ಚಾಮರಾಜನಗರ: ಮೈಸೂರು ಮಹಾರಾಜ ಜಯ ಚಾಮರಾಜ ಒಡೆಯರ್ ಕಲೆ ,ಸಾಹಿತ್ಯ, ಸಂಗೀತ ಕ್ಷೇತ್ರಕ್ಕೆ ಕೊಡುಗೆ ನೀಡಿದವರು. ಭಾರತದ ಏಕತೆಗಾಗಿ ಮೈಸೂರು ಸಂಸ್ಥಾನವನ್ನು ವಿಲೀನಗೊಳಿಸುವ ಕಾರ್ಯಕ್ಕೆ ಮುಂದಾದ ಭಾರತೀಯ ಅರಸರಲ್ಲಿ ಮೊದಲಿಗರು ಎಂದು ಗಾಯಕರಾದ ಮಾಂಬಳ್ಳಿ ಅರುಣ್ ಕುಮಾರ್ ತಿಳಿಸಿದರು.
ಅವರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ ಮೈಸೂರು ಮಹಾರಾಜ ಶ್ರೀ ಜಯಚಾಮರಾಜ ಒಡೆಯರ್ ಜಯಂತಿ ಹಾಗು ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಮಾಂಬಳ್ಳಿ ಗೊಗ್ಗಯ್ಯ , ಶಿಕ್ಷಣದ ಆನವಾಡಿ ಸಾವುಕಯ್ಹ, ಚಾಮರಾಜನಗರದ ಹೊನ್ನಯ್ಯ ರವರ ಕೊಡುಗೆಯ ಬಗ್ಗೆ ಮಾತನಾಡಿ ಸರ್ವರ ಒಳಿತಿಗೆ ಪ್ರೋತ್ಸಾಹ ನೀಡಿದ ಮಹಾನ್ ವ್ಯಕ್ತಿ.
ವಿವಿಧ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸದವರು ಒಡೆಯರ್ ಎಂದು ತಿಳಿಸಿ, ಚಾಮರಾಜನಗರ ಜಿಲ್ಲೆಯ ಜಮೀನ್ದಾರರು ಆಗಿದ್ದ ಮಾಂಬಳ್ಳಿ ಗೊಗ್ಗಯ್ಯ ಕೈಗಾರಿಕೆ ಬೆಳವಣಿಗೆಗಾಗಿ ವಿವಿಧ ಯಂತ್ರಗಳನ್ನು ತರಿಸುವ ಮೂಲಕ ಪ್ರೋತ್ಸಾಹ ನೀಡಿದವರು. ಹಾಗೆಯೇ ಹಾನವಾಡಿ ಸಾವುಕಯ್ಯ ಮಹಾರಾಜರಿಂದ ಶಿಕ್ಷಣದ ಪ್ರಗತಿಗೆ ಮನವಿ ನೀಡಿ ಶಾಲೆ ಪ್ರಾರಂಭವಾಗಲು ಶ್ರಮಿಸಿದರು. ಕಲೆ ಕ್ಷೇತ್ರಕ್ಕೆ ಚಾಮರಾಜನಗರದ ಕೊಂಬಿನ ಹೊನ್ನಯ್ಯ ರವರು ಜಾನಪದವನ್ನು ಸಂರಕ್ಷಿಸಿ ಕೀರ್ತಿ ತಂದವರು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಅಧ್ಯಕ್ಷರಾದ ಶ್ರೀನಿವಾಸ ಗೌಡರವರು ಮಾತನಾಡಿ ಜಯ ಚಾಮರಾಜ ಒಡೆಯರ್ ರವರ ಕೊಡುಗೆ ಅಪಾರವಾದದ್ದು. ಮೈಸೂರು ಮತ್ತು ಚಾಮರಾಜನಗರ ಮೈಸೂರು ಸಂಸ್ಥಾನದ ಆಶ್ರಯದಲ್ಲಿ ಬೆಳೆದ ನಗರಗಳು ಜನರ ಸಾಂಸ್ಕೃತಿಕ, ಧಾರ್ಮಿಕ, ರಾಜಕೀಯ, ಆರ್ಥಿಕ, ನೀರಾವರಿ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಒಡೆಯರ ಆಡಳಿತ ಕಾರಣವೆಂದು ಹಾಗಾಗಿ ಅವರನ್ನು ದೇವರೆಂದೇ ನಂಬಿಕೆ ನಮ್ಮ ಜನರದ್ದು ಆಗಿದೆ ಎಂದರು.
