತ್ತಾಯಗಳು
* ಕಾವೇರಿ ಕೊಳ್ಳಕ್ಕೆ ಶಾಶ್ವತ ಪರಿಹಾರ.
*ತಮಿಳುನಾಡಿಗೆ ಹರಿಸುತ್ತಿರುವ ನೀರನ್ನ ತಕ್ಷಣ ನಿಲ್ಲಿಸಬೇಕು.
* ಕಾವೇರಿಗಾಗಿ ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿಯನ್ನ ಸಾರ್ವಜನಿಕರ ಮುಂದಿಡಬೇಕು.
*ಕಾವೇರಿ ನಿಯಂತ್ರಣ ಮಂಡಳಿ, ಪ್ರಾಧಿಕಾರದ ಆದೇಶದ ಮುಂದೆ ಸಂಕಷ್ಟದ ಪರಿಸ್ಥಿತಿ ತಿಳಿಸಿ, ಸಮರ್ಥವಾದ ವಾದ ಮಂಡಿಸಬೇಕು.
*ರೈತರ ಪಂಪ್ ಸೆಟ್ ಗಳಿಗೆ ಹಗಲಲ್ಲಿ ನಿರಂತರ 10 ಗಂಟೆ ವಿದ್ಯುತ್ ಪೂರೈಕೆ ಮಾಡಬೇಕು.
*ಮೈಷುಗರ್ ಕಾರ್ಖಾನೆ ಪುನಶ್ಚೇತನಕ್ಕಾಗಿ ಅಧಿಕಾರಿಗಳನ್ನ ಬದಲಿಸಿ, ನಿರ್ಲಕ್ಷ್ಯಿತ ಎಂಡಿಯನ್ನ ಬದಲಿಸಿ, ಬೇರೆಯರನ್ನ ನೇಮಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.