ಬರಹಗಾರ ಎಸ್ ಲಕ್ಷ್ಮೀನರಸಿಂಹ ಮಾತನಾಡಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅತ್ಯುತ್ತಮ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಜಿಲ್ಲೆಯ ಬೆಳವಣಿಗೆಗೆ ತಮ್ಮದೇ ಆದ ಸಾಧನೆ ಮಾಡಿದ ಅನೇಕ ಮಹನೀಯರನ್ನು ಸ್ಮರಿಸುವ ಕಾರ್ಯಕ್ರಮ ರೂಪಿಸಿರುವುದು ಬಹಳ ಒಳ್ಳೆಯದೆಂದು ತಿಳಿಸಿದರು.

ನೂರಾರು ವರ್ಷಗಳಿಂದ ಚಾಮರಾಜನಗರದ ಅಭಿವೃದ್ಧಿಗೆ ಶ್ರಮಿಸಿ ಕೀರ್ತಿ ತಂದಿರುವ ಸಾಧಕರನ್ನು ಪ್ರತಿ ವಾರದ ಸಭೆಯಲ್ಲಿ ಸ್ಮರಿಸುವ ಕಾರ್ಯಕ್ರಮ ಆಗಲಿ. ಗಮಕ ,ಸಾಹಿತ್ಯ ,ಸಂಸ್ಕೃತಿ ನಾಟಕ, ರಂಗಭೂಮಿ ,ಜನಪದ, ರಾಜಕೀಯ,.ಕೃಷಿ, ಕೈಗಾರಿಕೆ , ಯುವಕರ ಕ್ಷೇತ್ರಗಳಲ್ಲಿ ತಮ್ಮ ಸಾಧನೆ ಮಾಡಿರುವ ವ್ಯಕ್ತಿಗಳನ್ನು ಗೌರವಿಸಿ, ತಿಳಿಸುವ ಕಾರ್ಯ ಮಾಡುವುದು ನಮ್ಮ ಜವಾಬ್ದಾರಿಯೂ ಹೌದು .ಆ ಕೆಲಸವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಋಗ್ವೇದಿ ರವರು ನೆರವೇರಿಸುತ್ತಿರುವುದು ಹೆಮ್ಮೆಯಾಗಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಸುರೇಶ್ ಎನ್ ಋಗ್ವೇದಿ ಮಾತನಾಡಿ ಮೈಸೂರು ಸಂಸ್ಥಾನದ ಜಯ ಚಾಮರಾಜ ಒಡೆಯರ್ ಅವರು ಕನ್ನಡ ನಾಡು ನುಡಿ ಸಂಸ್ಕೃತಿಯ ಅಭಿಮಾನಿಯಾಗಿದ್ದವರು. ಕನ್ನಡದ ಸಂಸ್ಕೃತಿಗೆ ತಮ್ಮ ಸಂಸ್ಥಾನದಲ್ಲಿ ಅಪಾರ ಕೊಡುಗೆ ನೀಡಿದ ಜಯ ಚಾಮರಾಜ ಒಡೆಯರ್1973 ನವೆಂಬರ್ 1 ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ರಾಜ್ಯ ಎಂದು ನಾಮಕರಣವಾದಾಗ ಹಂಪೆಯಲ್ಲಿ ಜರಗಿದ ಸಮಾರಂಭದಲ್ಲಿ ಅತ್ಯಂತ ಸಂತೋಷದಿಂದ ಜ್ಯೋತಿ ಬೆಳಗಿಸಿದ ಮಹಾನ್ ವ್ಯಕ್ತಿ .

ಮೈಸೂರು ರಾಜ್ಯದ ಪ್ರಥಮ ರಾಜ್ಯಪಾಲರಾಗಿ ನೇಮಕಗೊಂಡು ನಂತರ ಮದ್ರಾಸಿನ ಪ್ರಮುಖ ರಾಗಿ ಅಧಿಕಾರ ನಿರ್ವಹಿಸಿದವರು. ಕರ್ನಾಟಕ ಏಕೀಕರಣದ ಬಗ್ಗೆ ಅಪಾರ ಒಲವು ಹೊಂದಿದ್ದ ಮಹಾರಾಜರ ಕೊಡುಗೆ ಕನ್ನಡ ಸಾಹಿತ್ಯ ಪರಿಷತ್ತು ಅವರನ್ನು ಸದಾ ಕಾಲ ನೆನೆಯುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ರವಿಚಂದ್ರ ಪ್ರಸಾದ್ ರವರು ಸರ್ವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಕೆ ಆರಾಧ್ಯ ,ಶಿವಲಿಂಗ ಮೂರ್ತಿ, ಸುರೇಶ್ ಗೌಡ ,ತಾಂಡವಮೂರ್ತಿ, ಬೊಮ್ಮಾಯಿ , ಶಿವಣ್ಣ,ಗೋವಿಂದರಾಜು, ನಾಗರಾಜು ಉಪಸ್ಥಿತರಿದ್ದರು.